Skip to main content
ವಿಡಿಯೋ
1/2
politics

ರಾಷ್ಟ್ರೀಯ ಪಥ ಸಂಚಲನ: ಯಾವುದೇ ಗಲಾಟೆ, ಹಿಂಸೆ ನಡೆದಿಲ್ಲ - ಗೃಹ ಸಚಿವ ಡಾ। ಜಿ. ಪರಮೇಶ್ವರ್..!

By Sushmitha R
ರಾಷ್ಟ್ರೀಯ ಪಥ ಸಂಚಲನ: ಯಾವುದೇ ಗಲಾಟೆ, ಹಿಂಸೆ ನಡೆದಿಲ್ಲ - ಗೃಹ ಸಚಿವ ಡಾ। ಜಿ. ಪರಮೇಶ್ವರ್..!

2025ನೇ ವರ್ಷದಲ್ಲಿ ರಾಜ್ಯಾದ್ಯಂತ ಆರ್‌ಎಸ್‌ಎಸ್‌ನಿಂದ (RSS) ಆಯೋಜಿಸಲಾದ ರಾಷ್ಟ್ರೀಯ ಪಥ ಸಂಚಲನ ಕಾರ್ಯಕ್ರಮಗಳು ಯಾವುದೇ ಗಲಾಟೆ, ದೊಂಬಿ ಅಥವಾ ಕೋಮುಗಲಭೆಗಳಿಲ್ಲದೆ ಶಾಂತಿಯುತವಾಗಿ ನಡೆದಿವೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಅವರು ವಿಧಾನ ಸಭೆಗೆ ಮಾಹಿತಿ ನೀಡಿದ್ದಾರೆ.

ಬಿಜೆಪಿ ಸದಸ್ಯ ವಿ. ಸುನೀಲ್‌ಕುಮಾರ್‌ ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಾದ್ಯಂತ ಒಟ್ಟು 518 ಸ್ಥಳಗಳಲ್ಲಿ ಈ ಪಥಸಂಚಲನಗಳು ನಡೆದಿದ್ದು, ಇದರಲ್ಲಿ ಒಟ್ಟು 1,44,293 ಮಂದಿ ಭಾಗವಹಿಸಿದ್ದರು ಎಂದು ಅಂಕಿ-ಅಂಶಗಳ ಸಮೇತ ತಿಳಿಸಿದ್ದಾರೆ. ANNI DESIGNER Women's Cotton Blend Floral Kurta with Pant

ಈ ಪಥಸಂಚಲನಗಳ ಸಂದರ್ಭದಲ್ಲಿ ಒಂದು ಹಿಂಸಾತ್ಮಕ ಘಟನೆಯೂ ವರದಿಯಾಗಿಲ್ಲ ಎಂಬುದು ಮಹತ್ವದ ಅಂಶವಾಗಿದೆ. ಈ ಹೇಳಿಕೆಯು ರಾಜಕೀಯ ವಲಯದಲ್ಲಿ ಮಹತ್ವ ಪಡೆದಿದೆ. ಆರ್‌ಎಸ್‌ಎಸ್‌ನ ಪಥ ಸಂಚಲನಗಳ ಕುರಿತು.ಇದನ್ನು ಓದಿ: ಬೆಳಗಾವಿ ಅಧಿವೇಶನದ ಬಳಿ ಒಂದೇ ದಿನ ಮೂರು ಬೃಹತ್ ಪ್ರತಿಭಟನೆ! ಎಲ್ಲಾ ಹೋರಾಟಕ್ಕೂ ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಭ. ಮಾಡಲಗಿ ಬೆಂಬಲ

ಆಗಾಗ ಟೀಕೆಗಳು ಮತ್ತು ಹೇಳಿಕೆಗಳನ್ನು ನೀಡುವ ರಾಜ್ಯ ಸಚಿವರಿಗೆ, ಡಾ. ಪರಮೇಶ್ವರ್‌ ಅವರ ಈ ಸ್ಪಷ್ಟನೆಯು 'ಪೆಟ್ಟು' ನೀಡಿದಂತಾಗಿದೆ. ಒಂದೇ ಒಂದು ಹಿಂಸೆಯ ವರದಿಯಾಗದ 518 ಪಥಸಂಚಲನಗಳ ಕುರಿತು ಗೃಹ ಸಚಿವರೇ ದೃಢಪಡಿಸಿರುವುದು.ಇದನ್ನು ಓದಿ: ಬೆಳಗಾವಿ ಅಧಿವೇಶನ: ಬೆಳೆಹಾನಿ ಪರಿಹಾರಕ್ಕೆ ಆಗ್ರಹ - ಸುರೇಶ್‌ ಕುಮಾರ್‌ ..!