Skip to main content
ವಿಡಿಯೋ
1/3
general

ಕೋಲ್ಕತ್ತಾದಲ್ಲಿ ಭೂಕಂಪನದ ಮಾರ್ದನಿ: ಬಾಂಗ್ಲಾ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ನಡುಕ!

By Shravanthi R
ಕೋಲ್ಕತ್ತಾದಲ್ಲಿ ಭೂಕಂಪನದ ಮಾರ್ದನಿ: ಬಾಂಗ್ಲಾ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ನಡುಕ!

ಬಾಂಗ್ಲಾದೇಶದ ರಾಜಧಾನಿ ಢಾಕಾ ಬಳಿ ಉಂಟಾದ ಭೂಕಂಪನದ 5.5 ತೀವ್ರತೆಯಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರಬಲ ಭೂಕಂಪನದ ಅನುಭವ ಉಂಟಾಗಿದೆ ಎನ್ನಲಾಗಿದೆ.

ಬಾಂಗ್ಲಾದೇಶದ  ರಾಜಧಾನಿ ಢಾಕಾದಿಂದ ಸುಮಾರು 50 ಕಿ.ಮೀ ದೂರದ ನರಸಿಂಗಡಿ ಪ್ರದೇಶದಲ್ಲಿ ಇಂದು ಬೆಳಿಗ್ಗೆ ಹತ್ತು ಗಂಟೆಯ ಸುಮಾರಿಗೆ 5.5 ತೀವ್ರತೆಯ ಭೂಕಂಪ ಸಂಭವಿಸಿದೆ., ಈ ಕಾರಣ, ಕೋಲ್ಕತ್ತಾ, ಪಶ್ಚಿಮ ಬಂಗಾಳದ ಹಲವು ಭಾಗಗಳು ಮತ್ತು ಈಶಾನ್ಯ ಭಾರತದ ವಿವಿಧ ಪ್ರದೇಶಗಳಲ್ಲಿ ಭೂಮಿ ಕಂಪಿಸುವ ಭಾರಿ ಎಚ್ಚರಿಕೆ ನೀಡಿದೆ. 

ಯುಎಸ್ ಜಿಯಾಲಜಿಕಲ್ ಸರ್ವೇ (USGS) ಪ್ರಕಾರ, ಭೂಕಂಪದ ಆಳ 10 ಕಿ.ಮೀ ಆಗಿದ್ದು, ಈ ಕುರಿತು ಮುಂಜಾಗ್ರತಾ ಕ್ರಮಕ್ಕೆ ಸೂಚಿಸಲಾಗಿದೆ ಎನ್ನಲಾಗಿದೆ. ಈ ಹಿನ್ನಲೆಯಾಗಿ, ಕೋಲ್ಕತ್ತಾ, ಬಿಹಾರ್, ಅಗರ್ತಲಾ, ಗುವಾಹಟಿ ಮತ್ತು ಉತ್ತರ-ಆಗ್ನೇಯ ರಾಜ್ಯಗಳು ಭೂಕಂಪನದ ಪ್ರಭಾವಿತ ಪ್ರದೇಶಗಳು ಎಂದು ತಿಳಿದುಬಂದಿದೆ. Noise Buds Trance in-Ear Truly Wireless Earbuds with 45H of Playtime, Low Latency(up to 40 ms), Instacharge(10 min=200 min), BT v5.3(Snow White)

ಪ್ರಸ್ತುತವಾಗಿ ಯಾವುದೇ ಸಾವು- ನೋವುಗಳು ಅಥವಾ ದೊಡ್ಡ ಮಟ್ಟದ ನಷ್ಟ ಸಂಭವಿಸಿಲ್ಲ ಎನ್ನಲಾಗಿದೆ. ಅಲ್ಲಿನ ನಿವಾಸಿಗಳು ಭೀತರಾಗಿರುವ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ ಎಂದು ವರದಿ ತಿಳಿಸಿದೆ. ಇದನ್ನೂ ಓದಿ: ಸಿಎಂ ಪತ್ನಿ ಆಸ್ಪತ್ರೆಗೆ ದಾಖಲು - ದೆಹಲಿಯಿಂದ ಆಗಮಿಸಿ ಆಸ್ಪತ್ರೆಗೆ ತೆರಳಿ ಪತ್ನಿಯ ಆರೋಗ್ಯ ವಿಚಾರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ!