Skip to main content
ವಿಡಿಯೋ
1/3
cinema

‘ಡೆವಿಲ್’ ಟ್ರೇಲರ್ ರೀಲಿಸ್ ಡೇಟ್ ಔಟ್: ಡಿಸೆಂಬರ್ 5ರಂದು ದರ್ಶನ್ ಧಮಾಕಾ!

By Ram Chethan
‘ಡೆವಿಲ್’ ಟ್ರೇಲರ್ ರೀಲಿಸ್ ಡೇಟ್ ಔಟ್: ಡಿಸೆಂಬರ್ 5ರಂದು ದರ್ಶನ್ ಧಮಾಕಾ!

ಚಾಲೆಜಿಂಗ್ ಸ್ಟಾರ್ ದರ್ಶನ್ ಅವರ ಬಹುನಿರೀಕ್ಷಿತ ‘ ಡೆವಿಲ್’ ಟ್ರೇಲರ್ ಡಿಸೆಂಬರ್ 5ರಂದು ಬೆಳಗ್ಗೆ 10:05ಕ್ಕೆ ಬಿಡುಗಡೆಯಾಗುತ್ತಿದೆ. ಜೈಲು ವಿವಾದದ ನಡುವೆ ಪತ್ನಿ ವಿಜಯಲಕ್ಷ್ಮಿ ಮತ್ತು ತಂಡ ಪ್ರಚಾರ ಮುನ್ನಡೆಸುತ್ತಿದ್ದು, “ನಾನ್ ಬರ್ತಿದ್ದೀನಿ ಚಿನ್ನ” ಗ್ಲಿಂಪ್ಸ್ ಈಗಲೇ ಅಭಿಮಾನಿಗಳ ಕ್ರೇಜ್ ಹೆಚ್ಚಿಸಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹುನಿರೀಕ್ಷಿತ ' ಡೆವಿಲ್' ಚಿತ್ರದ ಟ್ರೇಲರ್ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಡಿಸೆಂಬರ್ 5ರಂದು ಬೆಳಗ್ಗೆ 10:05ಕ್ಕೆ ಟ್ರೇಲರ್ ಅನಾವರಣಗೊಳ್ಳಲಿದ್ದು, ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ. ದರ್ಶನ್ ಅವರ ಅಭಿಮಾನಿಗಳಲ್ಲಿ ಈ ಸುದ್ದಿ ಭಾರೀ ಕುತೂಹಲ ಮೂಡಿಸಿದೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಕಾರಣದಿಂದ ಜೈಲಿನಲ್ಲಿರುವ ದರ್ಶನ್ ಅವರ ಅನುಪಸ್ಥಿತಿಯಲ್ಲಿ, ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಮತ್ತು ಚಿತ್ರತಂಡ ' ಡೆವಿಲ್' ಪ್ರಚಾರದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ದರ್ಶನ್ ಅವರ ಅಭಿಮಾನಿಗಳಿಗೆ ಚಿತ್ರತಂಡ ಈ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದೆ.

ಟ್ರೇಲರ್ ಅನೌನ್ಸ್‌ಮೆಂಟ್ ವಿಡಿಯೋ ಕೂಡ ಅಭಿಮಾನಿಗಳ ಗಮನ ಸೆಳೆದಿದೆ. ಈ ಗ್ಲಿಂಪ್ಸ್‌ನಲ್ಲಿ ದರ್ಶನ್ ಅವರ ಅಂಗೈ ಮಾತ್ರ ಕಾಣಿಸಿಕೊಂಡಿದ್ದು, ಹಿನ್ನೆಲೆಯಲ್ಲಿ "ನಾನ್ ಬರ್ತಿದ್ದೀನಿ ಚಿನ್ನ" ಎಂಬ ಅವರ ಧ್ವನಿ ಕೇಳಿಬರುತ್ತದೆ. ಇದು ಅಭಿಮಾನಿಗಳ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದೆ.Arayna Women's Cotton Printed Floral Straight Kurta with Palazzo Pants and Dupatta

ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ "ಡಿಸೆಂಬರ್ 5, 10.05 — ಡೆವಿಲ್ ಟ್ರೇಲರ್ ಬರ್ತಿದೆ. ಆ ಕ್ಷಣ ಬಂದಿದೆ. ಡಿಸೆಂಬರ್ 5ರಂದು ಬೆಳಗ್ಗೆ 10:05ಕ್ಕೆ ಡೆವಿಲ್‌ನ ಔರಾ ಘರ್ಜಿಸಲು ಸಿದ್ಧವಾಗಿದೆ. ನೀವು ತೋರಿಸಿರುವ ಪ್ರೀತಿ, ಪ್ರಚಾರ ಮತ್ತು ಕ್ರೇಜ್‌ಗೆ ಧನ್ಯವಾದಗಳು" ಎಂದು ಬರೆದುಕೊಂಡಿದೆ.ಇದನ್ನು ಓದಿ:ಧರ್ಮ ಬದಲಾಯಿಸುತ್ತೇನೆ ಎಂದು ಹೇಳಿದ ಪಾಕ್ ಮುಫ್ತಿ – ಐಶ್ವರ್ಯಾ ಕುರಿತ ಹೇಳಿಕೆ ವೈರಲ್

ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಅಭಿಮಾನಿಗಳು, "ನಾನ್ ಬರ್ತಾ ಇದೀನಿ ಚಿನ್ನ..", "ವೈಟಿಂಗ್ ಬಾಸ್", "ನಾವೂ ಬರ್ತೀವಿ ಬಾಸ್, ಲವ್ ಯು ಬಾಸ್" ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಹಲವರು ಲವ್, ಫೈಯರ್ ಎಮೋಜಿಗಳೊಂದಿಗೆ "ಲವ್ ಯು ಬಾಸ್", "ಜೈ ಡಿ ಸಾಸ್", "ವೈಟಿಂಗ್ ಬಾಸ್" ಎಂದು ಬರೆದಿದ್ದಾರೆ.

ದರ್ಶನ್ ಅವರ ಕೊನೆಯ ಚಿತ್ರ 'ಕಾಟೇರ' 2023ರ ಡಿಸೆಂಬರ್ 29ರಂದು ತೆರೆಕಂಡು ಸೂಪರ್ ಹಿಟ್ ಆಗಿತ್ತು. ' ಡೆವಿಲ್' ಚಿತ್ರ ಕಳೆದ ವರ್ಷವೇ ಬಿಡುಗಡೆಯಾಗಬೇಕಿತ್ತು, ಆದರೆ ರೇಣುಕಾಸ್ವಾಮಿ ಕೊಲೆ ಪ್ರಕರಣದಿಂದಾಗಿ ವಿಳಂಬವಾಗಿತ್ತು. ಇದೀಗ ಚಿತ್ರವು ಡಿಸೆಂಬರ್ 11ರಂದು ಅದ್ಧೂರಿಯಾಗಿ ತೆರೆಕಾಣಲು ಸಿದ್ಧವಾಗಿದೆ.

ಪ್ರಕಾಶ್ ವೀರ್ ನಿರ್ದೇಶನದ ಈ ಬಹುಕೋಟಿ ವೆಚ್ಚದ ಚಿತ್ರದಲ್ಲಿ ರಚನಾ ರೈ ನಾಯಕಿಯಾಗಿ ನಟಿಸಿದ್ದಾರೆ. ಅಚ್ಯುತ್ ಕುಮಾರ್, ಗಿಲ್ಲಿ ನಟ, ಮಹೇಶ್ ಮಂಜ್ರೇಕರ್, ಶೋಭಾರಾಜ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸುಧಾಕರ್ ಎಸ್.ರಾಜ್ ಛಾಯಾಗ್ರಹಣ, ಬಿ.ಅಜನೀಶ್ ಲೋಕನಾಥ್ ಸಂಗೀತ, ಮೋಹನ್ ಬಿ.ಕೆರೆ ಕಲಾ ನಿರ್ದೇಶನ, ರಾಮ್ ಲಕ್ಷ್ಮಣ್ ಸಾಹಸ ನಿರ್ದೇಶನ ಮತ್ತು ಹರೀಶ್ ಕೊಮ್ಮೆ ಸಂಕಲನ ಈ ಚಿತ್ರಕ್ಕಿದೆ.