ಗಂಡನ ಮನೆಯವರ ನಿರಂತರ ಕಿರುಕುಳದಿಂದ ನೊಂದು ಮೈಸೂರು ಮೂಲದ ಮಹಾದೇವಿ ಎಂಬಾಕೆ ತನ್ನ ಪುಟ್ಟ ಕಂದನೊಂದಿಗೆ ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ಘಟನೆ ವರದಿಯಾಗಿದೆ. ಸಾವಿಗೆ ಮುನ್ನ ಮಹಿಳೆಯು ಸೆಲ್ಫಿ ವೀಡಿಯೊ ಮಾಡಿ, ತಮ್ಮ ನೋವಿನ ಕಥೆಯನ್ನು ಹೇಳಿಕೊಂಡು ತಮ್ಮ ಪ್ರಾಣ ಕಳೆದುಕೊಳ್ಳುವುದಾಗಿ ತಿಳಿಸಿದ್ದಾರೆ.
ವಿಡಿಯೋದಲ್ಲಿ ನೋವು ತೋಡಿಕೊಂಡ ಸಂತ್ರಸ್ತೆ -
ಕುಮಾರ್ ಎಂಭಾತನನ್ನು ಮೂರು ವರ್ಷದ ಹಿಂದೆ ಮದುವೆಯಾಗಿದ್ದ ಮಹಾದೇವಿ ಎಂಬ ಮಹಿಳೆ ತಮ್ಮ ದಾಂಪತ್ಯ ಜೀವನ ಹಾಗೂ ಗಂಡನ ಮನೆಯವರ ಕಿರುಕುಳದಿಂದ ಈ ಕಠಿಣ ನಿರ್ಧಾರಕ್ಕೆ ಬಂದಿದ್ದಾರೆ. ಆತ್ಮಹತ್ಯೆಗೂ ಮುನ್ನ ಅವರು ಮಾಡಿರುವ ವೀಡಿಯೊದಲ್ಲಿ "ನಾನು ಇರುವುದು ತೊಂದರೆ, ನನ್ನ ಚಾರಿತ್ರ್ಯ ಸರಿಯಿಲ್ಲ," ಎಂದು ಗಂಡನ ಮನೆಯವರು ಕೆಟ್ಟ ಪದಗಳಿಂದ ನಿಂದಿಸಿ, ಮಾನಸಿಕ ಹಿಂಸೆ ನೀಡಿದ್ದಾರೆ.
"ನನ್ನ ಮನೆಯವರಿಗೂ ಬೆದರಿಕೆ ಹಾಕಲಾಗಿದೆ," "ಆತ್ಮಹತ್ಯೆ ಮಾಡಿಕೊಳ್ಳುವುದೇ ನನಗೆ ದಾರಿ" ಎಂದು ಅವರು ನೋವು ವ್ಯಕ್ತಪಡಿಸಿದ್ದಾರೆ. ಈ ನಿರಂತರ ಕಿರುಕುಳದಿಂದಾಗಿ ಬೇಸತ್ತು ತಮ್ಮ ಪುಟ್ಟ ಮಗುವಿನ ಜೊತೆಗೆ ನದಿಗೆ ಹಾರಿ ಮೃತರಾಗಿದ್ದಾರೆಂದು ತಿಳಿಸಲಾಗಿದೆ. ಮಹಿಳೆಯು ಮಗುವನ್ನು ತಮ್ಮ ಕಂಕುಳಲ್ಲಿ ಇಟ್ಟುಕೊಂಡು ಈ ವೀಡಿಯೊವನ್ನು ರೆಕಾರ್ಡ್ ಮಾಡಿ, ನಂತರ ಇಬ್ಬರೂ ನದಿಗೆ ಹಾರಿ ಪ್ರಾಣತ್ಯಾಗ ಮಾಡಿರುವ ಮನಕಲಕುವ ಘಟನೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. Amazon Brand - Solimo Silicone Shockproof Crystal Clear Back Cover Case for Redmi Note 14 5G | 360 Degree Protection | Protective Design | Transparent Back Cover for Redmi Note 14 5G
ನಿನ್ನೆ (ಸೋಮವಾರ) ತಾಯಿ ಮತ್ತು ಮಗುವಿನ ಮೃತದೇಹಗಳು ಪತ್ತೆಯಾಗಿವೆ ಎನ್ನಲಾಗಿದೆ. ಮೃತಳ ತವರು ಮನೆಯವರ ದೂರಿನ ಮೇರೆಗೆ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆ ಹಾಗೂ ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ವರದಿ ತಿಳಿಸಿದೆ. ಇದನ್ನೂ ಓದಿ: ದೆಹಲಿ ಸ್ಫೋಟ: 'ವೈದ್ಯ ಉಗ್ರ' ಡಾ. ಉಮರ್ ಸ್ಪೋಟಕ್ಕೂ ಮುನ್ನ ವಿಡಿಯೋ; ಆತ್ಮಾಹುತಿ ಸಂಚಿನ ಕುರಿತು ಎನ್‌ಐಎ ತನಿಖೆ ಚುರುಕು!