ತೆಲುಗು ನಟಿ ನಿಧಿ ಅಗರ್‌ವಾಲ್ ಹೈದರಾಬಾದ್‌ನ ಲೂಲು ಮಾಲ್‌ನಲ್ಲಿ ನಡೆದ ‘ರಾಜಾಸಾಬ್’ ಚಿತ್ರದ ಪ್ರಚಾರ ಕಾರ್ಯಕ್ರಮದ ವೇಳೆ ಅಸಹ್ಯ ಅನುಭವ ಎದುರಿಸಿದ್ದಾರೆ. ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯ ಅಭಿಮಾನಿಗಳು ಸೇರಿದ್ದರಿಂದ ಪರಿಸ್ಥಿತಿ ನಿಯಂತ್ರಣ ತಪ್ಪಿದೆ. ಜನರು ಸೆಲ್ಫಿಗಾಗಿ ಮುಗಿ ಬಿದ್ದಾಗ, ಕೆಲ ಕಿಡಿಗೇಡಿಗಳು ಅನುಚಿತವಾಗಿ ವರ್ತಿಸಿ ದೇಹವನ್ನು ಮುಟ್ಟಲು ಪ್ರಯತ್ನಿಸಿದ್ದಾರೆ. ಇದರಿಂದ ನಿಧಿ ಮುಜುಗರಕ್ಕೊಳಗಾಗಿದ್ದು, ಅವರ ಅಸಹಜ ಪ್ರತಿಕ್ರಿಯೆ ಇರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸಾಮಾನ್ಯವಾಗಿ ನಟಿ-ನಟರು ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಅಭಿಮಾನಿಗಳ ಉತ್ಸಾಹ ಹೆಚ್ಚಿರುತ್ತದೆ. ಆದರೆ ಕೆಲ ಸಂದರ್ಭಗಳಲ್ಲಿ ಜನಸಂದಣಿ ಅತಿಯಾದಾಗ ಅದು ಕಿರುಕುಳದ ರೂಪ ಪಡೆದುಕೊಳ್ಳುತ್ತದೆ. ಸಿಕ್ಕ ಅವಕಾಶವನ್ನು ದುರುಪಯೋಗಪಡಿಸಿಕೊಂಡು ತಪ್ಪಾಗಿ ವರ್ತಿಸುವವರೂ ಇರುತ್ತಾರೆ. ನಿಧಿ ಅಗರ್‌ವಾಲ್ ಅವರಿಗೂ ಇದೇ ರೀತಿಯ ಪರಿಸ್ಥಿತಿ ಎದುರಾಗಿದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋಗಳು ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.Safari Command 40L Formal Laptop Backpack Bag for Man and Women with suitcase compartment & USB Port, Ideal for Office Use/Work Trips, Large School/College Bags for boys & girls, Expandable size
ನಿಧಿ ಅಗರ್‌ವಾಲ್ ಆಂಧ್ರದಲ್ಲಿ ಜನಿಸಿದರೂ, ತಮ್ಮ ಶಿಕ್ಷಣವನ್ನು ಬೆಂಗಳೂರಿನಲ್ಲಿ ಪೂರ್ಣಗೊಳಿಸಿದ್ದಾರೆ. 2017ರಲ್ಲಿ ಚಿತ್ರರಂಗಕ್ಕೆ ಪ್ರವೇಶಿಸಿದ ಅವರು ‘ಇಸ್ಮಾರ್ಟ್ ಶಂಕರ್’ ಸಿನಿಮಾದಿಂದ ಹೆಚ್ಚು ಜನಪ್ರಿಯರಾದರು. ಇದೀಗ ಪ್ರಭಾಸ್ ಅಭಿನಯದ ‘ರಾಜಾಸಾಬ್’ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ಚಿತ್ರದ ಪ್ರಚಾರ ಕಾರ್ಯಕ್ರಮದ ವೇಳೆ ಅವರಿಗೆ ಈ ಅಹಿತಕರ ಅನುಭವ ಆಗಿದೆ.ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟ ರವಿಚಂದ್ರನ್… ಇಲ್ಲಿದೆ ಕ್ರೇಜಿಸ್ಟಾರ್ ಮೊದಲ ಲವ್ ಸ್ಟೋರಿ ಮಾಹಿತಿ
ಹೈದರಾಬಾದ್‌ನ ಲೂಲು ಮಾಲ್‌ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನಿರ್ದೇಶಕ ಮಾರುತಿ ಕೂಡ ಭಾಗವಹಿಸಿದ್ದರು. ಊಹೆಗಿಂತ ಹೆಚ್ಚು ಜನ ಸೇರಿದ್ದರಿಂದ ಭದ್ರತಾ ವ್ಯವಸ್ಥೆ ಸಾಕಾಗಲಿಲ್ಲ ಎನ್ನಲಾಗಿದೆ. ಕಾರ್ಯಕ್ರಮ ಮುಗಿಸಿ ಹೊರಬರುವಾಗ ಜನರು ನಿಧಿಯನ್ನು ಸುತ್ತುವರಿದಿದ್ದು, ಕೆಲವರ ವರ್ತನೆ ಅವರಿಗೆ ಕಿರುಕುಳದಂತೆ ಅನುಭವವಾಗಿದೆ. ಈ ಘಟನೆ ನಟಿಯರ ಭದ್ರತೆ ಕುರಿತು ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ.