Skip to main content
ವಿಡಿಯೋ
1/2
cinema

ದರ್ಶನನ್ನು ಒಂದು ಸಲ ಭೇಟಿ ಮಾಡಿಸಿ ಎಂದು ಬೇಡಿಕೊಂಡ ಪವಿತ್ರಾ ಗೌಡ.. ಇಲ್ಲಿದೆ ಸಂಪೂರ್ಣ ಮಾಹಿತಿ..!

By Ram Chethan
ದರ್ಶನನ್ನು ಒಂದು ಸಲ ಭೇಟಿ ಮಾಡಿಸಿ ಎಂದು ಬೇಡಿಕೊಂಡ ಪವಿತ್ರಾ ಗೌಡ.. ಇಲ್ಲಿದೆ ಸಂಪೂರ್ಣ ಮಾಹಿತಿ..!

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ನ್ಯಾಯಾಲಯದ ವಿಚಾರಣೆ ಡಿಸೆಂಬರ್ 17ರಿಂದ ಆರಂಭವಾಗಿದೆ. ಮೊದಲ ದಿನ ಮೃತರ ಪೋಷಕರು ಸಾಕ್ಷಿ ಹೇಳಿದ್ದು, ಪ್ರಕರಣ ಹೊಸ ಹಂತಕ್ಕೆ ಪ್ರವೇಶಿಸಿದೆ. ಇದೇ ವೇಳೆ ಪವಿತ್ರಾ ಗೌಡ ಜೈಲು ಸೌಲಭ್ಯಗಳಿಗಾಗಿ ಮನವಿ ಮಾಡಿದ್ದು, ದರ್ಶನ್ ಭೇಟಿಗೆ ಪ್ರಯತ್ನ ನಡೆಸುತ್ತಿರುವುದು ಚರ್ಚೆಗೆ ಕಾರಣವಾಗಿದೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ನ್ಯಾಯಾಲಯದ ವಿಚಾರಣೆ ಡಿಸೆಂಬರ್ 17ರಂದು ಆರಂಭವಾಗಿದೆ. ಮೊದಲ ಹಂತದಲ್ಲಿ 17 ಮತ್ತು 18ರಂದು ವಿಚಾರಣೆ ನಡೆದಿದ್ದು, ರೇಣುಕಾಸ್ವಾಮಿ ಅವರ ತಂದೆ ಕಾಶೀನಾಥಯ್ಯ ಹಾಗೂ ತಾಯಿ ರತ್ನಪ್ರಭಾ ಅವರು ನ್ಯಾಯಾಲಯದಲ್ಲಿ ಸಾಕ್ಷಿ ಹೇಳಿದ್ದಾರೆ. ಅವರ ಹೇಳಿಕೆಗಳನ್ನು ಅಧಿಕೃತವಾಗಿ ದಾಖಲಿಸಲಾಗಿದೆ. ಈ ಪ್ರಕರಣದ ಮುಂದಿನ ವಿಚಾರಣೆ ಡಿಸೆಂಬರ್ 29ರಂದು ನಡೆಯಲಿದೆ.Nasher Miles Berlin Expander Soft-Sided Polyester Check-in Luggage 28 inch | 75cm | 8 Wheels Large Trolley Bag for Travel | Suitcase (Navy Blue)

ಈ ನಡುವೆ ಕೇಸ್‌ ಟ್ರಯಲ್ ಶುರುವಾಗುತ್ತಿದ್ದಂತೆ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ಪವಿತ್ರಾ ಗೌಡ ಅವರ ಆತಂಕ ಹೆಚ್ಚಾಗಿದೆ ಎನ್ನಲಾಗಿದೆ. ದರ್ಶನ್‌ಗೆ ಜೈಲಿನಲ್ಲಿ ಟಿವಿ ಸೌಲಭ್ಯ ದೊರೆತ ಬೆನ್ನಲ್ಲೇ, ತನಗೂ ಟಿವಿ, ರೇಡಿಯೋ, ಪತ್ರಿಕೆ ಓದುವ ಅವಕಾಶ, ಮನೆ ಊಟ ಹಾಗೂ ಧ್ಯಾನ ಮಾಡಲು ಅವಕಾಶ ನೀಡಬೇಕು ಎಂದು ಪವಿತ್ರಾ ಗೌಡ ಅವರು ತಮ್ಮ ವಕೀಲ ಬಾಲನ್ ಮೂಲಕ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.ಮಲಯಾಳಂ ಚಿತ್ರರಂಗದ ನಟ, ನಿರ್ದೇಶಕ ಹಾಗೂ ಬರಹಗಾರ ಶ್ರೀನಿವಾಸನ್ ಇನ್ನಿಲ್ಲ, ಅಭಿಮಾನಿಗಳಿಗೆ ಆಘಾತ

ಇದಷ್ಟೇ ಅಲ್ಲದೆ, ದರ್ಶನ್ ಅವರನ್ನು ಭೇಟಿಯಾಗಲು ಪವಿತ್ರಾ ಗೌಡ ಹಲವು ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ. ಪ್ರಕರಣದ ವಿಚಾರಣೆ ಮುಂದುವರಿದಂತೆ ಈ ಕೇಸ್ ಮತ್ತಷ್ಟು ಕುತೂಹಲ ಮೂಡಿಸಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ನ್ಯಾಯಾಂಗ ಪ್ರಕ್ರಿಯೆ ಇದೀಗ ಪ್ರಮುಖ ಹಂತಕ್ಕೆ ತಲುಪಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಮಹತ್ವದ ಬೆಳವಣಿಗೆಗಳು ಸಂಭವಿಸುವ ಸಾಧ್ಯತೆ ಇದೆ.