ಸತೀಶ್ ಜಾರಕಿಹೊಳಿ ಅವರ ಮನೆಗೆ ಊಟಕ್ಕೆ ಹೋಗುವುದು ಹೊಸದೇನಲ್ಲ ಎಂದು ಭೈರತಿ ಸುರೇಶ್ ತಿಳಿಸಿದರು. ನಾನು ಬೆಳಗಾವಿಗೆ ಬಂದಾಗಲೆಲ್ಲಾ ಸತೀಶ್ ಅವರ ಮನೆಗೆ ಹೋಗುವುದು ತೀರಾ ಸಾಮಾನ್ಯ ಸಂಗತಿ. ಅವರು ವಿರೋಧ ಪಕ್ಷದ ನಾಯಕರಾಗಿದ್ದ ಕಾಲದಿಂದಲೂ ನಾನು ಅವರ ಮನೆಗೆ ಹೋಗುತ್ತಿದ್ದೇನೆ.ಇದರಲ್ಲಿ ಯಾವುದೇ ರಾಜಕೀಯ ವಿಶೇಷತೆ ಅಥವಾ ರಹಸ್ಯವಿಲ್ಲ, ಎಂದು ಅವರು ಸ್ಪಷ್ಟಪಡಿಸಿದರು. ನಿನ್ನೆ ರಾತ್ರಿಯ ಭೇಟಿಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಿನ್ನೆ ರಾತ್ರಿ ನಾನು ಸತೀಶ್ ಅವರ ಮನೆಗೆ ಊಟಕ್ಕೆ ಹೋಗಿರಲಿಲ್ಲ. ಮಾಧ್ಯಮಗಳಿಗೆ ಇದು ವಿಶೇಷವಾಗಿ ಕಾಣಿಸಬಹುದು, ಆದರೆ ನಮಗೆ ಇದೊಂದು ಸ್ನೇಹಪರ ಭೇಟಿಯಷ್ಟೇ.Naixa Women's Rayon