ಭಾರತದಲ್ಲಿ ಉತ್ಕರ್ಷವೆಂಬಂತೆ ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆಯು ಬೆಳೆಯುತ್ತಿದೆ. ಇದರ ನಡುವೆಯೇ ಹೊಸ ಕಂಪನಿಗಳ ದಾಖಲಾತಿ ಸಂಖ್ಯೆಯು ಹೆಚ್ಚುತ್ತಿದೆ ಎನ್ನಲಾಗಿದೆ. ಇದರೊಟ್ಟಿಗೆ “ಯೂನಿಕಾರ್ನ್” ಸಂಸ್ಥೆಗಳಾಗುವ ಗುರಿ ತಲುಪಲು ಮುನ್ನುಗ್ಗುತ್ತಿದೆ ಎನ್ನಲಾಗಿದೆ.
ಯೂನಿಕಾರ್ನ್ ಹಾಗಂದರೇನು -
“ಯೂನಿಕಾರ್ನ್” ಎಂದರೆ, ಬಿಜಿನೆಸ್‌ಗೆ ಸಂಬಂಧಪಟ್ಟಂತೆ, ಯೂನಿಕಾರ್ನ್ ಸ್ಟಾರ್ಟ್ ಅಪ್ ಎಂದರೆ ಒಂದು ಬಿಲಿಯನ್ ಗಿಂತಲೂ ಹೆಚ್ಚು ಮೌಲ್ಯವನ್ನು ಗಳಿಸುವ ಖಾಸಗಿ ಕಂಪನಿಯಾಗಿರುತ್ತದೆ. ಈ ಪದವನ್ನು 2013 ರಲ್ಲಿ ಬಂಡವಾಳಶಾಹಿ ಐಲೀನ್ ಲೀ ಎನ್ನುವವರು ಗುರುತಿಸಿದ್ದಾರೆ. ಖಾಸಗಿ ಮಾಲಿಕತ್ವ ಹೊಂದಿರುವ ಶತಕೋಟಿ ಡಾಲರ್ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯಮಾಪನ ಹೊಂದಿದ ಕಂಪನಿ ಇದಾಗಿರುವುದು ಎನ್ನಲಾಗಿದೆ.
ಯಾವ ಕಂಪನಿಗಳು ಹೆಚ್ಚಿನ ಬೆಳವಣಿಗೆಯ ಸಾಮರ್ಥ್ಯ ತೋರುವ ಗಮನಾರ್ಹ ಬ್ಯುಸಿನೆಸ್ ಸ್ಟಾರ್ಟ್ ಅಪ್ ಗಳಾಗಿರುತ್ತದೆಯೋ ಅದನ್ನು “ಯೂನಿಕಾರ್ನ್” ಎಂದು ಕರೆಯುತ್ತಾರೆ. HyperX Solocast 2 Wired Microphone for Windows; NGENUITY, Tap-to-Mute Sensor, Cardioid Polar Pattern, Black, 368gm (AR0A0AA)
ಸ್ಟಾರ್ಟ್‌ಅಪ್‌ಗಳನ್ನು ಅನ್ವೇಷಿಸುವ ಇದು ಜಾಗತಿಕ ಗಮನ ಮತ್ತು ಹೂಡಿಕೆಯನ್ನು ಆಕರ್ಷಿಸುತ್ತವೆ. ಭಾರತದ ನವೀನತೆ ಮತ್ತು ಉದ್ಯಮಶೀಲತೆಗೆ ಸಾಮರ್ಥ್ಯ ತೋರುವ ಯೂನಿಕಾರ್ನ್ ಸಂಸ್ಥೆಗಳು ಬಿಜಿನೆಸ್ ಇಂಕ್ಯೂಬೇಷನ್‌ಗೆ ಹುರಿದುಂಬಿಸುತ್ತದೆ.
ಮಾಹಿತಿ ಪ್ರಕಾರ 2024ರ ಮಟ್ಟಿಗೆ, ಭಾರತದಲ್ಲಿ 116 ಯೂನಿಕಾರ್ನ್ ಗಳು ಇವೆ ಎನ್ನಲಾಗಿದೆ ಇದರಲ್ಲಿ ಫಿನ್‌ಟೆಕ್, ಇ-ಕಾಮರ್ಸ್, ಎಡು-ಟೆಕ್, ಹೆಲ್ತ್ -ಟೆಕ್ ಮತ್ತು ಲಾಜಿಸ್ಟಿಕ್ ನಂತಹ ವಿವಿಧ ವಲಯಗಳ ನವೋದ್ಯಮಗಳು ಪ್ರತಿನಿಧಿಸಿವೆ. ಇವು ಸಾಂಪ್ರದಾಯಿಕ ಕೈಗಾರಿಕೆಗಳು ಸೇರಿದಂತೆ ಹೊಸ ಮಾರುಕಟ್ಟೆಗಳನ್ನು ಸೃಷ್ಟಿಸುವಲ್ಲಿ ಪಾಲ್ಗೊಂಡಿವೆ ಎನ್ನಲಾಗುತ್ತದೆ.
ಸ್ಟಾರ್ಟ್ ಅಪ್ ಬೆಳವಣಿಗೆಯನ್ನು ಉತ್ತೇಜಿಸಲು ಬಹುಮುಖ್ಯ ವಿಧಾನಗಳು ಎಂದರೆ:
ಆರಂಭಿಕ ಹಂತದ ಬೆಂಬಲ - ಸೀಡ್ ಫಂಡಿಂಗ್, ಮಾರ್ಗದರ್ಶನ ಸೇರಿದಂತೆ ಮೂಲಸೌಕರ್ಯಗಳನ್ನು ಅನ್ವಯಿಸುತ್ತದೆ.
ನೆಟ್‌ವರ್ಕ್‌ಗಳು - ಇವು ಹೂಡಿಕೆದಾರರು, ಉದ್ಯಮ ತಜ್ಞರು, ಸಂಭಾವ್ಯ ಗ್ರಾಹಕರೊಂದಿಗೆ ಸಂಪರ್ಕ ವ್ಯವಸ್ಥೆ, ಮತ್ತು ಬೆಳವಣಿಗೆಯ ವ್ಯಾಪ್ತಿಯನ್ನು ಅವಲಂಬಿಸಿವೆ.
ಸಂಪನ್ಮೂಲಗಳು ಹಾಗೂ ವಿಸ್ತರಿಸಿದ ವಿನ್ಯಾಸ ಮಾರ್ಗಗಳು ಇದರೊಟ್ಟಿಗೆ ಸ್ಟಾರ್ಟ್ ಅಪ್ ನ ವಿವಿಧ ಹಂತಗಳು, ದೃಢೀಕರಣ ಹಾಗೂ ಪರಿಪಕ್ವತೆಯ ಮಾರುಕಟ್ಟೆ, ವ್ಯವಹಾರ ಮಾದರಿಯನ್ನು ಹಾಗೂ ಕಂಪನಿಯ ಲಾಭದಾಯಕತೆಗೆ ಒಳಪಟ್ಟಿರುತ್ತದೆ.
ನಿರ್ಗಮನದ ಹಂತ - ಆರಂಭಿಕ ಸಾರ್ವಜನಿಕ ಕೊಡುಗೆ (IPO), ದೊಡ್ಡ ಕಂಪನಿಯ ಸ್ವಾಧೀನ ಹಂತ ಅಥವಾ ಸ್ಥಗಿತಗೊಳಿಸುವಿಕೆಗೆ ಸಂಬಂಧಿಸಿರುವಂತದ್ದು.
ಯಾವುದೇ ಹಂತದಲ್ಲೂ ಕಂಪನಿಯ ಬೆಳವಣಿಗೆಯನ್ನು ಅರ್ಥೈಸಿಕೊಳ್ಳುವುದು ಹಾಗೂ ಸೂಕ್ತವಾದ ಕಾರ್ಯಗಳ ಮೇಲೆ ಕೇಂದ್ರೀಕರಿಸುವುದು ಮುಖ್ಯವಾಗಿದೆ. ಇದನ್ನೂ ಓದಿ: ಉದ್ಯಮದ ಭವಿಷ್ಯ ರೂಪಿಸಲಿರುವ ಹೊಸ ಉದ್ಯಮ ಟ್ರೆಂಡ್‌ಗಳು!