ಉಡುಪಿ: ಪ್ರಧಾನಿ ನರೇಂದ್ರ ಮೋದಿ ಇಂದು ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಲಿದ್ದಾರೆ. ಮಠದಲ್ಲಿ ದರ್ಶನ ಪಡೆದ ನಂತರ ಸುವರ್ಣ ತೀರ್ಥ ಮಂಟಪ-ಸುವರ್ಣ ಕಿಂಡಿ ಲೋಕಾರ್ಪಣೆ ಮಾಡಿ, ಬಳಿಕ ಲಕ್ಷ ಕಂಠ ಭಗವದ್ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ಕಾರ್ಯಕ್ರಮಕ್ಕಾಗಿ 25 ಸಾವಿರ ಜನ ಕುಳಿತುಕೊಳ್ಳಬಹುದಾದ ಹವಾನಿಯಂತ್ರಿತ ಬೃಹತ್ ಪೆಂಡಾಲ್ ಸಿದ್ಧಗೊಳಿಸಲಾಗಿದೆ. ವಿಐಪಿ, ವಿವಿಐಪಿ ಹಾಗೂ ಸಾರ್ವಜನಿಕರಿಗೆ ಪ್ರತ್ಯೇಕ ಗೀತಾ ಪಠಣ ವ್ಯವಸ್ಥೆ ಇದೆ.Navlik Women’s Casual Kurta with Pant & Dupatta – Stylish Ethnic Wear
ಕುಡಿಯುವ ನೀರನ್ನು ಮಠದಿಂದಲೇ ಸರಬರಾಜು ಮಾಡಲಾಗುವುದರಿಂದ ನೀರಿನ ಬಾಟಲಿ, ಬ್ಯಾಗ್, ತಿಂಡಿ ತಿನಿಸುಗಳನ್ನು ಒಯ್ಯುವಂತಿಲ್ಲ. ಕಾರ್ಯಕ್ರಮದ ನಂತರ ಸಾವಿರಾರು ಜನರಿಗೆ ಅನ್ನದಾನದ ವ್ಯವಸ್ಥೆಯಿದೆ.
ಕೊನೆಯ ಕ್ಷಣದ ಬದಲಾವಣೆ ಪ್ರಕಾರ ಪ್ರಧಾನಿ ಸುಮಾರು 40 ನಿಮಿಷ ಮುಂಚಿತವಾಗಿ ಆಗಮಿಸಲಿದ್ದಾರೆ. ಬೆಳಗ್ಗೆ 11ರಿಂದ 11:30ರವರೆಗೆ ರೋಡ್ ಶೋ ನಡೆಸಿ, ಕೃಷ್ಣ ಮಠದಲ್ಲಿ ದರ್ಶನ, ಲೋಕಾರ್ಪಣೆ, ಗೀತಾ ಪಠಣ ಕಾರ್ಯಕ್ರಮ ಪೂರೈಸಿ ಮಧ್ಯಾಹ್ನ 1 ಗಂಟೆಗೆ ಉಡುಪಿಯಿಂದ ಹೊರಡಲಿದ್ದಾರೆ ಎಂದು ಜಿಲ್ಲಾ ಪೊಲೀಸ್ ಆಯುಕ್ತ ಹರಿರಾಮ್ ಶಂಕರ್ ತಿಳಿಸಿದ್ದಾರೆ.ಇದನ್ನು ಓದಿ: ಪ್ರಧಾನಿ ನರೇಂದ್ರ ಮೋದಿ ಕೈಯಿಂದ ಸುವರ್ಣ ತೀರ್ಥ ಮಂಟಪ-ಸುವರ್ಣ ಕಿಂಡಿ ಲೋಕಾರ್ಪಣೆ..!
ದೆಹಲಿಯಿಂದ ಹೊರಡುವ ಮುನ್ನ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಪ್ರಧಾನಿ, ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಪಾಲ್ಗೊಳ್ಳುವುದು ಗೌರವದ ಸಂಗತಿ. ಶ್ರೀ ಮಧ್ವಾಚಾರ್ಯರ ಪ್ರೇರಣೆಯ ಈ ಮಠವು ಸಾಂಸ್ಕೃತಿಕ ಮತ್ತು ಸಮಾಜ ಸೇವೆಯಲ್ಲಿ ವಿಶಿಷ್ಟ ಸ್ಥಾನ ಹೊಂದಿದೆ” ಎಂದಿದ್ದಾರೆ.ಇದನ್ನು ಓದಿ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುವ “ಸರ್ವಧರ್ಮ ಮತ್ತು ಸಾಹಿತ್ಯ ಸಮ್ಮೇಳನ” ಕಾರ್ಯಕ್ರಮಕ್ಕೆ ಪಾದಯಾತ್ರೆ ಮೂಲಕ ತೆರಳುತ್ತಿರುವ ಶ್ರೀ ತನ್ವೀರ್ ಅಹಮದ್