‘ಬಿಗ್ ಬಾಸ್ ಕನ್ನಡ ಸೀಸನ್ 12’ ದಿನೇದಿನೇ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಕಳೆದ ವಾರ ರಕ್ಷಿತಾ ಹಾಗೂ ಧ್ರುವಂತ್ ಅವರನ್ನು ಫೇಕ್ ಎಲಿಮಿನೇಷನ್ ಮೂಲಕ ಸೀಕ್ರೆಟ್ ರೂಂಗೆ ಕಳುಹಿಸಲಾಗಿತ್ತು. ಅವರು ಮನೆಯೊಳಗಿನ ಆಟವನ್ನು ಹೊರಗಿಂದಲೇ ಗಮನಿಸುತ್ತಿದ್ದಾರೆ. ಈ ವಾರ ಇಬ್ಬರೂ ಮತ್ತೆ ದೊಡ್ಮನೆಗೆ ಪ್ರವೇಶಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇದರಿಂದ ಆಟಗಾರರ ನಡುವೆ ಮತ್ತಷ್ಟು ಬದಲಾವಣೆಗಳು ಆಗುವ ನಿರೀಕ್ಷೆ ಇದೆ.Arayna Women's Cotton Printed Floral Straight Kurta with Palazzo Pants and Dupatta
ಈ ವಾರ ಕೆಲ ಸ್ಪರ್ಧಿಗಳು ಎಲಿಮಿನೇಷನ್‌ಗೆ ನಾಮಿನೇಟ್ ಆಗಿದ್ದರೂ ವೋಟಿಂಗ್ ಲೈನ್ ತೆರೆಯಲಾಗಿಲ್ಲ. ಇದರಿಂದ ಸಾಮಾನ್ಯ ಎಲಿಮಿನೇಷನ್ ನಡೆಯದೇ ಇರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಬದಲಾಗಿ, ವೈಲ್ಡ್ ಕಾರ್ಡ್ ಮೂಲಕ ಬಂದ ರಜತ್ ಹಾಗೂ ಚೈತ್ರಾ ಕುಂದಾಪುರ ಈ ವಾರ ಮನೆಯಿಂದ ಹೊರ ಹೋಗುವ ಸಾಧ್ಯತೆ ಹೆಚ್ಚಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.ಇದನ್ನು ಓದಿ:ಪಾಕಿಸ್ತಾನದಲ್ಲಿ ಬ್ಯಾನ್ ಆದರೂ ಸೂಪರ್ ಹಿಟ್ ಆದ ‘ಧುರಂಧರ್’: ರಣವೀರ್ ಸಿಂಗ್ ಸ್ಪೈ ಅವತಾರಕ್ಕೆ ಭರ್ಜರಿ ಪ್ರತಿಕ್ರಿಯೆ
ಬಿಗ್ ಬಾಸ್ ಶೋ ಮುಗಿಯಲು ಇನ್ನು ಕೆಲವೇ ವಾರಗಳು ಬಾಕಿ ಇದ್ದು, ಈಗಲೂ 13 ಮಂದಿ ಸ್ಪರ್ಧಿಗಳು ಉಳಿದಿದ್ದಾರೆ. ಸ್ಪರ್ಧಿಗಳ ಸಂಖ್ಯೆಯನ್ನು ಕಡಿಮೆ ಮಾಡುವುದು ಅನಿವಾರ್ಯವಾಗಿರುವ ಕಾರಣ ಈ ವಾರ ಡಬಲ್ ಎಲಿಮಿನೇಷನ್ ನಡೆಯಬಹುದು ಎಂಬ ನಿರೀಕ್ಷೆ ಇದೆ. ಕಳೆದ ವಾರ ಯಾರನ್ನೂ ಹೊರಗೆ ಕಳುಹಿಸದ ಕಾರಣ ಈ ವಾರ ದೊಡ್ಡ ನಿರ್ಧಾರ ಆಗುವ ಸಾಧ್ಯತೆ ಹೆಚ್ಚು.
ಈ ಸೀಸನ್‌ನಲ್ಲಿ ವೀಕ್ಷಕರ ಊಹೆಗೆ ವಿರುದ್ಧವಾಗಿ ಹಲವು ಟ್ವಿಸ್ಟ್‌ಗಳು ನಡೆಯುತ್ತಿವೆ. ವೋಟಿಂಗ್ ಲೈನ್ ತೆರೆಯದೇ ಇರುವುದೇ ಮತ್ತೊಂದು ಕುತೂಹಲಕ್ಕೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಬಿಗ್ ಬಾಸ್ ಇನ್ನೊಂದು ಅಚ್ಚರಿಯ ತಿರುವು ನೀಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ವೀಕ್ಷಕರು ಈಗಾಗಲೇ ಮುಂದೇನು ನಡೆಯಲಿದೆ ಎಂಬ ಕುತೂಹಲದಲ್ಲಿ ಕಾದು ಕುಳಿತಿದ್ದಾರೆ.