Skip to main content
ವಿಡಿಯೋ
1/3
cinema

ನೆಟ್‌ಫ್ಲಿಕ್ಸ್‌ಗೆ ವಾರ್ನರ್ ಬ್ರೋಸ್ ಸೇರ್ಪಡೆ: ಭಾರತೀಯ ಚಿತ್ರಮಂದಿರಗಳಿಗೆ ಹೊಸ ಸವಾಲು.!ಇಲ್ಲಿದೆ ಮಾಹಿತಿ

By Ram Chethan
ನೆಟ್‌ಫ್ಲಿಕ್ಸ್‌ಗೆ ವಾರ್ನರ್ ಬ್ರೋಸ್ ಸೇರ್ಪಡೆ: ಭಾರತೀಯ ಚಿತ್ರಮಂದಿರಗಳಿಗೆ ಹೊಸ ಸವಾಲು.!ಇಲ್ಲಿದೆ ಮಾಹಿತಿ

ನೆಟ್‌ಫ್ಲಿಕ್ಸ್ 83 ಬಿಲಿಯನ್ ಡಾಲರ್‌ಗೆ ವಾರ್ನರ್ ಬ್ರೋಸ್ ಡಿಸ್ಕವರಿಯನ್ನು ಖರೀದಿಸುವುದು ಚಿತ್ರರಂಗದಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗುತ್ತಿದೆ. ಹಾಲಿವುಡ್‌ನ ದೊಡ್ಡ ಸಿನಿಮಾಗಳು ಓಟಿಟಿಗೆ ಮಾತ್ರ ಸೀಮಿತವಾಗುವ ಆತಂಕದಿಂದ, ಭಾರತದ ಮಲ್ಟಿಪ್ಲೆಕ್ಸ್‌ಗಳು ಭವಿಷ್ಯ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿವೆ.

ವಿಶ್ವದ ಅತಿ ದೊಡ್ಡ ಓಟಿಟಿ ಪ್ಲಾಟ್‍ಫಾರ್ಮ್ ಎಂದೇ ಹೆಸರು ಪಡೆದ ನೆಟ್‌ಫ್ಲಿಕ್ಸ್ ಈಗ ಜಾಗತಿಕ ಚಿತ್ರೋದ್ಯಮದ ದೈತ್ಯ ವಾರ್ನರ್ ಬ್ರೋಸ್ ಡಿಸ್ಕವರಿಯನ್ನು ಖರೀದಿಸುವುದಾಗಿ ಘೋಷಿಸಿದೆ. ಸುಮಾರು 83 ಬಿಲಿಯನ್ ಡಾಲರ್ (ಏಳೂವರೆ ಲಕ್ಷ ಕೋಟಿ ರೂ) ಮೌಲ್ಯದ ಈ ಡೀಲ್ ವಿಶ್ವದ ಚಿತ್ರರಂಗದಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗಲಿದೆ. ವಾರ್ನರ್ ಬ್ರೋಸ್‌ನ ಫಿಲಂ ಮತ್ತು ಟಿವಿ ಸ್ಟುಡಿಯೋಗಳು ಸಂಪೂರ್ಣವಾಗಿ ನೆಟ್‌ಫ್ಲಿಕ್ಸ್ ಆಡಳಿತಕ್ಕೆ ಬರುತ್ತವೆ.U.S. POLO ASSN. Men's Solid Cotton Linen Mandarin Collar Full Sleeve Shirts

ಹಾಲಿವುಡ್‌ನ ಅತ್ಯಂತ ಹೆಸರು ಮಾಡಿದ ಚಿತ್ರಗಳನ್ನು ನಿರ್ಮಿಸಿರುವ ಸ್ಟುಡಿಯೋ ವಾರ್ನರ್ ಬ್ರೋಸ್; ಹ್ಯಾರಿ ಪಾಟರ್ ಸರಣಿ, ದಿ ಲಾರ್ಡ್ ಆಫ್ ದಿ ರಿಂಗ್ಸ್, ಬ್ಯಾಟ್‌ಮ್ಯಾನ್, ಸೂಪರ್ಮ್ಯಾನ್, ಕೆಸಬ್ಲಾಂಕಾ ಮತ್ತು ಇತ್ತೀಚಿನ ಬಾರ್ಬಿ ಸಿನಿಮಾಗಳು ಇದರ ನಿರ್ಮಿತಿಗಳು. ಭಾರತದಲ್ಲೂ ಇದೇ ಕಂಪನಿಯು ಹಲವಾರು ದೊಡ್ಡ ಹಾಲಿವುಡ್ ಮತ್ತು ಬಾಲಿವುಡ್ ಚಿತ್ರಗಳನ್ನು ಮಲ್ಟಿಪ್ಲೆಕ್ಸ್‌ಗಳಲ್ಲಿ ಬಿಡುಗಡೆ ಮಾಡುತ್ತ ಬಂದಿದೆ.

ಈ ಬದಲಾವಣೆ ಭಾರತದಲ್ಲಿ ಮಲ್ಟಿಪ್ಲೆಕ್ಸ್‌ ಮಾಲೀಕರ ಆತಂಕಕ್ಕೆ ಕಾರಣವಾಗಿದೆ. ವಾರ್ನರ್ ಬ್ರೋಸ್‌ನಂತಹ ದೊಡ್ಡ ಬ್ಯಾನರ್‌ಲಿಂದ ಬರುತ್ತಿದ್ದ ಸಿನಿಮಾಗಳು ಭಾರತೀಯ ಚಿತ್ರಮಂದಿರಗಳಿಗೆ ದೊಡ್ಡ ಆದಾಯವನ್ನು ನೀಡುತ್ತಿದ್ದವು. ಆದರೆ, ನೆಟ್‌ಫ್ಲಿಕ್ಸ್ ಸಿನಿಮಾಗಳನ್ನು ನೇರವಾಗಿ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆ ಮಾಡುವ ನಿಲುವಿನಲ್ಲಿ ಪ್ರಸಿದ್ಧ. ಅದರ ವೆಬ್‌ಸೀರೀಸ್ ಮತ್ತು ಓಟಿಟಿ ಚಿತ್ರಗಳು ಥಿಯೇಟರ್‌ಗಳಿಗೆ ಬರುವ ಸಿನಿಮಾಗಳಿಗಿಂತ ಹೆಚ್ಚು ಪ್ರೀತಿ ಪಡೆಯುತ್ತಿವೆ. ಇದೇ ಕಾರಣಕ್ಕೆ, ಮಲ್ಟಿಪ್ಲೆಕ್ಸ್‌ಗಳಿಗೆ ಅಗತ್ಯವಾದ ದೊಡ್ಡ ಹಾಲಿವುಡ್ ಸಿನಿಮಾಗಳ ಸರಕು ಕಡಿಮೆಯಾಗಬಹುದೇ ಎಂಬ ಆತಂಕ ಹುಟ್ಟಿದೆ.ಇದನ್ನು ಓದಿ:‘ಡಿ ಡೆವಿಲ್’ ಕ್ರೇಜ್ ಪೀಕ್‌ನಲ್ಲಿ..!ದರ್ಶನ್ ಕುಳಿತುಕೊಂಡ ಕುರ್ಚಿ ನೋಡಲು ಜನ ಮುಗಿಬಿದ್ದ ಅಭಿಮಾನಿಗಳು

ಇದಕ್ಕೆ ಪ್ರತಿಕ್ರಿಯಿಸಿದ ನೆಟ್‌ಫ್ಲಿಕ್ಸ್, “ಕಾರ್ಯಚಟುವಟಿಕೆಗಳಲ್ಲಿ ಯಾವುದೇ ತಕ್ಷಣದ ಬದಲಾವಣೆ ಆಗುವುದಿಲ್ಲ. ಎರಡೂ ಸಂಸ್ಥೆಗಳು ತಮ್ಮದೇ ರೀತಿಯಲ್ಲಿ ಮುಂದುವರೆಯುತ್ತವೆ” ಎಂದು ಸ್ಪಷ್ಟಪಡಿಸಿದೆ. ಆದರೆ, ಮುಂದೆ ವಾರ್ನರ್ ಬ್ರೋಸ್‌ನ ಸಿನಿಮಾ ಬಿಡುಗಡೆ ಮಾದರಿ ಬದಲಾಗುವ ಸಾಧ್ಯತೆಯನ್ನು ಭಾರತೀಯ ಚಿತ್ರಮಂದಿರಗಳು ಸುರಕ್ಷತಾ ದೃಷ್ಟಿಯಿಂದ ಗಮನಿಸುತ್ತಿವೆ.

ಈ ವರ್ಷದ ಡಿಸೆಂಬರ್‌ ವೇಳೆಗೆ ಈ ಡೀಲ್ ಪೂರ್ಣಗೊಳ್ಳುವ ನಿರೀಕ್ಷೆಯಿದ್ದು, ಎಚ್‌ಬಿಒ ಕೇಬಲ್ ನೆಟ್‌ವರ್ಕ್ ಮತ್ತು ಕೆಲವು ಇನ್ನಿತರ ವ್ಯವಹಾರಗಳು ಈ ಒಪ್ಪಂದದಲ್ಲಿಲ್ಲ ಎಂದು ತಿಳಿಸಲಾಗಿದೆ. ಈ ಒಪ್ಪಂದ ಓಟಿಟಿ ಕ್ಷೇತ್ರಕ್ಕೆ ದೊಡ್ಡ ಬಲ ನೀಡಿದರೂ, ಮಲ್ಟಿಪ್ಲೆಕ್ಸ್‌ಗಳ ಭವಿಷ್ಯ ಹೇಗೆ ರೂಪುಗೊಳ್ಳುತ್ತದೆ ಎಂಬ ಕುತೂಹಲ ಮುಂದುವರಿದಿದೆ.