ಹೊಸದಿಲ್ಲಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಗವದ್ಗೀತೆಯ ಪ್ರತಿಯನ್ನು ಉಡುಗೊರೆಯಾಗಿ ನೀಡಿರುವುದನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಭಾನುವಾರ ಬಲವಾಗಿ ಬೆಂಬಲಿಸಿದ್ದಾರೆ. ಇದು ಭಾರತದ 'ನಾಗರಿಕ ಪರಂಪರೆಯ' ಪ್ರತಿಬಿಂಬವೇ ಹೊರತು ಪುಟಿನ್ ಅವರನ್ನು ಹಿಂದೂ ಧರ್ಮಕ್ಕೆ ಮತಾಂತರ ಮಾಡುವ ಪ್ರಯತ್ನವಲ್ಲ ಎಂದು ತರೂರ್ ಸ್ಪಷ್ಟಪಡಿಸಿದ್ದಾರೆ.ಡಿಸೆಂಬರ್ 4 ರಿಂದ 6 ರವರೆಗೆ ನವದೆಹಲಿಗೆ ಪುಟಿನ್ ಭೇಟಿ ನೀಡಿದ ಸಂದರ್ಭದಲ್ಲಿ ಉಡುಗೊರೆಗಳ ವಿನಿಮಯವಾಯಿತು. ಈ ವೇಳೆ, ಮಹಾಭಾರತದ ಭಾಗವಾದ ಶ್ರೀಮದ್ ಭಗವದ್ಗೀತೆಯ ರಷ್ಯನ್ ಅನುವಾದದ ಪ್ರತಿಯನ್ನು ಪ್ರಧಾನಿ ಮೋದಿ ಅವರು ಪುಟಿನ್ಗೆ