ಸಾಮಾಜಿಕ ಮಾಧ್ಯಮಗಳ ವೇದಿಕೆ ಇವತ್ತಿನ ಕಾಲದಲ್ಲಿ, ಜನರ ದೈನಂದಿನ ಭಾಗವಾಗಿದೆ. ಇದರ ನಡುವೆ, ಮಕ್ಕಳ ಸರ್ವತೋಮುಖ ಬೆಳವಣಿಗೆಯು ಸ್ವಸ್ಥ ಸಾಮಾಜಿಕ ಮೌಲ್ಯಗಳಲ್ಲಿ ಒಂದಾಗಿದೆ. ಈ ಹಿನ್ನಲೆಯಲ್ಲಿ, ಅವರ ದಿನನಿತ್ಯದ ಚಟುವಟಿಕೆಗಳ ಕಡೆಗೆ ಗಮನ ಹರಿಸುವುದು ಪ್ರಮುಖವಾಗಿದೆ. ಆಸ್ಟ್ರೇಲಿಯಾದಲ್ಲಿ ಇಂದಿನಿಂದ (ಡಿ.10) 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಹೊಂದಲು ನಿಷೇಧಿಸಿದೆ. ಜಾಗತಿಕ ಪರ-ವಿರೋಧ -ಈ ನಿಷೇಧದ ಕುರಿತು, ಕೆಲ ಪೋಷಕರು ಪರವಾಗಿದ್ದರೆ ಮತ್ತೊಂದೆಡೆ, ವಿಮರ್ಶಕರ ವಾದಗಳಿಗೆ ಎಡೆಯಾಗಿದೆ. ಇದು ಪ್ರಭಾವಶಾಲಿಯಾಗಲಿದೆಯೇ ಎನ್ನುವುದರ ಸುತ್ತಲೂ ಚರ್ಚೆ ನಡೆಯುತ್ತಲಿದೆ. ಸರ್ಕಾರದ ಈ ನಿಯಮವು ಮ