ಚಂಡೀಗಢ: ಪಂಜಾಬ್ನ ಫಿರೋಜ್ಪುರ ಜಿಲ್ಲೆಯಲ್ಲಿ ಸಂಭವಿಸಿದ್ದ ಆಘಾತಕಾರಿ ಘಟನೆಯೊಂದು ಅನಿರೀಕ್ಷಿತ ತಿರುವು ಪಡೆದಿದೆ. ಸುಮಾರು ಎರಡು ತಿಂಗಳ ಹಿಂದೆ ತನ್ನದೇ ತಂದೆಯಿಂದ ಕೈಗಳನ್ನು ಕಟ್ಟಿ ಕಾಲುವೆಗೆ ತಳ್ಳಲ್ಪಟ್ಟಿದ್ದ 17 ವರ್ಷದ ಬಾಲಕಿಯೊಬ್ಬಳು ಇದೀಗ ಜೀವಂತವಾಗಿ ಪತ್ತೆಯಾಗಿದ್ದಾಳೆ. ಶಾಲೆ ತೊರೆದಿದ್ದ ಮತ್ತು ನಾಲ್ವರು ಸಹೋದರಿಯರಲ್ಲಿ ಹಿರಿಯಳಾದ ಈ ಬಾಲಕಿ ಮಾಧ್ಯಮಗಳ ಮುಂದೆ ಬಂದು ತಾನು ಬದುಕುಳಿದ ಕಷ್ಟದ ಕಥೆಯನ್ನು ಹೇಳಿಕೊಂಡಿದ್ದಾಳೆ.ಸೆಪ್ಟೆಂಬರ್ 29ರಂದು ಬಾಲಕಿಯ ತಂದೆ ಸುರ್ಜಿತ್ ಸಿಂಗ್, ಆಕೆಯ ಸ್ವಭಾವದ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಆಕೆಯ ಕೈಗಳನ್ನು ಹಗ್ಗಗಳಿಂದ ಬಿಗಿದು ನಿರ್ದಯವಾಗಿ ಕಾಲುವೆಗೆ ತಳ್ಳಿದ್ದ.