Skip to main content
ವಿಡಿಯೋ
1/3
crime

ಇಂದು ಚಿತ್ರದುರ್ಗದ ಮುರುಘಾಶ್ರೀ ವಿರುದ್ಧದ ಪೋಕ್ಸೋ (POCSO) ಪ್ರಕರಣ ತೀರ್ಪು

By Bhavana Gowda
ಇಂದು ಚಿತ್ರದುರ್ಗದ ಮುರುಘಾಶ್ರೀ ವಿರುದ್ಧದ ಪೋಕ್ಸೋ (POCSO) ಪ್ರಕರಣ ತೀರ್ಪು

ಈ ಪೋಕ್ಸೋ ಪ್ರಕರಣವು ಆಗಸ್ಟ್ 26, 2022 ರಂದು ಮೈಸೂರಿನ ನಜರಾಬಾದ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.ಈ ಪ್ರಕರಣದಲ್ಲಿ ಒಟ್ಟು ಐವರ ವಿರುದ್ಧ ದೂರು ದಾಖಲಾಗಿದೆ.

ಚಿತ್ರದುರ್ಗ: ರಾಜ್ಯದಲ್ಲಿ ಬಹಳಷ್ಟು ಸಂಚಲನ ಉಂಟುಮಾಡಿದ್ದ ಚಿತ್ರದುರ್ಗದ ಮುರುಘಾ ಮಠದ ಮಾಜಿ ಪೀಠಾಧ್ಯಕ್ಷರಾದ ಮುರುಘಾ ಶ್ರೀ (ಶಿವಮೂರ್ತಿ ಮುರುಘಾ ಶರಣರು) ಅವರ ವಿರುದ್ಧ ದಾಖಲಾಗಿದ್ದ ಪೋಕ್ಸೋ ಪ್ರಕರಣದ ಮೊದಲ ಕೇಸಿನ ತೀರ್ಪು ಇಂದು (ನವೆಂಬರ್ 26, 2025 ರಂದು) ಹೊರಬೀಳಲಿದೆ.

ಘಟನೆಯ ಪ್ರಮುಖ ವಿವರ

ಈ ಪೋಕ್ಸೋ ಪ್ರಕರಣವು ಆಗಸ್ಟ್ 26, 2022 ರಂದು ಮೈಸೂರಿನ ನಜರಾಬಾದ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.ಈ ಪ್ರಕರಣದಲ್ಲಿ ಒಟ್ಟು ಐವರ ವಿರುದ್ಧ ದೂರು ದಾಖಲಾಗಿದೆ.

* ಎ1: ಮುರುಘಾ ಶ್ರೀ (ಶಿವಮೂರ್ತಿ ಮುರುಘಾ ಶರಣರು)

* ಎ2: ಲೇಡಿ ವಾರ್ಡನ್ ರಶ್ಮಿ

* ಎ3: ಬಸವಾದಿತ್ಯ

* ಎ4: ಮ್ಯಾನೇಜರ್ ಪರಮಶಿವಯ್ಯ

* ಎ5: ವಕೀಲ ಗಂಗಾಧರಯ್ಯ

ಮುರುಘಾ ಮಠದ ಹಾಸ್ಟೆಲ್‌ನಲ್ಲಿ ವಾಸವಿದ್ದ ಇಬ್ಬರು ಅಪ್ರಾಪ್ತ ವಿದ್ಯಾರ್ಥಿನಿಯರು ಈ ದೂರು ದಾಖಲಿಸಿದ್ದರು. ಸುಮಾರು 3 ವರ್ಷಗಳ ಕಾಲ ವಿಚಾರಣೆ ಎದುರಿಸಿದ ಈ ಪ್ರಕರಣದ ತೀರ್ಪು ಇಂದು ಚಿತ್ರದುರ್ಗದ 2ನೇ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಕಟವಾಗಲಿದೆ.

ಈ ತೀರ್ಪಿನಿಂದಾಗಿ ಮುರುಘಾಶ್ರೀ ಅವರ ಬಿಡುಗಡೆಯಾಗಲಿದೆಯೇ ಅಥವಾ ಬಂಧನ ಮುಂದುವರೆಯಲಿದೆಯೇ ಎಂಬ ಆತಂಕ ಮುರುಘಾ ಶ್ರೀ ಅವರ ಬೆಂಬಲಿಗರು ಮತ್ತು ಭಕ್ತರಲ್ಲಿ ಉಂಟಾಗಿದೆ. ಅದೇ ರೀತಿ, ಸಂತ್ರಸ್ತೆಯರ ಕುಟುಂಬದಲ್ಲೂ ಆತಂಕ ಮನೆ ಮಾಡಿದೆ. ಎಲ್ಲರ ಚಿತ್ತವು ನ್ಯಾಯಾಲಯದ ತೀರ್ಪಿನತ್ತ ನೆಟ್ಟಿದೆ.