Skip to main content
ವಿಡಿಯೋ
1/3
spirituality

ಕಡಲೆಕಾಯಿ ಪರಿಷೆ: ಇಂದು ಚಾಲನೆ..!

By Sushmitha R
ಕಡಲೆಕಾಯಿ ಪರಿಷೆ: ಇಂದು ಚಾಲನೆ..!

ಬಸವನಗುಡಿಯ ಐತಿಹಾಸಿಕ ಕಡಲೆಕಾಯಿ ಪರಿಷೆಯು ಇಂದು, ಕಾರ್ತಿಕ ಮಾಸದ ಕೊನೆಯ ಸೋಮವಾರದಂದು, ಸಂಭ್ರಮದಿಂದ ಆರಂಭಗೊಳ್ಳಲಿದೆ.

ಬೆಂಗಳೂರು: ಬಸವನಗುಡಿಯ ಐತಿಹಾಸಿಕ ಕಡಲೆಕಾಯಿ ಪರಿಷೆಯು ಇಂದು, ಕಾರ್ತಿಕ ಮಾಸದ ಕೊನೆಯ ಸೋಮವಾರದಂದು, ಸಂಭ್ರಮದಿಂದ ಆರಂಭಗೊಳ್ಳಲಿದೆ. ದೊಡ್ಡ ಬಸವಣ್ಣನ ದೇವಾಲಯದಲ್ಲಿ ಕಡಲೆಕಾಯಿಯ ಅಭಿಷೇಕದ ಮೂಲಕ ಈ ಪ್ರಸಿದ್ಧ ಜಾತ್ರೆಗೆ ವಿಧ್ಯುಕ್ತ ಚಾಲನೆ ದೊರೆಯಲಿದೆ.

ಪ್ರತಿ ವರ್ಷ ಎರಡು ದಿನ ನಡೆಯುತ್ತಿದ್ದ ಈ ಜಾತ್ರೆಯನ್ನು ಇದೇ ಮೊದಲ ಬಾರಿಗೆ ಐದು ದಿನಗಳ ಕಾಲ ವಿಸ್ತರಿಸಲಾಗಿದೆ. ಇದರಿಂದ ಲಕ್ಷಾಂತರ ಪ್ರವಾಸಿಗರು ಮತ್ತು ಭಕ್ತಾದಿಗಳು ಆಗಮಿಸುವ ನಿರೀಕ್ಷೆಯಿದೆ. Naixa Women's BSY Viscose Embroidered Straight Kurta with Pant and Dupatta Sets (Available in Plus Size) (NX-628)

ಈಗಾಗಲೇ ನೆರೆಯ ರಾಜ್ಯಗಳಿಂದಲೂ ಹಲವಾರು ವ್ಯಾಪಾರಿಗಳು ಬಸವನಗುಡಿಗೆ ಆಗಮಿಸಿದ್ದು, ರಸ್ತೆಯ ಇಕ್ಕೆಲಗಳಲ್ಲಿ 'ಬಡವರ ಬಾದಾಮಿ' ಎಂದೇ ಖ್ಯಾತಿ ಪಡೆದ ಕಡಲೆಕಾಯಿಯ ರಾಶಿಗಳು ಕಂಗೊಳಿಸುತ್ತಿವೆ.

ಪರಿಷೆಗಾಗಿ ಬಸವನಗುಡಿಯ ಬೀದಿಗಳು ದೀಪಾಲಂಕಾರದಿಂದ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದ್ದು, ಸಂಪೂರ್ಣ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ದೇವಸ್ಥಾನಗಳಾದ ದೊಡ್ಡ ಗಣಪತಿ ಮತ್ತು ದೊಡ್ಡ ಬಸವಣ್ಣನ ಗುಡಿಗಳಿಗೆ ನಿನ್ನೆಯಿಂದಲೇ ಭಕ್ತರ ಭೇಟಿ ಹೆಚ್ಚಿದೆ.ಇದನ್ನು ಓದಿ: ಪಾಸ್‌ಪೋರ್ಟ್ #ಗ್ಲೋಬ್‌ಟ್ರಾಟರ್ ಅಭಿಯಾನಕ್ಕೆ ಯಶಸ್ಸು

ಈ ವರ್ಷದ ಪರಿಷೆಯ ಮತ್ತೊಂದು ವಿಶೇಷವೆಂದರೆ, ಇದನ್ನು ಪ್ಲಾಸ್ಟಿಕ್ ಮುಕ್ತ ಜಾತ್ರೆಯನ್ನಾಗಿ ಆಯೋಜಿಸಲಾಗಿದೆ. ವ್ಯಾಪಾರಿಗಳು ಮತ್ತು ಸಾರ್ವಜನಿಕರು ಪರಿಸರ ಸ್ನೇಹಿ ವಸ್ತುಗಳನ್ನು ಬಳಸುವುದನ್ನು ಖಚಿತಪಡಿಸಿಕೊಳ್ಳಲು ಆಡಳಿತ ಮಂಡಳಿ ಕ್ರಮಗಳನ್ನು ಕೈಗೊಂಡಿದೆ. ಈ ಐದು ದಿನಗಳ ಕಾಲ ಬಸವನಗುಡಿಯು ಕಡಲೆಕಾಯಿಯ ಸುವಾಸನೆ ಮತ್ತು ಜನಸಂದಣಿಯಿಂದ ತುಂಬಿ ಹಬ್ಬದ ಕಳೆಯನ್ನು ಹೆಚ್ಚಿಸಲಿದೆ.ಇದನ್ನು ಓದಿ: ಅಲ್-ಫಲಾಹ್ ವಿಶ್ವವಿದ್ಯಾಲಯದ ಸದಸ್ಯತ್ವ ಅಮಾನತು - ದೆಹಲಿ ಸ್ಪೋಟ ಎಫೆಕ್ಟ್