‘ಕಾಂತಾರ: ಚಾಪ್ಟರ್ 1’ ಮೂಲಕ ದೈವ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಿದ ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ, ಈಗ ನಿಜ ಜೀವನದಲ್ಲೂ ದೈವದ ಆಶೀರ್ವಾದ ಪಡೆದಿದ್ದಾರೆ. ಪಂಜುರ್ಲಿ ದೈವದ ಬಗ್ಗೆ ದೊಡ್ಡ ನಂಬಿಕೆ ಹೊಂದಿರುವ ರಿಷಬ್, ಮಂಗಳೂರಿನ ಬಾರೆಬೈಲ್ ವಾರಾಯಿ ಪಂಜುರ್ಲಿ, ಜಾರಂದಾಯ ಮತ್ತು ಬಂಟ ದೈವಸ್ಥಾನದಲ್ಲಿ ಹರಕೆ ಕೋಲ ನೀಡಿದ್ದಾರೆ.Calvin Klein Ck Flex Qtz Multifunction Tonneau Dial Men's Watch
ಈ ಸಂದರ್ಭದಲ್ಲಿ ಪಂಜುರ್ಲಿ ದೈವವು ರಿಷಬ್‌ರನ್ನು ಮುದ್ದಾಗಿ ತಬ್ಬಿಕೊಂಡು, “ಕಣ್ಣೀರು ಸುರಿಸಬೇಡ… ನಿನ್ನ ಹಿಂದೆ ನಾನಿದ್ದೇನೆ” ಎಂಬ ಅಭಯ ನೀಡಿದ ಕಹಳೆ ಕ್ಷಣ ಎಲ್ಲರ ಮನಗೆದ್ದಿದೆ. ರಿಷಬ್ ದೈವದ ಮಡಿಲಲ್ಲಿ ಮಲಗಿ ಆಶೀರ್ವಾದ ಪಡೆದಿದ್ದು, ಅವರು ಭಾವೋದ್ರಿಕ್ತರಾಗಿದ್ದಾರೆ.ಇದನ್ನು ಓದಿ:ದರ್ಶನ್ ‘Devil’ ಸಿನಿಮಾದಲ್ಲಿ ಗಿಲ್ಲಿ ನಟ..! ಪಾತ್ರದ ವಿಶೇಷತೆ ಏನು ಗೊತ್ತಾ?
ಈ ಹರಕೆ ಕಾರ್ಯಕ್ರಮದಲ್ಲಿ ನಿರ್ಮಾಪಕ ವಿಜಯ್ ಕಿರಗಂದೂರು, ನಿರ್ದೇಶಕ ಸಂತೋಷ್ ಆನಂದರಾಮ್ ಹಾಗೂ ಕಾಸ್ಟ್ಯುಮ್ ತಂಡ ಸೇರಿ ಚಲನಚಿತ್ರ ಕ್ಷೇತ್ರದ ಹಲವರು ಭಾಗಿಯಾಗಿದ್ದರು. ‘ಕಾಂತಾರ’ ಸಿನಿಮಾದ ಆತ್ಮ, ದೈವ ಸಂಪ್ರದಾಯ ಮತ್ತು ಅದರ ನಂಬಿಕೆಗಳನ್ನು ಗೌರವಿಸುವ ಈ ಕ್ಷಣ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.