Skip to main content
ವಿಡಿಯೋ
1/3
globalnews

ಬಾಂಗ್ಲಾದ ವಿದ್ಯಾರ್ಥಿ ದಂಗೆ ಪ್ರಕರಣ: ಶೇಖ್‌ ಹಸೀನಾಗೆ ಶಾಕ್‌ - ಪದಚ್ಯುತ ಪ್ರಧಾನಿಗೆ ಮರಣದಂಡನೆ!

By Shravanthi R
ಬಾಂಗ್ಲಾದ ವಿದ್ಯಾರ್ಥಿ ದಂಗೆ ಪ್ರಕರಣ: ಶೇಖ್‌ ಹಸೀನಾಗೆ ಶಾಕ್‌ -  ಪದಚ್ಯುತ ಪ್ರಧಾನಿಗೆ ಮರಣದಂಡನೆ!

ಮಾನವೀಯತೆ ವಿರುದ್ದ ಅಪರಾಧದ ಹಿನ್ನಲೆಯಲ್ಲಿ, ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್‌ ಹಸೀನಾ ಅವರನ್ನು ದೋಷಿಯೆಂದು ಪರಿಗಣಿಸಿ, ಇಂದು ಬಾಂಗ್ಲಾದೇಶದ ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ (ಐಸಿಟಿ-ಬಿಡಿ) ಮರಣದಂಡನೆ ಆದೇಶ ಹೊರಡಿಸಿದೆ.

ಬಾಂಗ್ಲಾದೇಶದಲ್ಲಿ 2024 ರಲ್ಲಿ ವಿದ್ಯಾರ್ಥಿಗಳ ಮುಷ್ಕರವನ್ನು ನಿಯಂತ್ರಿಸಲು ಮಾರಣಾಂತಿಕ ದಾಳಿ ನಡೆಸಿದ ಆರೋಪಕ್ಕೆ ಸಂಬಂಧಪಟ್ಟ ಪ್ರಕರಣದಲ್ಲಿ 78 ವರ್ಷದ ಮಾಜಿ ಬಾಂಗ್ಲಾ ಪ್ರಧಾನಿ ಶೇಖ್‌ ಹಸೀನಾ ಅವರಿಗೆ ಇಂದು ಅಲ್ಲಿನ ಅಪರಾಧ ನ್ಯಾಯಮಂಡಳಿಯು ಮರಣದಂಡನೆ ಶಿಕ್ಷೆ ವಿಧಿಸಿದ ತೀರ್ಪು ಪ್ರಕಟಿಸಿದೆ. 

ಅವರನ್ನೊಳಗೊಂಡು, ಮಾಜಿ ಗೃಹ ಸಚಿವ ಅಸಾದುಜ್ಜಾಮಾನ್‌ ಖಾನ್‌ ಕಮಲ್‌ ಹಾಗೂ ಮಾಜಿ ಐಜಿ‍‍‍‍ಪಿ ಚೌಧರಿ ಅಬ್ದುಲ್ಲಾ ಅಲ್‌– ಮುಮುನ್‌ ಅವರ ವಿರುದ್ಧ ಹಲವು ಪ್ರಕರಣಗಳನ್ನು ದಾಖಲಿಸಲಾಗಿತ್ತು. ನ್ಯಾಯಮಂಡಳಿಯು 54 ಸಾಕ್ಷ್ಯಗಳನ್ನು ಪರಿಶೀಲಿಸಿ, ವಿಚಾರಣೆ ಪೂರ್ಣಗೊಳಿಸಿದ್ದು, ಶೇಖ್ ಹಸೀನಾ ವಿರುದ್ಧ ಗೈರುಹಾಜರಿಯಲ್ಲಿ ವಿಚಾರಣೆ ನಡೆಸಲಾಗಿತ್ತು ಎನ್ನಲಾಗಿದೆ. Redmi Note 14 5G (Mystique White, 6GB RAM 128GB Storage) | Global Debut MTK Dimensity 7025 Ultra | 2100 nits Segment Brightest 120Hz AMOLED | 50MP Sony LYT 600 OIS+EIS Triple Camera

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗವು ತಿಳಿಸುವ ಹಾಗೆ ಹಸೀನಾ ನೇತೃತ್ವದ ಸರ್ಕಾರದಲ್ಲಿ ಪ್ರತಿಭಟನಾಕಾರರ ಮೇಲೆ ಭದ್ರತಾ ಕ್ರಮಗಳನ್ನು ಕೈಗೊಳ್ಳಲು ಆದೇಶವನ್ನು ಹೊರಡಿಸಿದ ಪರಿಣಾಮ 1,400 ಜನರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇದಕ್ಕೂ ಮುನ್ನ ಅನೇಕ ಅಹಿತಕರ ಘಟನೆಗಳು ಹಾಗೂ ಗಲಭೆಗಳು ನಡೆಯದಂತೆ ಬಿಗಿಭದ್ರತೆ ಕೈಗೊಳ್ಳಲಾಗಿತ್ತಾದರೂ, ಹಿಂಸಾತ್ಮಕ ಕೃತ್ಯಗಳು ಕಂಡುಬಂದ ವಿರುದ್ಧ ಕಂಡಲ್ಲಿ ಗುಂಡು ಹಾರಿಸುವ ಆದೇಶವನ್ನೂ ಹೊರಡಿಸಲಾಗಿದೆ.

ತಮ್ಮ ಅಧಿಕಾರವನ್ನು ಉಳಿಸಿಕೊಳ್ಳುವ ಪ್ರಯತ್ನದಿಂದ ಹಸೀನಾ ಮತ್ತು ಅವರ ಸರ್ಕಾರ ಪ್ರತಿಭಟನಾಕಾರರ ವಿರುದ್ಧ ವ್ಯವಸ್ಥಿತವಾಗಿ ಮಾರಕ ಬಲಪ್ರಯೋಗ ಮಾಡಿ ಸಾಮೂಹಿಕವಾಗಿ ಜನರನ್ನು ಕೊಲ್ಲಲಾಗಿದೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ತನಿಖಾಧಿಕಾರಿಗಳು ಹೇಳಿದ್ದಾರೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಶೇಖ್‌ ಹಸೀನಾ ತಮ್ಮ ಅಧಿಕಾರದಿಂದ ಕೆಳಗಿಳಿಯುವ ಪರಿಸ್ಥಿತಿ ಎದುರಾಗಿತ್ತು. ಹಾಗಾಗಿ ಅವರು ಪಲಾಯನ ಕೂಡ ಮಾಡಿದ್ದರು. ಇದನ್ನೂ ಓದಿ: ಬ್ಯಾಂಕುಗಳ ವಿಲೀನಕ್ಕೆ SBI ಬೆಂಬಲ: ದೇಶದ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಮತ್ತೊಂದು ಅಲೆ!?