ದಕ್ಷಿಣ ಭಾರತದ ಜನಪ್ರಿಯ ನಟಿ ಸಮಂತಾ ರುತ್ ಪ್ರಭು ಇತ್ತೀಚೆಗೆ ತಮ್ಮ ವೈವಾಹಿಕ ಜೀವನಕ್ಕೆ ಸಂಬಂಧಿಸಿದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಕೊಯಮತ್ತೂರಿನ ಇಶಾ ಕೇಂದ್ರದಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಸಮಂತಾ ಮತ್ತು ರಾಜ್ ಮದುವೆಯಾದರು. ಕುಟುಂಬದವರು ಮತ್ತು ಕೆಲ ಆಪ್ತ ಸ್ನೇಹಿತರು ಮಾತ್ರ ಹಾಜರಾಗಿದ್ದರು. ಸಾಮಾನ್ಯವಾಗಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚು ಮಾತನಾಡದ ಸಮಂತಾ, ಮದುವೆಯ ಫೋಟೋಗಳು ಪೋಸ್ಟ್ ಮಾಡಿದ ತಕ್ಷಣವೇ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಚರ್ಚೆ ಆರಂಭವಾಯಿತು.
ಈ ನಡುವೆ ತೆಲುಗು ನಟಿ ಪೂನಂ ಕೌರ್ ಮಾಡಿದ ನಿಗೂಢ ಪೋಸ್ಟ್ ಒಂದು ಹೊಸ ವಿವಾದಕ್ಕೆ ಕಾರಣವಾಗಿದೆ. ಯಾವುದೇ ಹೆಸರು ಹೇಳದೆ ಮಾಡಿದ ಆಕೆಯ ಟೀಕಾತ್ಮಕ ಬರಹವನ್ನು ಹಲವರು ಸಮಂತಾಳ ಕಡೆ ಉದ್ದೇಶಿತ ಎಂದು ಊಹಿಸುತ್ತಿದ್ದಾರೆ. ಇದರಿಂದ "ಮನೆ ಒಡೆದಳು", "ಸಂಬಂಧಗಳಲ್ಲಿ ವ್ಯತ್ಯಾಸ" ಎಂಬ ಮಾತುಗಳು ಮತ್ತೆ ಟ್ರೆಂಡ್ ಆಗತೊಡಗಿವೆ.GUESS Stainless Steel Analog Black Dial Men's Watch-W1049G5, Dial_ Golden
ಪೋಸ್ಟ್‌ನ ಅರ್ಥ ಸ್ಪಷ್ಟವಾಗದಿದ್ದರೂ, ಸಾಮಾಜಿಕ ಮಾಧ್ಯಮ ಬಳಕೆದಾರರು ಅದನ್ನು ಸಮಂತಾಳ ಇತ್ತೀಚಿನ ಮದುವೆಯೊಂದಿಗೆ ಸಂಪರ್ಕಿಸುತ್ತಿದ್ದಾರೆ. ಆದರೆ ಪೂನಂ ಕೌರ್ ಇದುವರೆಗೂ ಅದು ಯಾರ ಬಗ್ಗೆ ಎಂದು ಸ್ಪಷ್ಟಪಡಿಸಿಲ್ಲ. ಈ ಕಾರಣಕ್ಕೆ ನೆಟ್ಟಿಗರಲ್ಲಿ ಕುತೂಹಲ ಹೆಚ್ಚಾಗಿದ್ದು, ಹಲವು ರೀತಿಯ ಕಾಮೆಂಟ್‌ಗಳು ಹರಿದಾಡುತ್ತಿವೆ.ಇದನ್ನು ಓದಿ:ಬಾಲಕೃಷ್ಣ ಅಭಿಮಾನಿಗಳ ಪವರ್ ಎಂಥದ್ದು ಗೊತ್ತಾ? ʼಅಂಖಡ 2' ಟಿಕೆಟ್‌ಗೆ ಕೊಟ್ಟಿದ್ದು ಎಷ್ಟು ಲಕ್ಷ ಗೊತ್ತಾ?
ಇದರ ನಡುವೆ ಸಮಂತಾ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೆ, ತಮ್ಮ ಹೊಸ ಜೀವನದ ಕ್ಷಣಗಳನ್ನು ಶಾಂತವಾಗಿ ಹಂಚಿಕೊಳ್ಳುತ್ತಿದ್ದಾರೆ. ಅಭಿಮಾನಿಗಳು ನಟಿಗೆ ಶುಭಕೋರಿದ್ದಾರೆ ಮತ್ತು ಅನಗತ್ಯ ನಿಂದನೆಗಳನ್ನು ನಿಲ್ಲಿಸುವಂತೆ ಮನವಿ ವ್ಯಕ್ತಪಡಿಸಿದ್ದಾರೆ.