Skip to main content
ವಿಡಿಯೋ
1/3
metro

Heart Transplantation: ಮತ್ತೊಮ್ಮೆ ಮೆಟ್ರೋಗೆ ಆಭಾರಿ; 15 ನಿಮಿಷದಲ್ಲಿ ರಾಗಿಗುಡ್ಡದಿಂದ ಬೊಮ್ಮಸಂದ್ರಕ್ಕೆ ಅಂಗಾಂಗ ರವಾನೆ!

By Shravanthi R
Heart Transplantation: ಮತ್ತೊಮ್ಮೆ ಮೆಟ್ರೋಗೆ ಆಭಾರಿ; 15 ನಿಮಿಷದಲ್ಲಿ ರಾಗಿಗುಡ್ಡದಿಂದ ಬೊಮ್ಮಸಂದ್ರಕ್ಕೆ ಅಂಗಾಂಗ ರವಾನೆ!

ನಗರದಲ್ಲಿರುವ ಜನಸಂಚಾರ ದಟ್ಟಣೆ ನಡುವೆ ಅಂಗಾಂಗ ಕಸಿ ಹಾಗೂ ವೈದ್ಯಕೀಯ ತುರ್ತು ಚಿಕಿತ್ಸೆಗೆ ಮೆಟ್ರೋ ಸಹಾಯಕಾರಿಯಾಗಿ ಪರಿಣಮಿಸಿರುವುದಕ್ಕೆ ಮಾದರಿಯಾಗಿ ಹೃದಯ ಸಾಗಾಟವನ್ನು ಯಶಸ್ವಿಯಾಗಿ ನಡೆಸಲಾಗಿದೆ.

ಬೆಂಗಳೂರು: ಬೆಂಗಳೂರಿನ ಟ್ರಾಫಿಕ್ ದಟ್ಟಣೆಯ ಮಧ್ಯೆ ಅಂಗಾಂಗ ರವಾನೆಗೆ ಮೆಟ್ರೋ ರೈಲು ಆಪತ್ಬಾಂಧವನಾಗಿ ಕಾರ್ಯನಿರ್ವಹಿಸಿದ್ದು, ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಹೃದಯವನ್ನು ಯಶಸ್ವಿಯಾಗಿ ಸಾಗಿಸುವ ಮೂಲಕ ಆರೋಗ್ಯ ಕ್ಷೇತ್ರದಲ್ಲಿಯೂ ದೊಡ್ಡ ಸಹಕಾರಿ ಪಾತ್ರವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ಸತತ ಐದನೇ ಬಾರಿಗೆ ಆರೋಗ್ಯ ಸಿಬ್ಬಂದಿಯಿಂದ ಅಂಗಾಂಗ ರವಾನೆಯು ಯಶಸ್ವಿಯಾಗಿದೆ ಎನ್ನಲಾಗಿದೆ. ರಾಗಿಗುಡ್ಡ ಮೆಟ್ರೋ ನಿಲ್ದಾಣದಿಂದ ಬೊಮ್ಮಸಂದ್ರ ಮೆಟ್ರೋ ನಿಲ್ದಾಣದವರೆಗೆ ಯಶಸ್ವಿಯಾಗಿ ಸಾಗಿಸಲಾಗಿದೆ. ಮೆಟ್ರೋ ನೆರವಿನೊಂದಿಗೆ ಆಸ್ಟರ್ (Aster) ಆಸ್ಪತ್ರೆಯಿಂದ ನಾರಾಯಣ ಹೃದಯಾಲಯಕ್ಕೆ ಹೃದಯವನ್ನು ಕೇವಲ 15 ನಿಮಿಷಗಳಲ್ಲಿ ರವಾನಿಸಲಾಯಿತು ಎನ್ನಲಾಗಿದೆ. Redmi 13 5G Prime Edition, Orchid Pink, 8GB+128GB | India Debut SD 4 Gen 2 AE | 108MP Pro Grade Camera | 6.79in Largest Display in Segment

ಇತ್ತೀಚಿನ ಅವಧಿಯಲ್ಲಿ ಈ ರೀತಿ ಮೆಟ್ರೋ ರೈಲಿನ ಮೂಲಕ ಹೃದಯ ಅಥವಾ ಇತರ ಸೂಕ್ಷ್ಮ ಅಂಗಾಂಗಗಳನ್ನು ಸಾಗಣೆ ಮಾಡಿರುವ ಸುದ್ದಿ ವರದಿಯಾಗಿದೆ. ತುರ್ತು ಅಂಗಾಂಗ ಸಾಗಾಟದಲ್ಲಿ ಬೆಂಗಳೂರು ಮೆಟ್ರೋ (BMRCL) ವಹಿಸುತ್ತಿರುವ ಪಾತ್ರಕ್ಕೆ ವೈದ್ಯಕೀಯ ಮತ್ತು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ₹14 ಕೋಟಿ ಮೌಲ್ಯದ ಹೈಡ್ರೋ ಗಾಂಜಾ ವಶ: 18 ದಿನಗಳಲ್ಲಿ 10 ಆರೋಪಿಗಳ ಬಂಧನ!