Skip to main content
ವಿಡಿಯೋ
technology

ಜೀವರಕ್ಷಣೆಯ ಭವಿಷ್ಯಕ್ಕೆ ಹೊಸ ರೆಕ್ಕೆಗಳು: MIT ಅಭಿವೃದ್ಧಿಪಡಿಸಿದ ಏರಿಯಲ್ ಮೈಕ್ರೋಬೋಟ್‌ಗಳು!?

By Shravanthi R
ಜೀವರಕ್ಷಣೆಯ ಭವಿಷ್ಯಕ್ಕೆ ಹೊಸ ರೆಕ್ಕೆಗಳು: MIT ಅಭಿವೃದ್ಧಿಪಡಿಸಿದ ಏರಿಯಲ್ ಮೈಕ್ರೋಬೋಟ್‌ಗಳು!?

ಕೀಟಗಳಂತಹ ಚಲನೆಯನ್ನು ಅನುಸರಿಸುವ ಈ ಅತಿಸೂಕ್ಷ್ಮ ರೋಬೋಟ್‌ಗಳು ಜೀವರಕ್ಷಣೆಯ ಭವಿಷ್ಯಕ್ಕೊಂದು ಭರವಸೆ ತುಂಬಲಿದೆ. ವಿಜ್ಞಾನ ಹಾಗೂ ತಂತ್ರಜ್ಞಾನ ಸಮತೋಲಿತ ಈ ಸಾಧನೆಯು ವಿಶಿಷ್ಟ ಕೊಡುಗೆ ಎನಿಸಲಿದೆ.

ತಂತ್ರಜ್ಞಾನ ಕ್ಷೇತ್ರದಲ್ಲಿ ದಿನೇ ದಿನೇ ಅನೇಕ ಬೆಳವಣಿಗೆಗಳು ಕಂಡುಬರುತ್ತಿದೆ. ನೈಸರ್ಗಿಕ ವಿಕೋಪಗಳು ಉಂಟಾದ ಸಂದರ್ಭದಲ್ಲಿ ಜೀವರಕ್ಷಣೆ ವ್ಯವಸ್ಥೆಗಳಿಗೆ ಸವಾಲಾಗಿದ್ದ ಸಂಕೀರ್ಣತೆಗೂ ಇದೀಗ ತಂತ್ರಜ್ಞಾನ ಸಹಕರಿಸುತ್ತಿದೆ. ಈ ನಿಟ್ಟಿನಲ್ಲಿ ಪರಿಚಿತಗೊಳ್ಳುತ್ತಿದೆ, ಕೀಟಗಳಂತಹ ಅದರಲ್ಲೂ ದುಂಬಿಯನ್ನು ಹೋಲುವ ಕಿರುಗಾತ್ರದ ಹಾಗೂ ಚುರುಕಾಗಿ, ವೇಗವಾಗಿ ಹಾರಬಲ್ಲ ನೂತನ ಏರಿಯಲ್‌ ಮೈಕ್ರೋಬೋಟ್‌ಗಳು!.   

ಮಹಾ ಅವಘಡಗಳಂತಹ ಸಂಧಿಗ್ದ ಪರಿಸ್ಥಿತಿಗಳಲ್ಲಿ ಅವಶೇಷಗಳಡಿ ಸಿಲುಕಿರುವವರನ್ನು ಪತ್ತೆಹಚ್ಚಲೆಂದು ಅಮೆರಿಕಾದ ಪ್ರತಿಷ್ಠಿತ ವಿಶ್ವವಿದ್ಯಾಲಯ ಮ್ಯಾಸಚೂಸೆಟ್ಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ (MIT) ಈ ವಿಶಿಷ್ಟ ತಂತ್ರಜ್ಞಾನದ ಸಾಧನವನ್ನು ಕಂಡುಹಿಡಿದಿದ್ದಾರೆ. ಅತ್ಯಂತ ಸೂಕ್ಷ್ಮ ಹಾಗೂ ಸಣ್ಣ ಜಾಗಗಳಲ್ಲಿ ನುಸುಳಬಲ್ಲವು. ಇದುವೆ ದೊಡ್ಡ ರೋಬೋಟ್‌ಗಳು ತಲುಪಲಾರದಂತಹ ಸ್ಥಳಗಳಲ್ಲಿ ಹೊಕ್ಕು, ದಶದಿಕ್ಕುಗಳಲ್ಲೂ ಗಿರಕಿ ಹೊಡೆಯಬಲ್ಲ ಚಾಣಕ್ಷತೆಯನ್ನು ಏರಿಯಲ್‌ ಮೈಕ್ರೋಬೋಟ್‌ಗಳು ಹೊಂದಿದೆ. Fire-Boltt Talk Bluetooth Calling Smartwatch, 1.39" TFT Display with Dual Button, Hands On Voice Assistance, 120 Sports Modes, in Built Mic & Speaker (Talk, Wine)

ಇದುವೆ ಎಐ ಆಧಾರಿತ ನಿಯಂತ್ರಣ ವ್ಯವಸ್ಥೆಗೆ ಒಳಪಟ್ಟಿದ್ದು, ಇದರ ವೇಗವು, ಶೇ 450 ಹಾಗೂ ತ್ವರಿತಗತಿಯು ಶೇ.250 ರಷ್ಟಿದೆ ಎನ್ನುವ ಮಾಹಿತಿ ಸಂಶೋಧಕರ ಪ್ರಕಾರ ತಿಳಿಸಲಾಗಿದೆ. ಇದರಿಂದ ಮಾನವ ಜೀವ ರಕ್ಷಣೆ, ಪರಿಸರ ಮಾನಿಟರಿಂಗ್‌, ಅನ್ವೇಷಣೆ, ಹಾಗೂ ಪರಿಣಾಮಕಾರಿ ಹುಡುಕಾಟ, ಚುರುಕಾದ ಕಾರ್ಯಾಚರಣೆ ಕುಶಲತೆಯನ್ನು ಇದು ಸಹಕರಿಸುವುದು. ಈ ಸಂಶೋಧನೆಯಿಂದಾಗಿ ವೈಮಾನಿಕ ಸಾಮರ್ಥ್ಯದ ಮೈಕ್ರೋ-ರೋಬೋಟಿಕ್ಸ್‌ ಕಡೆಗೆ ನಿರೀಕ್ಷೆಗಳು ಹೆಚ್ಚಾಗಿಸಿವೆ ಎನ್ನಲಾಗಿದೆ. ಇದನ್ನೂ ಓದಿ: ದಕ್ಷಿಣ ದೆಹಲಿಯ ಭವ್ಯ ಶಕ್ತಿಪೀಠ: ಛತ್ತರ್‌ಪುರ ಶ್ರೀ ಆದ್ಯ ಕಾತ್ಯಾಯನಿ ದೇವಸ್ಥಾನ