Skip to main content
ವಿಡಿಯೋ
1/3
cinema

ದೈವ ಅನುಕರಣೆ ವಿವಾದ: ಕ್ಷಮೆಯಾಚಿಸಿದ ನಟ ರಣವೀರ್‌ ಸಿಂಗ್! ಇದು ಕನ್ನಡಿಗರ ಗೆಲುವು?

By Ram Chethan
ದೈವ ಅನುಕರಣೆ ವಿವಾದ: ಕ್ಷಮೆಯಾಚಿಸಿದ ನಟ ರಣವೀರ್‌ ಸಿಂಗ್! ಇದು ಕನ್ನಡಿಗರ ಗೆಲುವು?

“ಕಾಂತಾರ ಚಿತ್ರದ ದೈವವನ್ನು ‘ದೆವ್ವ’ ಎಂದು ಕರೆದಿದ್ದಕ್ಕಾಗಿ ರಣವೀರ್ ಸಿಂಗ್ ವಿರುದ್ಧ ಟೀಕೆ ಹೆಚ್ಚಾಯಿತು. ವಿವಾದದ ಬಳಿಕ ನಟ ಕ್ಷಮೆಯಾಚಿಸಿ ಸಂಸ್ಕೃತಿಗೆ ಗೌರವವಿದೆ ಎಂದು ಸ್ಪಷ್ಟಪಡಿಸಿದರು.”

ನಟ ರಣವೀರ್ ಸಿಂಗ್ ಅವರು ‘ಧುರಂಧರ್’ ಚಿತ್ರದ ಪ್ರಚಾರ ಸಂದರ್ಭದಲ್ಲಿ ಮಾಡಿದ ಒಂದು ಹೇಳಿಕೆ ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಗೋವಾ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ರಿಷಬ್ ಶೆಟ್ಟಿ ಅಭಿನಯದ ‘ಕಾಂತಾರ’ ಚಿತ್ರವನ್ನು ಹೊಗಳುವಾಗ, ರಣವೀರ್ ಅವರು ‘ದೈವ’ ಅನ್ನು ‘ದೆವ್ವ’ ಎಂದು ಕರೆದಿದ್ದರು. ಜೊತೆಗೆ ದೈವದ ನಡೆ-ನುಡಿಗಳನ್ನು ಅನುಕರಿಸಲು ಯತ್ನಿಸಿದ ಕಾರಣ, ಇದು ಕನ್ನಡ ಸಂಸ್ಕೃತಿಗೆ ಅವಮಾನವೆಂದು ನೆಟ್ಟಿಗರು ತೀವ್ರ ಟೀಕೆಗಳನ್ನು ಹೊರಹಾಕಿದರು.Arayna Women's Cotton Printed Floral Straight Kurta with Palazzo Pants and Dupatta

ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಈ ನಡೆಗೆ ವಿರೋಧ ವ್ಯಕ್ತಪಡಿಸಿದರು. ರಿಷಬ್ ಶೆಟ್ಟಿ ಅಭಿನಯಿಸಿದ ಪಾತ್ರದ ಪರ ಪರವಾಗಿ ಜನರು ನಿಂತು ರಣವೀರ್‌ರನ್ನು ಜವಾಬ್ದಾರಿ ಕೇಳಿದರು. ವಿವಾದ ಹೆಚ್ಚಾಗುತ್ತಿದ್ದಂತೆ ರಣವೀರ್ ಸಿಂಗ್ ತಮ್ಮ ತಪ್ಪನ್ನು ಒಪ್ಪಿಕೊಂಡು, ಸಾರ್ವಜನಿಕವಾಗಿ ಕ್ಷಮೆಯಾಚಿಸಿದರು.ದೈವವನ್ನು ಮಿಮಿಕ್ರಿ ಮಾಡಿ ಕನ್ನಡಿಗರನ್ನು ಕೆದಕಿದ ರಣವೀರ್‌ ಸಿಂಗ್‌ನ ಸಿನಿಮಾಗೆ ಸಂಕಷ್ಟ!ಇಲ್ಲಿದೆ ಮಾಹಿತಿ

ರಣವೀರ್ ತಮ್ಮ ಕ್ಷಮಾಪಣೆಯಲ್ಲಿ, “ರಿಷಬ್ ಅವರ ಅದ್ಭುತ ಅಭಿನಯವನ್ನು ಹೊಗಳುವ ಉದ್ದೇಶ ಮಾತ್ರ ನನ್ನದು. ಯಾರದ್ದಾದರೂ ಭಾವನೆಗಳಿಗೆ ನೋವುಂಟಾಗಿದ್ದರೆ ಮನದಾಳದಿಂದ ಕ್ಷಮೆ ಕೇಳುತ್ತೇನೆ. ನಮ್ಮ ದೇಶದ ಪ್ರತಿಯೊಂದು ಸಂಸ್ಕೃತಿ ಮತ್ತು ಸಂಪ್ರದಾಯಕ್ಕೆ ನನಗೆ ಆಳವಾದ ಗೌರವವಿದೆ,” ಎಂದು ಬರೆದಿದ್ದಾರೆ.

ಈ ಕ್ಷಮೆಯಾಚನೆಯ ಮೂಲಕ ರಣವೀರ್ ಸಿಂಗ್ ವಿವಾದವನ್ನು ಶಮನಗೊಳಿಸಲು ಪ್ರಯತ್ನಿಸಿದ್ದು, ‘ಧುರಂಧರ್’ ಬಿಡುಗಡೆಗೂ ಮುನ್ನ ತಮ್ಮ ಮೇಲೆ ಹೆಚ್ಚುತ್ತಿರುವ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಯತ್ನಿಸಿದ್ದಾರೆ.