Skip to main content
ವಿಡಿಯೋ
1/3
general

ದೃಷ್ಟಿಕೋನ ಬದಲಾದರೆ ಪರಿವರ್ತನೆ ಸಾಧ್ಯ - ನಿವೃತ್ತ ಪ್ರಾಧ್ಯಾಪಕ ಆರ್‌.ಕೆ ಹುಡಗಿ

By Shravanthi R
ದೃಷ್ಟಿಕೋನ ಬದಲಾದರೆ ಪರಿವರ್ತನೆ ಸಾಧ್ಯ - ನಿವೃತ್ತ ಪ್ರಾಧ್ಯಾಪಕ ಆರ್‌.ಕೆ ಹುಡಗಿ

ಕಲಬುರಗಿಯಲ್ಲಿ ನ. 28 ರಂದು “ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ: ಸವಾಲುಗಳು ಹಾಗೂ ಅವಕಾಶಗಳು” ವಿಚಾರ ಮಂಥನ ಕಾರ್ಯಕ್ರಮ ನಡೆಸಲಾಯಿತು. ಇದೇ ವೇಳೆ ಶಿಕ್ಷಣದ ಪರಿಕಲ್ಪನೆ ಹಾಗೂ ಶಿಕ್ಷಕರ ಕುರಿತಾಗಿ ನಿವೃತ್ತ ಪ್ರಾಧ್ಯಾಪಕ ಆರ್‌.ಕೆ ಹುಡಗಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಗುರುವಾರ ಹಮ್ಮಿಕೊಂಡಿದ್ದ ವಿಚಾರ ಮಂಥನ ಕಾರ್ಯಕ್ರಮದಲ್ಲಿ “ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ: ಸವಾಲುಗಳು ಹಾಗೂ ಅವಕಾಶಗಳು” ವಿಷಯವಾಗಿ ಚರ್ಚೆ ನಡೆಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಿವೃತ್ತ ಪ್ರಾಧ್ಯಾಪಕ ಆರ್‌.ಕೆ ಹುಡಗಿ ಅವರು ಪ್ರಸ್ತುತ ಶಿಕ್ಷಣದ ಕುರಿತಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಶರಣಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯ, ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯ ಹಾಗೂ ಬೆಂಗಳೂರಿನ ಅಜೀಂ ಪ್ರೇಮಜಿ ವಿಶ್ವವಿದ್ಯಾಲಯ ಸಹಯೋಗದಲ್ಲಿ ನಗರದ ಶರಣಬಸವ ವಿ.ವಿ ಆವರಣದ ದೊಡ್ಡಪ್ಪ ಅಪ್ಪ ಸಭಾಮಂಟಪದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದರು.

“ಯಾವುದೇ ದೇಶದ ವ್ಯವಸ್ಥೆಯನ್ನು ಹಾಳುಗೆಡವಲು ಬಾಂಬ್‌ ಹಾಕುವ ಅಗತ್ಯವಿಲ್ಲ. ಆದರೆ, ಆ ದೇಶದ ಶೈಕ್ಷಣಿಕ ವ್ಯವಸ್ಥೆ ಹಾಳಾದರೆ, ಆ ದೇಶ ಸ್ವಯಂ ಅವನತಿ ಹೊಂದುತ್ತದೆ. ಸದ್ಯ ನಮ್ಮ ದೇಶದಲ್ಲೂ ಅದೇ ಸ್ಥಿತಿಯಿದೆ. ನಮ್ಮ ದೃಷ್ಟಿಕೋನ ಬದಲಾಯಿಸಿಕೊಂಡರೆ ಪರಿವರ್ತನೆ ಸಾಧ್ಯ” ಎಂದು ಅವರು ಅಭಿಪ್ರಾಯಪಟ್ಟರು.

ದೇಶದಲ್ಲಿ ಸತ್ಪ್ರಜೆಗಳನ್ನು ನಿರ್ಮಿಸುವಲ್ಲಿ ಎಲ್ಲರಿಗಿಂತಲೂ ಶಿಕ್ಷಕರ ಹೊಣೆ ಹೆಚ್ಚಾಗಿದೆ. ದೇಶದ ಪ್ರಾಥಮಿಕ, ಪ್ರೌಢ ಹಾಗೂ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಹಾಳು ಮಾಡಲಾಗುತ್ತಿದ್ದು, ಒಂದು ವರ್ಗಕ್ಕೆ ಮಾತ್ರವೇ ಉತ್ತಮ ಶಿಕ್ಷಣ ದೊರೆಯುತ್ತಿದೆ. ಉಳಿದವರಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ ಎಂದರು. Daniel Hechter Paris Bercy Collection Modern Multi Functional Watch for Men with Square Dial and Silicon Band-DHM1001

ಅನುವಾದ ಸಂಪದ - ಉಚಿತ ಡಿಜಿಟಲ್‌ ಅನುವಾದ ಕಣಜ ಕಾರ್ಯಾಗಾರವನ್ನು ಒಂದು ದಿನದ ಮಟ್ಟಿಗೆ ಹಮ್ಮಿಕೊಳ್ಳಲಾಯಿತು. ಇದುವೆ ಇಂಗ್ಲೀಷ್‌ನಿಂದ ಭಾರತೀಯ ಭಾಷೆಗಳಿಗೆ ಅನುವಾದಿಸಲಾದ ಶೈಕ್ಷಣಿಕ ಸಂಪನ್ಮೂಲಗಳ ಉಚಿತ ಹಾಗೂ ಮುಕ್ತ ಲಭ್ಯತೆಯ ಕಣಜವಾಗಿತ್ತು. ಇದೇ ವೇಳೆ ವಿದ್ಯಾರ್ಥಿ ಶಿಕ್ಷಕರಿಂದ ಅಭಿಪ್ರಾಯ ಮಂಡನೆ ನಡೆಯಿತು. ಕಾರ್ಯಾಕ್ರಮ ಸಮಾರೋಪದಲ್ಲಿ ಪ್ರಮಾಣಪತ್ರ ವಿತರಣೆ ಮಾಡಲಾಯಿತು. ಇದನ್ನೂ ಓದಿ:ಕುರ್ಚಿ ಕಾದಾಟಕ್ಕೆ ಭಾನುವಾರ ಬ್ರೇಕ್: ನವೆಂಬರ್ 30ರಂದು ದೆಹಲಿಯಲ್ಲಿ ಮುಂದಿನ ಸುತ್ತು..!