Skip to main content
ವಿಡಿಯೋ
1/3
cinema

ರಿಷಬ್‌ ಶೆಟ್ಟಿಗಾಗಿ ದೈವ ನರ್ತಕರು ಮಾಡಿದ್ರಾ ದೊಡ್ಡ ತಪ್ಪು? ನಿಜ ಏನು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ!

By Ram Chethan
ರಿಷಬ್‌ ಶೆಟ್ಟಿಗಾಗಿ ದೈವ ನರ್ತಕರು ಮಾಡಿದ್ರಾ ದೊಡ್ಡ ತಪ್ಪು? ನಿಜ ಏನು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ!

‘ಕಾಂತಾರ’ ಯಶಸ್ಸಿನ ಬಳಿಕ ರಿಷಬ್ ಶೆಟ್ಟಿ ಮಾಡಿಸಿದ ಹರಕೆ ಕೋಲಕ್ಕೆ ದೊಡ್ಡ ವಿವಾದ! ದೈವರಾಧಕ ತಮ್ಮಣ್ಣ ಶೆಟ್ಟಿ ಆಕ್ರೋಶ: “ಶರ್ಟ್, ತಟ್ಟೆ, ತಲೆಗೆ ಕಡ್ತಳೆ – ಎಲ್ಲವೂ ನಿಯಮ ಉಲ್ಲಂಘನೆ, ದೈವಾರಾಧನೆಗೆ ಅಪಮಾನ” ಎಂದು ಆರೋಪ.

‘ಕಾಂತಾರ: ಚಾಪ್ಟರ್ 1’ ಸಿನಿಮಾ ದೊಡ್ಡ ಹಿಟ್ ಆದ ಬಳಿಕ ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರು ತಮ್ಮ ತಂಡದೊಂದಿಗೆ ಮಂಗಳೂರಿನ ಕದ್ರಿ ದೇವಸ್ಥಾನಕ್ಕೆ ಹೋಗಿ ಹರಕೆ ಕೋಲ ಮಾಡಿಸಿದ್ದರು. ಆದರೆ ಈ ಕೋಲದ ವೇಳೆ ದೈವ ನರ್ತಕರು ರಿಷಬ್ ಶೆಟ್ಟಿ ಜೊತೆಗೆ ವರ್ತಿಸಿದ ರೀತಿ ಸರಿಯಿಲ್ಲ ಎಂದು ಈಗ ಭಾರೀ ಟೀಕೆ ಬರುತ್ತಿದೆ.

ದೈವರಾಧಕರೊಬ್ಬರಾದ ತಮ್ಮಣ್ಣ ಶೆಟ್ಟಿ ಅವರು ಮಾಧ್ಯಮಕ್ಕೆ ಮಾತನಾಡಿ, “ಇದು ದೈವರಾಧನೆಯ ನಿಯಮಕ್ಕೆ ವಿರುದ್ಧವಾಗಿದೆ. ಹರಕೆ ಕೊಡುವುದಕ್ಕೂ ಕೆಲವು ಕಟ್ಟುಪಾಡುಗಳಿವೆ. ಇದನ್ನು ನೇಮ ಎಂದು ಕರೆಯುವುದೇ ತಪ್ಪು. ಧರ್ಮದ ನಿಯಮದಂತೆ ಮಾಡಬೇಕು” ಎಂದು ಹೇಳಿದ್ದಾರೆ.Arayna Women's Cotton Printed Floral Straight Kurta with Palazzo Pants and Dupatta

ಅವರು ಇನ್ನೂ ಹೇಳಿದ್ದು: “ದೈವ ನರ್ತಕರು ಶರ್ಟ್ ಹಾಕಿಕೊಂಡಿದ್ದರು, ತಲೆಗೆ ಕಡ್ತಳೆ ಹೊಡೆದುಕೊಂಡಿದ್ದರು, ತಟ್ಟೆ ಹೊಡೆದುಕೊಂಡಿದ್ದರು – ಇದೆಲ್ಲವೂ ದೈವರಾಧನೆಯಲ್ಲಿ ಮಾಡಬಾರದ್ದು. ರಿಷಬ್ ಶೆಟ್ಟಿ ಅವರಿಗೆ ಡೇಟ್ ಇದೆ ಎಂದು ಕದ್ರಿ ದೇವಸ್ಥಾನದ ಮಂಜುನಾಥ ದೈವವನ್ನು ಬದಿಗಿಟ್ಟು ಈ ಕೋಲ ಮಾಡಿಸಿದ್ದಾರೆ. ಇದು ತುಂಬಾ ತಪ್ಪು” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸುರು ಅಯ್ತು ಯಶ್‌ನ ‘ಟಾಕ್ಸಿಕ್’ ಹವಾ ! ರಕ್ತದ ಬಾತ್‌ಟಬ್ ಪೋಸ್ಟರ್ ವೈರಲ್, ಬಿಡುಗಡೆಗೆ 100 ದಿನಗಳು ಬಾಕಿ

“ದೈವರಾಧನೆಯನ್ನು ಸಿನಿಮಾ ಪ್ರಚಾರಕ್ಕಾಗಿ ಬಳಸಿಕೊಳ್ಳುವುದು ಸರಿಯಲ್ಲ. ಇದರಿಂದ ಜನರ ನಂಬಿಕೆ ಕಡಿಮೆಯಾಗುತ್ತಿದೆ. ಇಂತಹ ನಾಟಕ ಮಾಡಿದರೆ ಮುಂದೆ ದೊಡ್ಡ ತೊಂದರೆ ಬರುತ್ತದೆ” ಎಂದು ತಮ್ಮಣ್ಣ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.

ಈಗ ಈ ವಿಚಾರ ಸಾಮಾಜಿಕ ಜಾಲತಾಣದಲ್ಲೂ ಚರ್ಚೆಯಾಗುತ್ತಿದೆ. ಕೆಲವರು ರಿಷಬ್ ಶೆಟ್ಟಿ ಅವರನ್ನು ಬೆಂಬಲಿಸುತ್ತಿದ್ದಾರೆ, ಕೆಲವರು ದೈವರಾಧನೆಯ ನಿಯಮ ಮೀರಿದ್ದಕ್ಕೆ ಟೀಕಿಸುತ್ತಿದ್ದಾರೆ. ಒಟ್ಟಾರೆಯಾಗಿ ಈ ಘಟನೆ ತುಳುನಾಡಿನ ದೈವಾರಾಧನೆಯ ಬಗ್ಗೆ ಹೊಸ ಚರ್ಚೆಗೆ ಕಾರಣವಾಗಿದೆ.