ನಂದಮೂರಿ ಬಾಲಕೃಷ್ಣ ಅಭಿನಯದ ‘ಅಖಂಡ 2’ ಟ್ರೈಲರ್ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಚಿಕ್ಕಬಳ್ಳಾಪುರದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಟ್ರೈಲರ್ ಬಿಡುಗಡೆ ಆಗಿದ್ದು, ಕಿಚ್ಚ ಸುದೀಪ್ ಮತ್ತು ಶಿವರಾಜ್ ಕುಮಾರ್ ಸೇರಿದಂತೆ ಹಲವಾರು ಗಣ್ಯರು ಹಾಜರಾಗಿ ತಂಡಕ್ಕೆ ಶುಭ ಹಾರೈಸಿದರು. ಬೋಯಪತಿ ಶ್ರೀನು ನಿರ್ದೇಶನದ ಈ ಚಿತ್ರದ ಟ್ರೈಲರ್ ಆರಂಭದಲ್ಲೇ ಬಲವಾದ ಡೈಲಾಗ್‌ಗಳು, ಮಸಾಲಾ ಸನ್ನಿವೇಶಗಳು ಮತ್ತು ಬಾಲಯ್ಯ ಅವರ ಭರ್ಜರಿ ತೋಟವನ್ನೊಳಗೊಂಡಿದೆ.
ಈ ಬಾರಿ ಬಾಲಕೃಷ್ಣ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಟ್ರೈಲರ್‌ನಲ್ಲಿ ಅವರ ತೀವ್ರವಾದ ಮಾತು, ದೈವಿಕ ಕೋಪ ಮತ್ತು ಶಕ್ತಿಯುತ ಹಾವಭಾವಗಳು ಪ್ರೇಕ್ಷಕರ ಗಮನ ಸೆಳೆದಿವೆ. “ಕಷ್ಟ ಬಂದರೆ ದೇವರು ಬರ್ತಾನೆ ಅಂದುಕೊಳ್ಳುವ ಜನ, ಕಷ್ಟ ಬಂದಾಗ ದೇವರು ಬರೋದಿಲ್ಲ ಅನ್ನೋದು ತಿಳ್ಕೊಳ್ಳಬೇಕಿದೆ” ಎಂಬ ಡೈಲಾಗ್ ಟ್ರೈಲರ್‌ಗೆ ಮತ್ತಷ್ಟು ತೂಕ ನೀಡಿದೆ. ಅಖಂಡ ಚಿತ್ರದ ಮುಂದುವರಿದ ಭಾಗವಾಗಿ ಬರುತ್ತಿರುವ ಈ ಸಿನಿಮಾ ಈಗಾಗಲೇ ನಿರೀಕ್ಷೆಗಳನ್ನು ಗಗನಕ್ಕೇರಿಸಿದೆ.GUESS Analog White Dial Men's Watch-U0291G4M
ಭಾರೀ ಆಕ್ಷನ್ ಸನ್ನಿವೇಶಗಳು, ವೇಗದ ಹಿನ್ನೆಲೆ ಸಂಗೀತ ಮತ್ತು ಬೋಯಪತಿ–ಬಾಲಕೃಷ್ಣ ಕಾಂಬಿನೇಷನ್ ಮತ್ತೊಮ್ಮೆ ಸಿನಿಮಾ ಅಭಿಮಾನಿಗಳಲ್ಲಿ ದೊಡ್ಡ ನಿರೀಕ್ಷೆ ಹುಟ್ಟಿಸಿದೆ. ಟ್ರೈಲರ್‌ನಲ್ಲಿ ಬಾಲಯ್ಯ ಅವರ ಅಪ್ಪಟ ಮಾಸ್ ಲುಕ್ ಮತ್ತು ಅವರ ಡೈಲಾಗ್ ಡೆಲಿವರಿ ಪ್ರೇಕ್ಷಕರ ಮನಸ್ಸಿನಲ್ಲಿ ಭಾರೀ ಕುತೂಹಲ ಮೂಡಿಸಿದೆ. ಇನ್ನೊಂದು ವಿಶೇಷವೆಂದರೆ ‘ಭಜರಂಗಿ ಭಾಯಿಜಾನ್’ ಸಿನಿಮಾದಲ್ಲಿ ಮಿಂಚಿದ್ದ ಬಾಲ ನಟಿ ಹರ್ಷಾಲಿ ಮಲ್ಹೋತ್ರಾ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಇದನ್ನು ಓದಿ:ಬಿಗ್ ಬಾಸ್ ಮನೆಯಲ್ಲಿ ಹೊಸ ಗಲಾಟೆ: ಅಶ್ವಿನಿ ಆರೋಪಕ್ಕೆ ಸುದೀಪ್ ಸ್ಪಷ್ಟ ಮಾತಿನ ಹೊಡೆತ..!ಇಲ್ಲಿದೆ ಮಾಹಿತಿ
ಡಿಸೆಂಬರ್ 5 ರಂದು ವಿಶ್ವಾದ್ಯಂತ ಸಿನಿಮಾ ಬಿಡುಗಡೆಯಾಗಲಿದ್ದು, ಈಗಾಗಲೇ ಟ್ರೈಲರ್ ಹುಟ್ಟುಹಾಕಿರುವ ಸಂಚಲನ ಚಿತ್ರದ ಬಾಕ್ಸ್ ಆಫೀಸ್ ಪಾಲಿಗೆ ಒಳ್ಳೆಯ ಸೂಚನೆಯಾಗಿದೆ. ಮಾಸ್ ಅಕ್ಷನ್ ಸಿನಿಮಾಗಳ ಅಭಿಮಾನಿಗಳು ‘ಅಖಂಡ 2’ಗಾಗಿ ಉತ್ಸಾಹದಿಂದ ಕಾದಿದ್ದಾರೆ.