Skip to main content
ವಿಡಿಯೋ
1/3
general

ಉದ್ಯೋಗ ವಿಧಾತ - ಉದ್ಯೋಗಾವಕಾಶಗಳಿಗಾಗಿ ತೆರೆದ ಬಾಗಿಲು - ಇಲ್ಲಿದೆ ವಿವಿಧ ಇಂಟರ್ನ್‌ಷಿಪ್‌ ಡಿಟೇಲ್ಸ್‌

By Shravanthi R
ಉದ್ಯೋಗ ವಿಧಾತ - ಉದ್ಯೋಗಾವಕಾಶಗಳಿಗಾಗಿ ತೆರೆದ ಬಾಗಿಲು - ಇಲ್ಲಿದೆ ವಿವಿಧ ಇಂಟರ್ನ್‌ಷಿಪ್‌ ಡಿಟೇಲ್ಸ್‌

ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶವನ್ನು ನೀಡಲಾಗಿದ್ದು, ವರ್ಕ್‌ ಫ್ರಂ ಹೋಮ್‌ ಸೇರಿದಂತೆ ವಿವಿಧ ವಲಯಗಳಲ್ಲಿ ಇಂಟರ್ನ್‌ಷಿಪ್‌ಗಾಗಿ ನೇಮಿಸಿಕೊಳ್ಳಲಾಗುತ್ತಿದೆ.

ನಿರೀಕ್ಷಿತ ಉದ್ಯೋಗಕ್ಕಾಗಿ ಕಾಯುತ್ತಾ ಮನೆಯಲ್ಲೇ ಕೂರುವ ಬದಲು ಈಗಿರುವ ಟ್ರೆಂಡ್‌ನಂತೆ ವರ್ಕ್‌ ಫ್ರಂ ಹೋಮ್‌ ನಿಂದ ಲಾಭವಿದೆ. ಹೀಗಿದ್ದಾಗ, ಇರುವ ಕಾಲಾವಕಾಶದಲ್ಲೇ ತಯಾರಿ ನಡೆಸಿ, ಕೌಶಲ್ಯಗಳನ್ನು ವೃದ್ದಿಗೊಳಿಸಿಕೊಳ್ಳುವುದಕ್ಕಾಗಿ ವಿವಿಧ ವಲಯಗಳಲ್ಲಿ ಇಂಟರ್ನ್‌ಷಿಪ್‌ ಮಾಡಿಕೊಳ್ಳುವುದು ಪರ್ಯಾಯ ಮಾರ್ಗವಾಗಲಿದೆ.

  1. ವರ್ಕ್‌ ಫ್ರಂ ಹೋಮ್‌ ಇಂಟರ್ನ್‌ಷಿಪ್‌ - ಸೇಲ್ಸ್‌ ಅಂಡ್‌ ಔಟ್‌ರೀಚ್‌

ಸೇಲ್ಸ್‌ ಅಂಡ್‌ ಔಟ್‌ರೀಚ್‌ - ನಯೇಪಂಖ್‌ ಫೌಂಡೇಶನ್‌ ನಿಂದ ಮನೆಯಿಂದಲೇ ಕೆಲಸ ಮಾಡುವ ಇಂಟರ್ನಿಗಳನ್ನು ನೇಮಿಸಿಕೊಳ್ಳುತ್ತಲಿದ್ದು, ಇದಕ್ಕಾಗಿ ಅರ್ಜಿ ಸಲ್ಲಿಸಲು ಡಿಸೆಂಬರ್‌ 18 ಕ್ಕೆ ಕಡೆಯ ದಿನವಾಗಿದೆ. ಸೇಲ್ಸ್‌ ಹಾಗೂ ಸಮಯ ನಿರ್ವಹಣೆ ಸೇರಿದಂತೆ ಸಾಮಾನ್ಯ ಟೆಕ್ನಿಕಲ್‌ ಕೌಶಲ್ಯಗಳನ್ನು ಉಳ್ಳ ವಿದ್ಯಾರ್ಥಿಗಳು ನೊಂದಾಯಿಸಿಕೊಳ್ಳಬಹುದಾಗಿದೆ ಎನ್ನಲಾಗಿದೆ. ಸ್ಟೈಫಂಡ್‌ - ಒಟ್ಟು ಮೊತ್ತ 1,500 - 15,000

ಲಿಂಕ್‌ ಟು ಅಪ್ಪ್ಲೈ - https://shorturl.at/bh4RM

  1. ಕಂಟೆಂಟ್‌ ರೈಟಿಂಗ್‌

ವೇರ್‌ವಿ ಕನ್ಸಲ್ಟೆನ್ಸಿ ಪ್ರೈವೇಟ್‌ ಲಿಮಿಟೆಡ್‌ನಿಂದ ಕಂಟೆಟ್‌ ರೈಟಿಂಗ್‌ ಸಾಮರ್ಥ್ಯವುಳ್ಳ ಇಂಟರ್ನಿಗಳನ್ನು ನೇಮಿಸಿಕೊಳ್ಳುತ್ತಿದ್ದು, ಈ ಬಗ್ಗೆ ಸ್ಕಿಲ್ಸ್‌ ಹಾಗೂ ಸಾಮಾನ್ಯ ಜ್ಞಾನವುಳ್ಳವರಿಗೆ ಡಿಸೆಂಬರ್‌ 19 ರ ಒಳಗಾಗಿ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಿದೆ. ಸ್ಟೈಫಂಡ್‌ - ತಿಂಗಳಿಗೆ 4,000 - 6,000

ಲಿಂಕ್‌ ಟು ಅಪ್ಪ್ಲೈ - https://shorturl.at/F4VOF

  1. ಕಮ್ಯುನಿಟಿ, ಮಾರ್ಕೆಟಿಂಗ್‌

ಎಲಿವೇಟೆಡ್‌ ಲೀಡರ್ಸ್‌ ಕ್ಲಬ್‌ ಮನೆಯಿಂದಲೇ ಮಾಡಬಲ್ಲ ಮಾರ್ಕೆಟಿಂಗ್‌, ಕಮ್ಯುನಿಟಿ ಹಾಗೂ ವೆಬಿನಾರ್‌ ಆಪರೇಷನ್ಸ್‌ ಇಂಟರ್ನಿಗಳಿಗಾಗಿ ಕರೆನೀಡಿದೆ. ಸೇಲ್ಸ್‌ ಸಪೋರ್ಟ್‌ ಹಾಗೂ ಸೋಷಿಯಲ್‌ ಮೀಡಿಯಾ ಮಾರ್ಕೆಟಿಂಗ್‌ ಬಗ್ಗೆ ಸಾಮಾನ್ಯ ಜ್ಞಾನ ಹೊಂದಿರುವವರಿಗೆ ಅವಕಾಶ ಕಲ್ಪಿಸಿದೆ. ಇದಕ್ಕಾಗಿ ಡಿಸೆಂಬರ್‌ 25 ಕ್ಕೆ ಅರ್ಜಿ ಸಲ್ಲಿಕೆಗೆ ಕಡೆಯ ದಿನವಾಗಿದೆ. ಸ್ಟೈಫಂಡ್‌ - ತಿಂಗಳಿಗೆ 4,000 - 5,000

ಲಿಂಕ್‌ ಟು ಅಪ್ಪ್ಲೈ - https://shorturl.at/qtFlz

  1. ಬೆಂಗಳೂರು ಕೇಂದ್ರಿತ ಇಂಟರ್ನ್‌ಷಿಪ್‌

ಕಾಪಿರೈಟಿಂಗ್‌ - ಪ್ಲಾಟಿನಂಆರ್‌ಎಕ್ಸ್‌.ಇನ್‌ ಕಾಪಿರೈಟಿಂಗ್‌ ಇಂಟರ್ನಿಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದು, ಬರವಣಿಗೆ ಹಾಗೂ ಸ್ಟೋರಿ ಟೆಲ್ಲಿಂಗ್‌ ಹಿತಾಸಕ್ತರು ಇದಕ್ಕಾಗಿ ಅರ್ಜಿ ಸಲ್ಲಿಸಬಹುದು. ಡಿಸೆಂಬರ್‌ 11ರ ಒಳಗೆ ಅರ್ಜಿ ಸಲ್ಲಿಸಬೇಕಿರುತ್ತದೆ. ಸ್ಟೈಫಂಡ್‌ - ತಿಂಗಳಿಗೆ 10,000 -  15,000 

ಸಂಪರ್ಕ - https://shorturl.at/T2ghg

ಮಾನವ ಸಂಪನ್ಮೂಲ ವಿಭಾಗ: ಆದಿಲಕ್ಷ್ಮೀ ಇ-ಕಾಮರ್ಸ್‌ ಪ್ರೈವೇಟ್‌ ಲಿಮಿಟೆಡ್‌, ಮಾನವ ಸಂಪನ್ಮೂಲ ವಿಭಾಗದಲ್ಲಿ ಇಂಟರ್ನಿಗಳನ್ನು ನೇಮಿಸಿಕೊಳ್ಳುತ್ತಿದ್ದು, ಇಂಗ್ಲಿಷ್‌ ಸೇರಿದಂತೆ ವಿವಿಧ ಸಾಮಾನ್ಯ ಕೌಶಲ್ಯಗಳನ್ನು ಹೊಂದಿರುವವರು ಇದಕ್ಕಾಗಿ ಅರ್ಜಿ ಸಲ್ಲಿಸಬಹುದು. ಡಿಸೆಂಬರ್‌ 12 ಕ್ಕೆ ಕೊನೆಯ ದಿನಾಂಕವನ್ನು ನಿಗದಿ ಪಡಿಸಲಾಗಿದೆ. ಸ್ಟೈಫಂಡ್‌ ತಿಂಗಳಿಗೆ - 7,500 - 10,000 ರೂ.

ಸಂಪರ್ಕ - https://shorturl.at/yrBeh

ಯುಎಕ್ಸ್‌/ಯುಎ ಡಿಸೈನ್‌ - ಬ್ಯ್ರಾಂಡ್‌ಶಾರ್ಕ್‌ ಸಂಸ್ಥೆಯು ಯುಎಕ್ಸ್‌/ಯುಎ ಡಿಸೈನ್‌ ಇಂಟರ್ನಿಗಳನ್ನು ನೇಮಿಸಿಕೊಳ್ಳಲಿದೆ. ಗ್ರಾಫಿಕ್ಸ್‌ ಬಗ್ಗೆ ಬೇಸಿಕ್ಸ್‌ ಹಾಗೂ ಯೂಸರ್‌ ಇಂಟರ್‌ಫೇಸ್‌ ಹಾಗೂ ಎಕ್ಸ್‌ಪೀರಿಯನ್ಸ್‌ ಬಗ್ಗೆ ತಿಳಿವಿರುವವರು ಇದಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಡಿಸೆಂಬರ್‌ 25ರೊಳಗೆ ಅರ್ಜಿ ಸಲ್ಲಿಸಬೇಕಿರುತ್ತದೆ. ಸ್ಟೈಫಂಡ್‌ - ತಿಂಗಳಿಗೆ 10,000 

ಸಂಪರ್ಕ - https://shorturl.at/ejXBD

ಇದನ್ನೂ ಓದಿ: ನಾನ್-ಎಸಿ ಸ್ಲೀಪರ್ ಕೋಚ್ ಪ್ರಯಾಣಿಕರಿಗೆ ಇನ್ಮುಂದೆ ಬೆಡ್‌ಶೀಟ್, ದಿಂಬು ಸೌಲಭ್ಯ!