ನಟ ಶಿವರಾಜ್‌ಕುಮಾರ್ ಅಭಿನಯದ ‘45’ ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಭಾರಿ ಮೆಚ್ಚುಗೆ ಪಡೆದುಕೊಂಡಿದೆ. ಟ್ರೇಲರ್‌ನಲ್ಲಿ ಶಿವಣ್ಣ ಸೀರೆ ಉಟ್ಟು ಕಾಣಿಸಿಕೊಳ್ಳುವ ಪಾತ್ರ ಎಲ್ಲರ ಗಮನ ಸೆಳೆದಿದೆ. ಈ ಅವತಾರವನ್ನು ನೋಡಿದ ಸಿನಿ ಪ್ರೇಕ್ಷಕರಿಗೆ ಈ ಹಿಂದೆ ‘ಸು ಫ್ರಮ್ ಸೋ’ ಸಿನಿಮಾದಲ್ಲಿ ಜೆಪಿ ತುಮ್ಮಿನಾಡು ಸೀರೆ ಲುಕ್ ನೆನಪಾಗುತ್ತಿದೆ. ವಿಭಿನ್ನ ಕಥೆ ಮತ್ತು ಹೊಸ ಪ್ರಯೋಗಗಳಿಂದ ‘45’ ಸಿನಿಮಾ ಈಗಾಗಲೇ ಕುತೂಹಲ ಮೂಡಿಸಿದೆ.Arayna Women's Cotton Printed Floral Straight Kurta with Palazzo Pants and Dupatta
ಈ ಚಿತ್ರದ ಮೂಲಕ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ನಿರ್ದೇಶಕರಾಗಿ ಪದಾರ್ಪಣೆ ಮಾಡಿದ್ದಾರೆ. ಮೊದಲ ಚಿತ್ರದಲ್ಲೇ ಅವರು ವಿಭಿನ್ನ ಆಲೋಚನೆ ಮತ್ತು ದೃಶ್ಯ ವೈಭವವನ್ನು ತೋರಿಸಿದ್ದಾರೆ. ಹುಟ್ಟು ಮತ್ತು ಸಾವಿನ ನಡುವಿನ ಜೀವನವೇ ಈ ಚಿತ್ರದ ಕೇಂದ್ರ ಬಿಂದು ಎನ್ನಲಾಗುತ್ತಿದೆ. ಟ್ರೇಲರ್ ತುಂಬಾ ಗ್ರಾಫಿಕ್ಸ್ ಕೆಲಸ ಗಮನ ಸೆಳೆಯುತ್ತಿದ್ದು, ಪ್ರೇಕ್ಷಕರ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.ವ್ಯಕ್ತಿತ್ವ ಹಕ್ಕುಗಳ ರಕ್ಷಣೆ: ದೆಹಲಿ ಹೈಕೋರ್ಟ್ ಮೊರೆ ಹೋದ ಸಲ್ಮಾನ್ ಖಾನ್..!
ಟ್ರೇಲರ್‌ನಲ್ಲಿ ಶಿವರಾಜ್‌ಕುಮಾರ್, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಅವರ ಪಾತ್ರಗಳು ಪ್ರಮುಖ ಹೈಲೈಟ್ ಆಗಿವೆ. ಗೋರಿ ಮೇಲೆ ಹುಟ್ಟಿದ ದಿನ ಮತ್ತು ಸಾಯುವ ದಿನಾಂಕ ಬರೆಯಲ್ಪಡುವ ದೃಶ್ಯ, ಮಧ್ಯದಲ್ಲಿರುವ ಸಣ್ಣ ಗೆರೆ ಜೀವನವನ್ನು ಸೂಚಿಸುತ್ತದೆ ಎಂಬ ಉಪೇಂದ್ರ ಅವರ ಡೈಲಾಗ್ ಪ್ರೇಕ್ಷಕರ ಮನಸ್ಸಿಗೆ ತಾಕಿದೆ. ಟ್ರೇಲರ್ ಕೊನೆಯಲ್ಲಿ ಶಿವಣ್ಣ ತಾಳುವ ವಿಭಿನ್ನ ಅವತಾರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಗ್ರಾಫಿಕ್ಸ್ ಕೆಲಸಗಳ ಕಾರಣದಿಂದಾಗಿ ಚಿತ್ರದ ಬಿಡುಗಡೆ ದಿನಾಂಕ ಮುಂದೂಡಲಾಗಿತ್ತು. ಇದೀಗ ಎಲ್ಲಾ ಕೆಲಸಗಳು ಪೂರ್ಣಗೊಂಡಿದ್ದು, ‘45’ ಸಿನಿಮಾ ಡಿಸೆಂಬರ್ 25ರಂದು ತೆರೆಗೆ ಬರಲು ಸಿದ್ಧವಾಗಿದೆ. ಟ್ರೇಲರ್‌ಗೆ ಸಿಕ್ಕಿರುವ ಉತ್ತಮ ಪ್ರತಿಕ್ರಿಯೆಯಿಂದಾಗಿ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಯಶಸ್ಸು ಕಾಣಲಿದೆ ಎಂಬ ನಿರೀಕ್ಷೆ ಮೂಡಿದೆ.