Skip to main content
ವಿಡಿಯೋ
1/3
politics

ಬ್ರೇಕ್‌ಫಾಸ್ಟ್ ಮೀಟಿಂಗ್ ಬಳಿಕ ಅಸಮಾಧಾನ ಶಮನಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿಕೆ..!

By Sushmitha R
ಬ್ರೇಕ್‌ಫಾಸ್ಟ್ ಮೀಟಿಂಗ್ ಬಳಿಕ ಅಸಮಾಧಾನ ಶಮನಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿಕೆ..!

ಬೆಂಗಳೂರಿನಲ್ಲಿ ಇಂದು ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಬ್ರೇಕ್‌ಫಾಸ್ಟ್ ಸಭೆಯಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸೇರಿದಂತೆ ಹಲವು ಹಿರಿಯ ಸಚಿವರು, ಶಾಸಕರು ಭಾಗವಹಿಸಿದ್ದರು.

ಬೆಂಗಳೂರಿನಲ್ಲಿ ಇಂದು ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಬ್ರೇಕ್‌ಫಾಸ್ಟ್ ಸಭೆಯಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸೇರಿದಂತೆ ಹಲವು ಹಿರಿಯ ಸಚಿವರು, ಶಾಸಕರು ಭಾಗವಹಿಸಿದ್ದರು.

ಈ ಸಭೆಯಲ್ಲಿ ಕಾಂಗ್ರೆಸ್ ಶಾಸಕರಲ್ಲಿದ್ದ ಅಸಮಾಧಾನವನ್ನು ಶಮನ ಮಾಡುವ ಉದ್ದೇಶ ಹೊಂದಲಾಗಿತ್ತು. ಸಭೆ ಮುಗಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಡಾ. ಪರಮೇಶ್ವರ್, ಈ ಸಭೆಯಲ್ಲಿ ಒಳಗೆ ಏನು ಚರ್ಚೆ ನಡೆದಿದೆ ಎಂಬುದು ನಮಗಂತೂ ಗೊತ್ತಿಲ್ಲ. ಆದರೆ ಎಲ್ಲವೂ ತಿಳಿಯಿತು, ಸಮಸ್ಯೆಗಳು ಬಗೆಹರಿಯಿತು ಎಂದು ನಾನು ಭಾವಿಸಿದ್ದೇನೆ ಎಂದು ಹೇಳಿದರು.rytras Women's Cotton Kurta Set with Palazzo Pants

ಅಲ್ಲದೇ, ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ರಾಜ್ಯದ ಅನೇಕ ಸಮಸ್ಯೆಗಳ ಬಗ್ಗೆ ವಿಧಾನಸಭೆಯಲ್ಲಿ ವಿಪಕ್ಷಗಳೊಂದಿಗೆ ಚರ್ಚೆ ನಡೆಸಲಾಗುವುದು ಮತ್ತು ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಲಾಗುವುದು ಎಂದು ಭರವಸೆ ನೀಡಿದರು. ಸಿಎಂ ಸಿದ್ದರಾಮಯ್ಯ ಅವರು ರಾಜಕಾರಣ ಶಾಶ್ವತವಲ್ಲ ಎಂದು ಹೇಳಿರುವ ಬಗ್ಗೆ ಪ್ರಶ್ನೆ ಎದುರಿಸಿದ ಪರಮೇಶ್ವರ್, ಅದು ಎಲ್ಲರಿಗೂ ಗೊತ್ತಿರುವ ವಿಚಾರ. ಇದನ್ನು ಓದಿ: ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ: ಇದೇ ಮೊದಲ ಬಾರಿಗೆ 90ರ ಗಡಿ ದಾಟಿದ ಭಾರತದ ಕರೆನ್ಸಿ!

ಯಾರಿಗೂ ಶಾಶ್ವತ ಅಧಿಕಾರವಿಲ್ಲ, ಶಾಶ್ವತ ವಿರೋಧವೂ ಇಲ್ಲ. ಇದು ರಾಜಕೀಯದ ಸ್ವಾಭಾವಿಕ ನಿಯಮ ಎಂದು ಸ್ಪಷ್ಟಪಡಿಸಿದರು. ಒಟ್ಟಾರೆಯಾಗಿ ಬ್ರೇಕ್‌ಫಾಸ್ಟ್ ಸಭೆಯಿಂದ ಪಕ್ಷದ ಒಳಗಿನ ಒಡಕುಗಳು ತಾತ್ಕಾಲಿಕವಾಗಿ ಶಮನವಾದಂತೆ ಕಾಣುತ್ತಿದೆ. ಆದರೆ ಅಧಿವೇಶನ ಆರಂಭವಾದ ಬಳಿಕ ಎಲ್ಲವೂ ಸರಿಯಾಗಿ ನಡೆಯುತ್ತದೆಯೇ ಎಂಬುದು ಗಮನಾರ್ಹವಾಗಿದೆ.ಇದನ್ನು ಓದಿ: ಆಪರೇಷನ್ ಸಾಗರ ಬಂಧು: ಶ್ರೀಲಂಕಾಕ್ಕೆ 12 ಟನ್ ತುರ್ತು ನೆರವು ತಲುಪಿಸಿದ IAF C-130 J ವಿಮಾನ!