Skip to main content
ವಿಡಿಯೋ
technology

ರೈಲುಗಳಲ್ಲಿ ಡಬಲ್ ಎಂಜಿನ್ ಏಕೆ? ಹಿಂದೆ 'X' ಗುರುತು ಇರುವುದರ ರಹಸ್ಯವೇನು?

By Bhavana Gowda
ರೈಲುಗಳಲ್ಲಿ ಡಬಲ್ ಎಂಜಿನ್ ಏಕೆ? ಹಿಂದೆ 'X' ಗುರುತು ಇರುವುದರ ರಹಸ್ಯವೇನು?

ರೈಲು ಪ್ರಯಾಣವೆಂದರೆ ಒಂದು ರೀತಿಯ ರೋಮಾಂಚನ. ಆದ್ರೆ, ಈ ಪ್ರಯಾಣದ ಮಧ್ಯೆ ನಿಮಗೆ ಎಷ್ಟೋ ಸಲ ಕೆಲವು ವಿಷಯಗಳು ಕುತೂಹಲ ಕೆರಳಿಸಿರಬಹುದು.

ರೈಲು ಪ್ರಯಾಣವೆಂದರೆ ಒಂದು ರೀತಿಯ ರೋಮಾಂಚನ. ಆದ್ರೆ, ಈ ಪ್ರಯಾಣದ ಮಧ್ಯೆ ನಿಮಗೆ ಎಷ್ಟೋ ಸಲ ಕೆಲವು ವಿಷಯಗಳು ಕುತೂಹಲ ಕೆರಳಿಸಿರಬಹುದು. ಉದಾಹರಣೆಗೆ, ರೈಲಿನ ಕೊನೆಯ ಬೋಗಿಯ ಮೇಲೆ ಇರುವ 'X' ಮಾರ್ಕ್ ಏನು ಹೇಳುತ್ತದೆ? ಅಥವಾ ಬೋಗಿಗಳ ಮೇಲಿರುವ ಬೇರೆ ಬೇರೆ ಚಿಹ್ನೆಗಳ ಅರ್ಥವೇನು?

ಅದೇ ರೀತಿ, ಕೆಲವು ರೈಲುಗಳಲ್ಲಿ ಮುಂಭಾಗದಲ್ಲಿ ಒಂದು ಎಂಜಿನ್ ಮತ್ತು ಹಿಂಭಾಗದಲ್ಲಿ ಇನ್ನೊಂದು ಎಂಜಿನ್—ಹೀಗೆ ಡಬಲ್ ಎಂಜಿನ್‌ಗಳು ಇರುವುದನ್ನ ನೀವು ಗಮನಿಸಿರಬಹುದು. ಹಾಗಾದರೆ ರೈಲುಗಳಲ್ಲಿ ಏಕೆ ಎರಡು ಎಂಜಿನ್‌ಗಳು ಇರುತ್ತವೆ? ಇಲ್ಲಿದೆ ಅದರ ಸಂಪೂರ್ಣ ಮಾಹಿತಿ.

ಕಾರಣ 1: ಹೆಚ್ಚುವರಿ ಶಕ್ತಿ ಮತ್ತು ಭಾರ ಎಳೆಯಲು

ಸಾಮಾನ್ಯವಾಗಿ, ಎರಡು ಎಂಜಿನ್‌ಗಳನ್ನು ಹೊಂದಿರುವ ರೈಲುಗಳನ್ನು ಬಹು ಘಟಕ ಕಾರ್ಯಾಚರಣೆಗಳು (Multiple Unit Operations) ಎಂದು ಕರೆಯಲಾಗುತ್ತದೆ. ಇದರ ಹಿಂದಿರುವ ಮುಖ್ಯ ಕಾರಣವೇನು ಗೊತ್ತಾ? ರೈಲುಗಳಲ್ಲಿ ಹೆಚ್ಚಾಗಿ ಭಾರದವಾದ ಸಾಮಾಗ್ರಿಗಳನ್ನ ಸಾಗಿಸುತ್ತಾರೆ, ವಿಶೇಷವಾಗಿ ಸರಕುಗಳನ್ನ ಸಾಗಿಸುವ(Freight Trains)- ಅಂದರೆ ಕಲ್ಲಿದ್ದಲು, ಸಿಮೆಂಟ್, ತೈಲ ಅಥವಾ ಭಾರವಾದ ಕಂಟೈನರ್‌ಗಳಿಂದ ತುಂಬಿದ ರೈಲುಗಳು — ಬಹಳಷ್ಟು ತೂಕವನ್ನು ಹೊಂದಿರುತ್ತವೆ. ಇಷ್ಟೊಂದು ಭಾರವನ್ನು ಎಳೆಯಲು ಒಂದೇ ಎಂಜಿನ್‌ನ ಶಕ್ತಿ ಸಾಲುವುದಿಲ್ಲ.ಆಗ ಡಬಲ್ ಎಂಜಿನ್‌ಗಳನ್ನು ಬಳಸಲಾಗುತ್ತದೆ. ಇವು ಹೆಚ್ಚುವರಿ ಶಕ್ತಿಯನ್ನು ಒದಗಿಸುತ್ತವೆ, ರೈಲಿನ ವೇಗ ಮತ್ತು ನಿಯಂತ್ರಣವನ್ನು ಸುಧಾರಿಸುತ್ತವೆ.

ಕಾರಣ 2: ಗುಡ್ಡಗಾಡು ಹಾಗು ಕಡಿದಾದ ಮಾರ್ಗಳು ಹೆಚ್ಚಾಗಿರುತ್ತೆ

ರೈಲು ಮಾರ್ಗಗಳು ಗುಡ್ಡಗಾಡು ಅಥವಾ ಎತ್ತರದ ಪ್ರದೇಶಗಳಲ್ಲಿದ್ದರೆ, ರೈಲುಗಳಿಗೆ ಹೆಚ್ಚಿನ ಶಕ್ತಿಯ ಅಗತ್ಯವಿರುತ್ತದೆ.

ಎತ್ತರಕ್ಕೆ ಹೋಗುವ ರೈಲುಗಳು ಕಡಿದಾದ ಇಳಿಜಾರುಗಳನ್ನು (Steep Slopes) ಹೊಂದಿರುತ್ತವೆ. ಬೋಗಿಗಳ ಭಾರವೂ ಹೆಚ್ಚಿರುವುದರಿಂದ, ಇಷ್ಟು ತೂಕವನ್ನು ಎಳೆಯಲು ಕಡ್ಡಾಯವಾಗಿ ಎರಡು ಎಂಜಿನ್‌ಗಳು ಬೇಕಾಗುತ್ತವೆ. ಒಂದೇ ಎಂಜಿನ್‌ನಿಂದ ಈ ಶಕ್ತಿ ಉತ್ಪಾದನೆ ಸಾಧ್ಯವಿಲ್ಲ. ಡಬಲ್ ಎಂಜಿನ್‌ಗಳು ರೈಲು ಸಮತೋಲನವನ್ನು ಕಾಯ್ದುಕೊಳ್ಳಲು ಮತ್ತು ವೇಗವನ್ನು ಉತ್ತಮವಾಗಿ ನಿರ್ವಹಿಸಲು ಸಹಾಯ ಮಾಡುತ್ತವೆ. ಇದರಿಂದ ಕಷ್ಟಕರ ಮಾರ್ಗಗಳಲ್ಲಿಯೂ ರೈಲು ವೇಗವಾಗಿ ಓಡಲು ಸಾಧ್ಯವಾಗುತ್ತದೆ.

ಒಬ್ಬರೇ ಚಾಲಕ, ಎರಡು ಎಂಜಿನ್ ನಿಯಂತ್ರಣ!

ಎಲ್ಲರಿಗೂ ಒಂದು ಪ್ರಶ್ನೆ ಕಾಡಬಹುದು, ಎರಡು ಎಂಜಿನ್‌ ಇದ್ದರೆ, ಇಬ್ಬರು ಚಾಲಕರು ಇರುತ್ತಾರ ಅಂತ? ಆದರೆ ಎರಡು ಎಂಜಿನ್‌ಗಳನ್ನು ಹೊಂದಿದ್ದರೂ, ಅವುಗಳನ್ನು ನಿಯಂತ್ರಿಸುವುದು ಒಬ್ಬರೇ ಲೋಕೋ ಪೈಲಟ್ (ಚಾಲಕ).

ಮೊದಲ ಎಂಜಿನ್ ಅನ್ನು ಲೀಡ್ ಎಂಜಿನ್ (Lead Engine) ಎಂದು ಕರೆಯುತ್ತಾರೆ.

ಎರಡನೆಯದನ್ನು ಟ್ರಯಲ್ ಎಂಜಿನ್ (Trail Engine) ಎಂದು ಕರೆಯಲಾಗುತ್ತದೆ.

ಈ ಎರಡು ಎಂಜಿನ್‌ಗಳು ಒಟ್ಟಾಗಿ ಕೆಲಸ ಮಾಡಿ ರೈಲಿಗೆ ಹೆಚ್ಚಿನ ಶಕ್ತಿ, ಉತ್ತಮವಾದ ಬ್ಯಾಲೆನ್ಸ್ ಮತ್ತು ತ್ವರಿತ ವೇಗವನ್ನು ಒದಗಿಸುತ್ತವೆ.

ಭಾರತದಲ್ಲಿ ಡಬಲ್ ಎಂಜಿನ್ ಹೊಂದಿರುವ ಪ್ರಸಿದ್ಧ ರೈಲು ಮಾರ್ಗಗಳು

ಭಾರತದಲ್ಲಿ ಎತ್ತರದ ಪ್ರದೇಶಗಳನ್ನು ಸಂಪರ್ಕಿಸುವ ಐತಿಹಾಸಿಕ ಪರ್ವತ ಮಾರ್ಗಗಳು (Mountain Railways), ತೀವ್ರ ಕಡಿದಾದ ಹಳಿಗಳನ್ನು ಹೊಂದಿರುವುದರಿಂದ ಅಲ್ಲಿ ಹೆಚ್ಚಾಗಿ ಡಬಲ್ ಎಂಜಿನ್‌ಗಳನ್ನು ಬಳಸಲಾಗುತ್ತದೆ. ಇವು ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳೂ ಹೌದು.

1. ಕಲ್ಕಾ-ಶಿಮ್ಲಾ ರೈಲ್ವೆ (ಟಾಯ್ ಟ್ರೈನ್)

ಈ ಮಾರ್ಗದ ವಿಶೇಷತೆ ಏನು ಎಂದರೆ, ಪರ್ವತಗಳು, ಜಲಪಾತಗಳು ಮತ್ತು ಕಣಿವೆಗಳ ಉಸಿರುಕಟ್ಟುವ ನೋಟ. ಸುಮಾರು 800 ಕ್ಕೂ ಹೆಚ್ಚು ಸೇತುವೆಗಳು ಮತ್ತು 100 ಕ್ಕೂ ಹೆಚ್ಚು ಸುರಂಗಗಳನ್ನು ಹಾದುಹೋಗುತ್ತದೆ. ಕಡಿದಾದ ಹಾದಿಗಾಗಿ ಡಬಲ್ ಎಂಜಿನ್ ಬಳಕೆಯಾಗುತ್ತದೆ. ಈ ಮಾರ್ಗದ ಪ್ರಯಾಣದ ಅಂತರ 97 ಕಿ.ಮೀ ದೂರ ಇದೆ.

2.

ಮಾರ್ಗದ ವಿಶೇಷತೆ ಏನೆಂದರೆ ಯುನೆಸ್ಕೋ ವಿಶ್ವ ಪರಂಪರೆಯ ತಾಣ. ಕಿರಿದಾದ ಹಳಿಗಳು, ತೀಕ್ಷ್ಣವಾದ ತಿರುವುಗಳು ಮತ್ತು ಕಡಿದಾದ ಏರು (ಆರೋಹಣ) ಗಳಿಗೆ ಹೆಸರುವಾಸಿ. ಪ್ರಯಾಣದ ಅಂತರ:** ನ್ಯೂ ಜಲ್ಪೈಗುರಿಯಿಂದ ಡಾರ್ಜಿಲಿಂಗ್‌ಗೆ ಸುಮಾರು 88 ಕಿಲೋಮೀಟರ್‌ಗಳ ರಮಣೀಯ ಪ್ರಯಾಣ.

3. ನೀಲಗಿರಿ ಪರ್ವತ ರೈಲು (ಊಟಿ)

ಇದು ದಕ್ಷಿಣ ಭಾರತದಲ್ಲಿ ಕಾಗ್‌ವೀಲ್ ತಂತ್ರಜ್ಞಾನ (Cogwheel Technology) ಬಳಸುವ ಏಕೈಕ ರೈಲು ಮಾರ್ಗ. ಈ ತಂತ್ರಜ್ಞಾನವು ಕಡಿದಾದ ಇಳಿಜಾರುಗಳಲ್ಲಿ ಹತ್ತಲು ಮತ್ತು ಇಳಿಯಲು ಸಹಾಯ ಮಾಡುತ್ತದೆ. ಕಡಿದಾದ ಮಾರ್ಗದಿಂದಾಗಿ ಡಬಲ್ ಎಂಜಿನ್ ಇಲ್ಲಿ ಅತ್ಯಗತ್ಯ. ಪ್ರಯಾಣದ ಅಂತರ, ಮೆಟ್ಟುಪಾಳಯಂ ನಿಂದ ಊಟಿಗೆ ಸುಮಾರು 46 ಕಿ.ಮೀ ದೂರ.