ಕನ್ನಡ ನಟ ದರ್ಶನ್ ಅಭಿನಯದ ‘ಡೆವಿಲ್’ ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಅಭಿಮಾನಿಗಳಲ್ಲಿ ಹೊಸ ನಿರೀಕ್ಷೆ ಹುಟ್ಟಿಸಿದೆ. ಈ ಸಿನಿಮಾ ಡಿಸೆಂಬರ್ 11 ರಂದು ಥಿಯೇಟರ್‌ಗಳಿಗೆ ಬರಲಿದೆ. ಬಿಡುಗಡೆಯಿಗೆ ಇನ್ನೂ ಒಂದು ವಾರ ಬಾಕಿ ಇದ್ದರೂ, ಟ್ರೇಲರ್ ಈಗಾಗಲೇ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಚಿತ್ರದಲ್ಲಿ ದರ್ಶನ್ ಹಲವು ಗೆಟಪ್‌ಗಳಲ್ಲಿ ಕಾಣಿಸಿಕೊಂಡಿದ್ದು, ಅವರ ಸ್ಟೈಲಿಶ್ ಲುಕ್ ಮತ್ತು ಮಾಸ್ ಡೈಲಾಗ್‌ಗಳು ಗಮನ ಸೆಳೆಯುತ್ತಿವೆ. “ಸೂರ್ಯನಿಗೆ ಹೆಚ್ಚು ಹೊತ್ತು ಗ್ರಹಣ ಹಿಡಿಯಲ್ಲ, ನಾನು ಬರ್ತಿದ್ದೀನಿ ಚಿನ್ನ” “Brother from another mother but not the same father ಎಂಬ ಡೈಲಾಗಳು ಟ್ರೇಲರ್‌ನ ಹೈಲೈಟ್ ಆಗಿದೆ. ದರ್ಶನ್ ಜೈಲಿನಲ್ಲಿ ಇರುವ ನಡುವೆಯೂ, ಅವರ ಅಭಿಮಾನಿಗಳು ಸಿನಿಮಾಗೆ ಅದ್ಧೂರಿ ಸ್ಪಂದನೆ ನೀಡುತ್ತಿದ್ದಾರೆ.Calvin Klein Ck Flex Qtz Multifunction Tonneau Dial Men's Watch
ಈ ಚಿತ್ರದ ನಿರ್ದೇಶನವನ್ನು ಮಿಲನ ಪ್ರಕಾಶ್ ಮಾಡುತ್ತಿದ್ದಾರೆ. ಚಿತ್ರರಂಗದಲ್ಲಿ 22 ವರ್ಷಗಳ ಅನುಭವ ಹೊಂದಿರುವ ಪ್ರಕಾಶ್, ‘ಖುಷಿ’, ‘ಮಿಲನ’ ಸೇರಿದಂತೆ ಹಲವಾರು ಯಶಸ್ವಿ ಸಿನಿಮಾಗಳನ್ನು ನೀಡಿದ್ದಾರೆ. ದರ್ಶನ್ ಜೊತೆ ಅವರು ಹಿಂದೆ ‘ತಾರಕ್’ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಇದೀಗ ಮತ್ತೆ ‘ಡೆವಿಲ್’ ಮೂಲಕ ಜೋಡಿ ಸೇರಿದ್ದಾರೆ.ಇದನ್ನು ಓದಿ:ಪಬ್ ಉದ್ಘಾಟನೆ ಬಳಿಕ ಆರ್ಯನ್-ನಲಪಾಡ್ ಭೇಟಿ ವಿವಾದ; ಕಬ್ಬನ್ ಪಾರ್ಕ್ ಪೊಲೀಸರು ತನಿಖೆ ಮುಂದುವರೆಸಿದ್ದಾರೆ
ದರ್ಶನ್‌ಗೆ ಜೊತೆಯಾಗಿರೋವರು ರಚನಾ ರೈ. ಜೊತೆಗೆ ಮಹೇಶ್ ಮಂಜ್ರೇಕರ್, ಅಚ್ಯುತ್ ಕುಮಾರ್, ಶರ್ಮಿಳಾ ಮಾಂಡ್ರೆ, ಶೋಭರಾಜ್, ಗಿಲ್ಲಿ ನಟ ಸೇರಿದಂತೆ ಹಲವು ಕಲಾವಿದರು ಈ ಚಿತ್ರದ ಭಾಗವಾಗಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದು, ಚಿತ್ರದ ಹಾಡುಗಳು ಬಿಡುಗಡೆಯಾಗುವಷ್ಟರಲ್ಲೇ ಉತ್ತಮ ಪ್ರತಿಕ್ರಿಯೆ ಪಡೆದಿವೆ.
ದರ್ಶನ್ ನ್ಯಾಯಾಂಗ ವಿಚಾರಣೆ ನಡುವೆಯೇ, ಟ್ರೇಲರ್ ಬಿಡುಗಡೆ ಅಭಿಮಾನಿಗಳಿಗೆ ಅದೃಷ್ಟದಂತೆ ಪರಿಣಮಿಸಿದೆ. ಸಿನಿಮಾ ಹೇಗಿರುತ್ತದೆ ಎಂಬ ಕುತೂಹಲ ಈಗ ಹೆಚ್ಚಾಗಿದ್ದು, ಪ್ರೇಕ್ಷಕರು ಡಿಸೆಂಬರ್ 11 ರಂದು ‘ಡೆವಿಲ್’ ಅನ್ನು ಕಾದು ನೋಡುತ್ತಿದ್ದಾರೆ.