ಸೋಮವಾರ (ಡಿ.01), ದೇಶದ ಉನ್ನತ ನ್ಯಾಯಾಲಯವಾದ ಸುಪ್ರೀಂಕೋರ್ಟ್, ದೇಶದಲ್ಲಿ ಹೆಚ್ಚುತ್ತಿರುವ ಡಿಜಿಟಲ್ ಅರೆಸ್ಟ್ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರಬಲವಾದ ಆದೇಶವನ್ನು ನೀಡಿದೆ. ದೇಶದೆಲ್ಲೆಡೆ ನಡೆದಿರುವ ಡಿಜಿಟಲ್ ಅರೆಸ್ಟ್ ಹಗರಣಗಳ ಕುರಿತು ತನಿಖೆ ಆರಂಭಿಸುವಂತೆ ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ಆದೇಶ ಹೊರಡಿಸಿದೆ.
ದೇಶದುದ್ದಗಲಕ್ಕೂ ನಡೆದಿರುವ ಈ ಪ್ರಕರಣಗಳ ವಂಚನೆ ಕುರಿತು ಮಹತ್ವದ ಆದೇಶವಿದಾಗಿದ್ದು, ತನಿಖೆಗೆ ಸಂಬಂಧಿಸಿದಂತೆ ಸಿಬಿಐಗೆ ಸಂಪೂರ್ಣ ಸ್ವಾತಂತ್ರ್ಯವಿದ್ದು, ಸಾಮಾನ್ಯವಾಗಿ ಸಿಬಿಐ ತನಿಖೆಗೆ ಸಮ್ಮತಿ ನೀಡದ ರಾಜ್ಯಗಳನ್ನೊಳಗೊಂಡಂತೆ ಸಹಾ, ತನಿಖೆ ಸಾಧ್ಯವಾಗುವಂತೆ ಈ ಪ್ರಕರಣದ ತನಿಖೆಗೆ ಒಪ್ಪಿಗೆ ನೀಡಬೇಕೆಂದು ಆದೇಶಿಸಿದೆ. Fire-Boltt Talk Bluetooth Calling Smartwatch, 1.39" TFT Display with Dual Button, Hands On Voice Assistance, 120 Sports Modes, in Built Mic & Speaker (Talk, Grey)
ಮುಖ್ಯ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠವು ಅಮಿತಸ್ ಕ್ಯೂರಿ ಅವರು ಪ್ರಸ್ತಾಪಿಸಿದ ಡಿಜಿಟಲ್ ಅರೆಸ್ಟ್, ಅರೆಕಾಲಿಕ ಉದ್ಯೋಗ ಹಾಗೂ ಹೂಡಿಕೆಗೆ ಸಂಬಂಧಿಸಿದ ಸೈಬರ್ ವಂಚನೆಗಳ ಕುರಿತಾಗಿ ಗಣನೆಗೆ ತೆಗೆದುಕೊಂಡಿತು.
ಮೊದಲಿಗೆ ಡಿಜಿಟಲ್ ಅರೆಸ್ಟ್ ವಂಚನೆ ಪ್ರಕರಣಗಳನ್ನು ಸಿಬಿಐ ಆದ್ಯತೆಯ ಮೇರೆಗೆ ನಡೆಸಬೇಕು. ಆನಂತರ ಉಳಿದ ವಂಚಿತ ಪ್ರಕರಣಗಳನ್ನು ನಂತರದ ಹಂತದಲ್ಲಿ ತನಿಖೆ ನಡೆಸಬೇಕೆಂದು ನ್ಯಾಯಾಲಯವು ಸೂಚಿಸಿದೆ ಎನ್ನಲಾಗಿದೆ. ಇದನ್ನೂ ಓದಿ: ಸಾಂಸ್ಕೃತಿಕ ಶಿಕ್ಷಣ ಹಾಗೂ ಸಾಮಾಜಿಕ ನಾಯಕತ್ವವಿರದಿದ್ದರೆ ಸಮಾಜಕ್ಕೆ ಅಪಾಯ - ಸಾಹಿತಿ ಡಾ. ರಹಮತ್ ತರೀಕೆರೆ