ಅಹಮದಾಬಾದ್: ಖ್ಯಾತ ಉದ್ಯಮಿ ಶ್ರೀ ಗೌತಮ್ ಅದಾನಿ ಜಿ ಅವರ ಕನಸಿನ ಕೂಸಾದ ಗೌರವಾನ್ವಿತ ಇಂಡಾಲಜಿ ಉಪಕ್ರಮದ ಅಡಿಯಲ್ಲಿ, ಅರುಣ್ ಯೋಗಿರಾಜ್ ಅವರಿಗೆ 'ಭಾರತೀಯ ಸಂಸ್ಕೃತಿ ಕಲಾ ಪುರಸ್ಕಾರ'ಕ್ಕೆ ಭಾಜನರಾಗುವ ಸೌಭಾಗ್ಯ ಲಭಿಸಿದೆ. ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಶ್ರೀ ಗೌತಮ್ ಅದಾನಿ ಸ್ವತಃ ಈ ಪುರಸ್ಕಾರವನ್ನು ಪ್ರದಾನ ಮಾಡಿದರು.
ಭಾರತೀಯ ಸಂಸ್ಕೃತಿ ಮತ್ತು ಕಲೆಯ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ ಈ ಪ್ರತಿಷ್ಠಿತ ಪುರಸ್ಕಾರವನ್ನು ನೀಡಲಾಗಿದೆ. ಈ ಮಹತ್ವದ ಮನ್ನಣೆಗಾಗಿ ನಾನು ಅಪಾರವಾದ ಗೌರವ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅರುಣ್, "ಶ್ರೀ ಗೌತಮ್ ಅದಾನಿ ಜಿ ಅವರು ಭಾರತದ ಶ್ರೀಮಂತ ಇತಿಹಾಸ ಮತ್ತು ಸಂಸ್ಕೃತಿಯ ಅಧ್ಯಯನ ಹಾಗೂ ಸಂರಕ್ಷಣೆಗೆ ಮೀಸಲಾಗಿರುವ ಇಂಡಾಲಜಿ ಉಪಕ್ರಮವು ಅತ್ಯಂತ ಶ್ಲಾಘನೀಯವಾಗಿದೆ. ಇಂತಹ ಶ್ರೇಷ್ಠ ವೇದಿಕೆಯಿಂದ ಈ ಪುರಸ್ಕಾರವನ್ನು ಸ್ವೀಕರಿಸುವುದು ನನ್ನ ಮುಂದಿನ ಕಾರ್ಯಕ್ಕೆ ಮತ್ತಷ್ಟು ಪ್ರೇರಣೆ ನೀಡಿದೆ. ಭಾರತೀಯ ಸಂಸ್ಕೃತಿಯ ಸೇವೆಗೆ ಮತ್ತಷ್ಟು ಶ್ರಮಿಸಲು ನಾನು ಸದಾ ಸಿದ್ಧನಿರುತ್ತೇನೆ," ಎಂದು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಅದಾನಿ ಸಮೂಹದ ಹಿರಿಯ ಅಧಿಕಾರಿಗಳು, ಇಂಡಾಲಜಿ ಕ್ಷೇತ್ರದ ಗಣ್ಯರು ಮತ್ತು ಹಲವು ಕಲಾಕಾರರು ಉಪಸ್ಥಿತರಿದ್ದರು. ಈ ಪುರಸ್ಕಾರವು ಕಲೆಯ ಉಳಿವಿಗೆ ಹಾಗೂ ಪ್ರೋತ್ಸಾಹಕ್ಕೆ ಗೌತಮ್ ಅದಾನಿ ಅವರ ಬದ್ಧತೆಯನ್ನು ಮತ್ತೊಮ್ಮೆ ಎತ್ತಿ ತೋರಿಸುತ್ತದೆ.