Skip to main content
ವಿಡಿಯೋ
1/3
cinema

ಸಮಂತಾ–ರಾಜ್ ವಿವಾಹ ಯಾವ ಪದ್ಧತಿಯಲ್ಲಿ ಆಯ್ತು ಗೊತ್ತಾ? ಇದರ ವಿಶೇಷತೆ ಏನು ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ

By Ram Chethan
ಸಮಂತಾ–ರಾಜ್ ವಿವಾಹ ಯಾವ ಪದ್ಧತಿಯಲ್ಲಿ ಆಯ್ತು ಗೊತ್ತಾ? ಇದರ ವಿಶೇಷತೆ ಏನು ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ

“ಸಮಂತಾ ಮತ್ತು ರಾಜ್ ನಿಧಿಮೋರು ಇಶಾ ಯೋಗ ಸೆಂಟರ್‌ನ ಲಿಂಗ ಭೈರವಿ ದೇವಾಲಯದಲ್ಲಿ ‘ಭೂತ ಶುದ್ಧಿ’ ಪದ್ಧತಿಯಲ್ಲಿ ವಿವಾಹವಾದರು. ಪಂಚಭೂತ ಆರಾಧನೆಯ ಈ ವಿಶಿಷ್ಟ ಮದುವೆಯ ವಿವರಗಳು ಇಲ್ಲಿ.”

ನಟಿ ಸಮಂತಾ ಋತ್ ಪ್ರಭು ಮತ್ತು ನಿರ್ಮಾಪಕ–ನಿರ್ದೇಶಕರಾದ ರಾಜ್ ನಿಧಿಮೋರು ಇಶಾ ಯೋಗ ಸೆಂಟರ್‌ನಲ್ಲಿ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ. ಕಳೆದ ಒಂದು ವರ್ಷದಿನಿಂದ ಇವರ ಸ್ನೇಹ ಪ್ರೀತಿಯಾಗಿ ಬೆಳೆದು ಬರುತ್ತಿದ್ದರೆಂಬ ಸುದ್ದಿ ಕೇಳಿ ಬಂದಿತ್ತು. ಈಗ ಇಬ್ಬರೂ ಕೊಯಮತ್ತೂರಿನ ಲಿಂಗ ಭೈರವಿ ದೇವಾಲಯದಲ್ಲಿ ಸರಳವಾದರೂ ವಿಶಿಷ್ಟ ರೀತಿಯ ಮದುವೆಯನ್ನು ನೆರವೇರಿಸಿಕೊಂಡಿದ್ದಾರೆ.

ಸಾಮಾನ್ಯ ವಿವಾಹ ಕ್ರಮವನ್ನು ಅನುಸರಿಸದೇ, ಇವರು ‘ಭೂತ ಶುದ್ಧಿ’ ಪದ್ಧತಿ ಮೂಲಕ ಮದುವೆಯಾಗಿರುವುದು ವಿಶೇಷ.

ಸಮಂತಾ ನಾಗ ಚೈತನ್ಯರಿಂದ ವಿಚ್ಛೇದನಗೊಂಡ ನಂತರ ಸದ್ಗುರು ಅವರ ಮಾರ್ಗದರ್ಶನದಲ್ಲಿ ಇಶಾ ಸೆಂಟರ್‌ಗೆ ಹತ್ತಿರವಾಗಿದ್ದರು. ಅವರು ಲಿಂಗ ಭೈರವಿ ದೇವಿಯ ಭಕ್ತೆಯಾಗಿದ್ದು, ಆಗಾಗ್ಗೆ ದೇವಾಲಯಕ್ಕೆ ಭೇಟಿ ನೀಡುತ್ತಿದ್ದರು. ಈ ಕಾರಣದಿಂದಲೇ ತಮ್ಮ ಜೀವನದ ಹೊಸ ಅಧ್ಯಾಯವನ್ನು ದೇವಿಯ ಸನ್ನಿಧಿಯಲ್ಲಿ ಆರಂಭಿಸಲು ಆಯ್ಕೆ ಮಾಡಿಕೊಂಡಿದ್ದಾರೆ.Safari Genius Alley Set of 3 (Cabin + Medium + Large) Trolley Bags, Hard Case Polypropylene, 4 Wheels, 360 Degree Wheeling Luggage, Suitcase for Travel, Black

‘ಭೂತ ಶುದ್ಧಿ’ ಪದ್ಧತಿ ಪಂಚಭೂತಗಳಾದ ಗಾಳಿ, ಅಗ್ನಿ, ನೀರು, ಪೃಥ್ವಿ ಮತ್ತು ಆಕಾಶದ ಆರಾಧನೆಯ ಮೇಲೆ ಆಧಾರಿತವಾಗಿದೆ. ಈ ವಿಧಾನದಲ್ಲಿ ಮಂತ್ರ ಜಪ, ಅಗ್ನಿಗೂಂಡದ ಸನ್ನಿಧಿ ಮತ್ತು ಆಧ್ಯಾತ್ಮಿಕ ಶುದ್ಧೀಕರಣದ ಮೂಲಕ ಮದುವೆ ನಡೆಯುತ್ತದೆ. ದಂಪತಿಗಳಲ್ಲಿ ಶಾಂತಿ, ಸಾಮರಸ್ಯ ಮತ್ತು ಮನಶಾಂತಿ ಹೆಚ್ಚುತ್ತದೆ ಎನ್ನುವ ನಂಬಿಕೆಯಿದೆ. ಸಮಂತಾ ಮತ್ತು ರಾಜ್ ಅವರು ಈ ಪದ್ಧತಿಯನ್ನು ಗೌರವದಿಂದ ಪಾಲಿಸಿ, ಲಿಂಗ ಭೈರವಿ ದೇವಿಯ ಮುಂದೆ ಪವಿತ್ರ ವಿಧಿಗಳನ್ನು ನೆರವೇರಿಸಿದ್ದಾರೆ.

ಪ್ರಜ್ಞೆಗೆ ಬಂದಿರುವ ಚಿತ್ರಗಳಲ್ಲಿ ಸಮಂತಾ ಮತ್ತು ರಾಜ್ ಅವರು ದೇವಿಯ ಎದುರು ಕುಳಿತು ಪೂಜೆ ಮಾಡುತ್ತಿರುವುದು, ಅಗ್ನಿಯ ಮುಂದೆ ಮೌನವಾಗಿ ಧ್ಯಾನದಲ್ಲಿರುವುದು ಕಾಣಿಸುತ್ತದೆ. ಸಮಂತಾ ಹಿಂದೆಯೂ ಲಿಂಗ ಭೈರವಿ ದೇವಿಯ ಕುರಿತು ಅನೇಕ ಬಾರಿ ತಮ್ಮ ಭಕ್ತಿ ಹಂಚಿಕೊಂಡಿದ್ದರು. ಈಗ ಅದೇ ಸ್ಥಳದಲ್ಲಿ ಜೀವನದ ಮಹತ್ವದ ಕ್ಷಣವನ್ನು ಆಚರಿಸಿರುವುದು ಅವರಿಗೊಂದು ವಿಶೇಷ ಅನುಭವವಾಗಿದೆ.ದೈವವನ್ನು ಮಿಮಿಕ್ರಿ ಮಾಡಿ ಕನ್ನಡಿಗರನ್ನು ಕೆದಕಿದ ರಣವೀರ್‌ ಸಿಂಗ್‌ನ ಸಿನಿಮಾಗೆ ಸಂಕಷ್ಟ!ಇಲ್ಲಿದೆ ಮಾಹಿತಿ

ಕೇವಲ ಸಮಂತಾ ಮಾತ್ರವಲ್ಲದೆ, ತಮನ್ನಾ ಭಾಟಿಯಾ ಕೂಡ ಲಿಂಗ ಭೈರವಿ ದೇವಿಯ ಭಕ್ತೆಯಾಗಿದ್ದು, ಆಗಾಗ್ಗೆ ಇಶಾ ಸೆಂಟರ್‌ಗೆ ಭೇಟಿ ನೀಡುತ್ತಾರೆ. ಈ ಕಾರಣದಿಂದ ಇಶಾ ಯೋಗ ಸೆಂಟರ್‌ ಈಗ ಹಲವಾರು ಸೆಲೆಬ್ರಿಟಿಗಳಿಗೆ ಆಧ್ಯಾತ್ಮಿಕ ಕೇಂದ್ರವಾಗಿ ಪರಿಣಮಿಸಿದೆ.

ಸಮಂತಾ ಮತ್ತು ರಾಜ್ ನಿಧಿಮೋರು ಅವರ ಈ ವಿಶಿಷ್ಟ ಮದುವೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿದ್ದು, ಅಭಿಮಾನಿಗಳು ದಂಪತಿಗಳಿಗೆ ಶುಭಾಶಯಗಳನ್ನು ಸಲ್ಲಿಸುತ್ತಿದ್ದಾರೆ.