‘ಡ್ಯೂಡ್’ ಸಿನಿಮಾದ ರಿಸೆಪ್ಶನ್ ಸೀನ್‌ನಲ್ಲಿ ಬಳಸಲಾದ ಕರುತ್ತ ಮಚ್ಚನ್ ಹಾಡು ಬಿಡುಗಡೆ ನಂತರವೇ ಸೋಷಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗಿತ್ತು. ಆದರೆ ಈಗ ಮದ್ರಾಸ್ ಹೈಕೋರ್ಟ್ ಈ ಹಾಡನ್ನು ಸಿನಿಮಾದಿಂದ ತೆಗೆದು ಹಾಕುವಂತೆ ಆದೇಶಿಸಿದೆ.Calvin Klein Ck Flex Qtz Multifunction Tonneau Dial Men's Watch
ಸಂಗೀತ ಸಂಯೋಜಕ ಇಳಯರಾಜ ಅವರು ಚಿತ್ರನಿರ್ಮಾಪಕರ ವಿರುದ್ಧ ಸಲ್ಲಿಸಿದ್ದ ದೂರು ಆಧರಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಅವರ ಹೇಳಿಕೆಯ ಪ್ರಕಾರ, ‘ಪುದು ನೆಲ್ಲು ಪುದು ನಾತು’ ಚಿತ್ರದ ಕರುತ್ತ ಮಚ್ಚನ್ ಹಾಡು ಮತ್ತು ‘ಪನಕಾರನ್’ ಸಿನಿಮಾದ 100 ವರುಷಂ ಇಂದ ಮಪ್ಪಿಲೈಕ್ಕು ಹಾಡುಗಳನ್ನು ಡ್ಯೂಡ್ ಸಿನಿಮಾದಲ್ಲಿ ತಮ್ಮ ಅನುಮತಿಯಿಲ್ಲದೆ ಬಳಸಲಾಗಿದೆ.ದೇಶಪ್ರೇಮ ಚಿತ್ರವಾದ ‘120 ಬಹದ್ಧೂರ್’ ಸಿನಿಮಾಕ್ಕೆ ದೆಹಲಿ ಸರ್ಕಾರದಿಂದ ವಿನಾಯಿತಿ ಗಿಫ್ಟ್..! ಇಲ್ಲಿದೆ ಸಂಪೂರ್ಣ ಮಾಹಿತಿ
ಇಳಯರಾಜ ಅವರು ಈ ಹಾಡುಗಳನ್ನು ಯಾವುದೇ ರೂಪದಲ್ಲೂ ಸಿನಿಮಾದಲ್ಲಿ ಬಳಸಬಾರದು ಎಂದು ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ, ಹೈಕೋರ್ಟ್ ಹಾಡುಗಳನ್ನು ಸಿನಿಮಾದಿಂದ ತೆಗೆದುಹಾಕುವಂತೆ ಸ್ಪಷ್ಟ ನಿರ್ದೇಶನ ನೀಡಿದೆ.
ಈ ಘಟನೆ ಚಿತ್ರತಂಡಕ್ಕೆ ದೊಡ್ಡ ಹೊಡೆತವಾಗಿದ್ದು, ಈಗ ಸಿನಿರಸಿಕರು ಚಿತ್ರದ ಹೊಸ ಆವೃತ್ತಿಯಲ್ಲಿ ಯಾವ ಬದಲಾವಣೆ ಆಗುತ್ತದೆ ಎಂಬ ಕುತೂಹಲದಲ್ಲಿದ್ದಾರೆ.