Skip to main content
ವಿಡಿಯೋ
1/2
cinema

ಈ ಸಲ ಭಾರತಕ್ಕೆ ಆಸ್ಕರ್‌ ಬರುತ್ತಾ? 15 ಸಿನಿಮಾಗಳ ಶಾರ್ಟ್‌ ಲಿಸ್ಟ್‌ನಲ್ಲಿ ʼಹೋಮ್‌ಬೌಂಡ್‌ʼ!

By Ram Chethan
ಈ ಸಲ ಭಾರತಕ್ಕೆ ಆಸ್ಕರ್‌ ಬರುತ್ತಾ? 15 ಸಿನಿಮಾಗಳ ಶಾರ್ಟ್‌ ಲಿಸ್ಟ್‌ನಲ್ಲಿ ʼಹೋಮ್‌ಬೌಂಡ್‌ʼ!

ಭಾರತದಿಂದ ಆಸ್ಕರ್‌ಗೆ ಅಧಿಕೃತವಾಗಿ ಆಯ್ಕೆಯಾದ ‘ಹೋಮ್‌ಬೌಂಡ್’ ಸಿನಿಮಾ ಈಗ ಅಂತಿಮ 15 ಸಿನಿಮಾಗಳ ಶಾರ್ಟ್ ಲಿಸ್ಟ್‌ನಲ್ಲಿ ಸ್ಥಾನ ಪಡೆದಿದೆ. ವಿದೇಶಿ ಸಿನಿಮಾ ವಿಭಾಗದಲ್ಲಿ ಬಲವಾದ ಸ್ಪರ್ಧೆ ನಡುವೆಯೂ ಈ ಸಾಧನೆ ಭಾರತೀಯ ಸಿನಿಮಾರಂಗಕ್ಕೆ ಹೆಮ್ಮೆಯ ಕ್ಷಣವಾಗಿದ್ದು, ಮುಂದಿನ ಹಂತದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.

ಭಾರತದಿಂದ ಈ ವರ್ಷ ಅಧಿಕೃತವಾಗಿಗೆ ಕಳಿಸಲಾದ ಸಿನಿಮಾ ‘ಹೋಮ್‌ಬೌಂಡ್’. ಈಗ ಈ ಸಿನಿಮಾ ಆಸ್ಕರ್‌ನ ಅತ್ಯುತ್ತಮ ವಿದೇಶಿ ಸಿನಿಮಾ ವಿಭಾಗದಲ್ಲಿ ಶಾರ್ಟ್ ಲಿಸ್ಟ್ ಆಗಿದ್ದು, ಅಂತಿಮ 15 ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಇದರಿಂದ ಭಾರತೀಯ ಸಿನಿರಸಿಕರಲ್ಲಿ ಹೊಸ ನಿರೀಕ್ಷೆ ಮೂಡಿದೆ. ಆಸ್ಕರ್ ಎಂದರೆ ವಿಶ್ವದ ಅತ್ಯುನ್ನತ ಸಿನಿಮಾ ಪ್ರಶಸ್ತಿ. ಕೆಲವೊಮ್ಮೆ ಒಳರಾಜಕೀಯದ ಮಾತುಗಳು ಕೇಳಿಬಂದರೂ, ಈ ಪ್ರಶಸ್ತಿಗೆ ಇರುವ ಗೌರವ ಕಡಿಮೆಯಾಗಿಲ್ಲ. ಭಾರತದಿಂದ ಹಲವು ಕಲಾವಿದರು ಆಸ್ಕರ್ ಗೌರವ ಪಡೆದಿದ್ದಾರೆ, ಆದರೆ ಭಾರತೀಯ ಸಿನಿಮಾವೊಂದು ಆಸ್ಕರ್ ಗೆದ್ದ ಉದಾಹರಣೆ ಇಲ್ಲ. ಈ ಹಿನ್ನೆಲೆ ‘ಹೋಮ್‌ಬೌಂಡ್’ ಶಾರ್ಟ್ ಲಿಸ್ಟ್ ಆಗಿರುವುದು ಮಹತ್ವದ ಸಾಧನೆ.

‘ಹೋಮ್‌ಬೌಂಡ್’ ಸಿನಿಮಾದಲ್ಲಿ ಇಶಾನ್ ಕಟ್ಟರ್, ವಿಶಾಲ್ ಜೇಟ್ವ ಮತ್ತು ಜಾನ್ಹವಿ ಕಪೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾ ಭಾರತದಲ್ಲಿ ಇರುವ ಜಾತಿ ವ್ಯವಸ್ಥೆ ಮತ್ತು ಧರ್ಮದ ನಡುವಿನ ಸಂಘರ್ಷಗಳ ಬಗ್ಗೆ ಕಥೆ ಹೇಳುತ್ತದೆ. ಸಾಮಾಜಿಕ ವಿಷಯವನ್ನು ಸರಳವಾಗಿ ಹೇಳಿರುವ ಈ ಸಿನಿಮಾ ಈಗಾಗಲೇ ಅಂತರರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಪ್ರದರ್ಶನ ಕಂಡು ಮೆಚ್ಚುಗೆ ಪಡೆದಿದೆ. ಅದೇ ಕಾರಣಕ್ಕೆ ಈಗ ಆಸ್ಕರ್ ರೇಸಿನಲ್ಲೂ ಈ ಸಿನಿಮಾ ಗಮನ ಸೆಳೆದಿದೆ.Arayna Women's Cotton Printed Floral Straight Kurta with Palazzo Pants and Dupatta

ಆಸ್ಕರ್ ಪ್ರಕ್ರಿಯೆಯಲ್ಲಿ ಮುಂದಿನ ಹಂತ ಬಹಳ ಮುಖ್ಯ. ಈಗ ಆಯ್ಕೆಯಾದ 15 ಸಿನಿಮಾಗಳನ್ನು ಆಸ್ಕರ್‌ನ ವಿವಿಧ ವಿಭಾಗದ ಸದಸ್ಯರು ವೀಕ್ಷಿಸುತ್ತಾರೆ. ಬಳಿಕ ಮತದಾನದ ಮೂಲಕ ಅಂತಿಮ ಐದು ಸಿನಿಮಾಗಳನ್ನು ಆಯ್ಕೆ ಮಾಡಲಾಗುತ್ತದೆ. ಆ ಐದು ಸಿನಿಮಾಗಳೇ ಅಧಿಕೃತವಾಗಿ ಆಸ್ಕರ್ ನಾಮಿನೇಟೆಡ್ ಸಿನಿಮಾಗಳಾಗುತ್ತವೆ. ಆ ಐದರಲ್ಲಿ ಒಂದೇ ಸಿನಿಮಾ ಕೊನೆಗೆ ಆಸ್ಕರ್ ಪ್ರಶಸ್ತಿಯನ್ನು ಗೆಲ್ಲಲಿದೆ.

ಆದರೆ ‘ಹೋಮ್‌ಬೌಂಡ್’ಗೆ ಪೈಪೋಟಿ ಸುಲಭವಲ್ಲ. ಇರಾಕ್‌ನ ‘ದಿ ಪ್ರೆಸಿಡೆಂಟ್ ಕೇಕ್’, ಪ್ಯಾಲೆಸ್ತೇನಿನ ‘ಪ್ಯಾಲೆಸ್ತೇನ್ 36’, ದಕ್ಷಿಣ ಕೊರಿಯಾದ ‘ನೋ ಅದರ್ ಚಾಯ್ಸ್’ ಸಿನಿಮಾಗಳು ಬಲವಾದ ಸ್ಪರ್ಧಿಗಳಾಗಿವೆ. ಇದಲ್ಲದೆ, ಆಸ್ಕರ್ ಗೆಲ್ಲಲು ಕೇವಲ ಒಳ್ಳೆಯ ಸಿನಿಮಾ ಇದ್ದರೆ ಸಾಕಾಗುವುದಿಲ್ಲ. ಜಾಗತಿಕ ಮಟ್ಟದಲ್ಲಿ ಭಾರಿ ಪ್ರಚಾರ ಮತ್ತು ಕ್ಯಾಂಪೇನ್ ಅಗತ್ಯವಾಗುತ್ತದೆ.ಇದನ್ನು ಓದಿ:ಗಿಲ್ಲಿ ವಿರುದ್ಧ ನಡೀತಿದ್ಯಾ ಸಂಚು? ಇಲ್ಲಿದೆ ಮಾಜಿ ಸ್ಪರ್ಧಿ ವಿನಯ್‌ ಗೌಡ ಬಿಚ್ಚಿಟ್ಟ ಮಾಹಿತಿ..!

‘ಹೋಮ್‌ಬೌಂಡ್’ ಸಿನಿಮಾ ಸುಮಾರು 30 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದೆ. ಆದರೆ ಆಸ್ಕರ್ ಪ್ರಚಾರಕ್ಕೆ ಇದಕ್ಕಿಂತ ಎರಡು ಅಥವಾ ಮೂರು ಪಟ್ಟು ಹಣ ಬೇಕಾಗುವ ಸಾಧ್ಯತೆ ಇದೆ. ನಿರ್ಮಾಪಕರು ಈ ಮಟ್ಟದ ಪ್ರಚಾರಕ್ಕೆ ಸಿದ್ಧರಾಗುವರೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೂ ಶಾರ್ಟ್ ಲಿಸ್ಟ್ ಆಗಿರುವುದೇ ದೊಡ್ಡ ಸಾಧನೆ. ಮುಂದಿನ ದಿನಗಳಲ್ಲಿ ‘ಹೋಮ್‌ಬೌಂಡ್’ ಆಸ್ಕರ್ ನಾಮಿನೇಷನ್‌ವರೆಗೆ ತಲುಪುತ್ತದೆಯೇ ಎಂಬುದನ್ನು ನೋಡಲು ಸಿನಿಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ.