ಗೂಗಲ್ ತನ್ನ ಜಿ-ಮೇಲ್ ಬಳಕೆದಾರರಿಗೆ ಯೂಸರ್ ನೇಮ್ ಬದಲು ಮಾಡಿಕೊಳ್ಳುವ ಅವಕಾಶವನ್ನು 2026 ರಿಂದ ಒದಗಿಸಲು ಮುಂದಾಗಿರುವುದಾಗಿ ವರದಿಯು ತಿಳಿಸಿದೆ ಎನ್ನಲಾಗಿದೆ.
ಹಲವು ವರ್ಷಗಳಿಂದ ಜಿ-ಮೇಲ್ ಬಳಕೆದಾರರು ಗೂಗಲ್ ಮೇಲ್ ಅನ್ನು ಬಳಸುತ್ತಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ, ಗೂಗಲ್ ತನ್ನ ಬಳಕೆದಾರರಿಗೆ ಹೊಸ ಬದಲಾವಣೆಯನ್ನು ಪರಿಚಯಿಸುತ್ತಿದೆ. ಬಳಕೆದಾರರಿಗೆ ಜಿ-ಮೇಲ್ ಐಡಿ ಯೂಸರ್ ನೇಮ್( xyz@gmail.com) ಬದಲಿಸಿಕೊಳ್ಳಲು ಅವಕಾಶ ನೀಡುತ್ತಿದೆ. ಈ ಸುಧಾರಣೆ ವೇಳೆ ನಿಮ್ಮ ಹಳೆಯ ಡೇಟಾ ಹಾಗೂ ಫೈಲ್ಸ್ ಡಿಲೀಟ್ ಆಗದಿರುವುದು ಇದರ ವಿಶೇಷತೆ ಎನ್ನಲಾಗಿದೆ. Sonata Bi Metal Breeze Quartz White Round Dial Men's Watch | Stainless Steel Material | Multi Color Band - SP70070KM01
ಈ ವೈಶಿಷ್ಟ್ಯವನ್ನು 2026 ರ ಪ್ರಾರಂಭದಲ್ಲಿ ಪರಿಚಯಿಸುವ ನಿರೀಕ್ಷೆಯಿದೆ ಎನ್ನಲಾಗಿದೆ. ಹಳೆಯ ಅಥವಾ ವೃತ್ತಿಪರವಲ್ಲದ ಇ-ಮೇಲ್‌ಗಳನ್ನು ಹೊಂದಿದ ಅತೃಪ್ತರಿಗೆ ಈ ನವೀಕರಣವು ಸಹಕಾರಿಯಾಗಲಿದ್ದು, ಸದ್ಯಕ್ಕೆ ಇದು ವೈಯಕ್ತಿಕ ಖಾತೆಗಳಿಗೆ ಮಾತ್ರ ಲಭ್ಯವಿದೆ ಎನ್ನಲಾಗಿದೆ. ಇದರಲ್ಲಿ ಈ ಕೆಳಗಿನ ಸುಧಾರಣೆಗಳನ್ನು ಹೊಂದಿರುತ್ತದೆ ಎಂದು ತಿಳಿಸಲಾಗಿದೆ:
ಅಲಿಯಾಸ್ ವ್ಯವಸ್ಥೆ: ನಿಮ್ಮ ಹಳೆಯ ಮೇಲ್ ಕಣ್ಮರೆಯಾಗದೇ, ಒಂದು ಅಲಿಯಾಸ್ ಆಗಿ ಕೆಲಸ ಮಾಡಲಿದೆ. ಅಂದರೆ, ನಿಮ್ಮ ಹಳೆಯ ಮೇಲ್ ವಿಳಾಸಕ್ಕೆ ಇಮೇಲ್ ಮಾಡಿದರೆ, ಹೊಸ ಮೇಲ್ ಐಡಿಯ ಇನ್‌ಬಾಕ್ಸ್‌ಗೆ ಬಂದು ತಲುಪಲಿದೆ ಎನ್ನಲಾಗಿದೆ.
ಡೇಟಾ ಸಂರಕ್ಷಣೆ: ನೀವು ಮೇಲ್ ವಿಳಾಸ ಬದಲಿಸಿದರೂ, ನಿಮ್ಮ ಗೂಗಲ್ ಖಾತೆಗಳಿಗೆ ಸಂಯೋಜಿತವಾಗಿರುವ ಡೇಟಾ ಹಾಗೂ ಸೌರ್ಸ್‌ಗಳು ಸುರಕ್ಷಿತವಾಗಿರಲಿವೆ.
ಬಳಕೆಯ ಮಿತಿಗಳು: ಒಂದು ಇ-ಮೇಲ್ ವಿಳಾಸವನ್ನು ವರ್ಷಕ್ಕೆ ಒಮ್ಮೆ ಮಾತ್ರ ಬದಲಿಸಬಹುದಾಗಿದೆ. ಗರಿಷ್ಠ ಮೂರು ಬಾರಿ ಮಾತ್ರ ಮೇಲ್ ವಿಳಾಸ ಬದಲಿಸಲು ಅವಕಾಶವಿರುತ್ತದೆ. ಹೊಸ ಮೇಲ್ ವಿಳಾಸವನ್ನು ಬದಲಿಸಿದ ನಂತರ 12 ತಿಂಗಳ ಕಾಲ ಬದಲಿಸಲಾಗುವುದಿಲ್ಲ.
ಇದಕ್ಕಾಗಿ ನಿಮ್ಮ ಗೂಗಲ್ ಮೇಲ್ ಖಾತೆಯ ಸೆಟ್ಟಿಂಗ್‌ನಲ್ಲಿ See all settings > Accounts and Import > send mail as > edit info > save changes ಮುಖಾಂತರ ಬದಲಿಸಿಕೊಳ್ಳಬಹುದಾಗಿದೆ.
ಒಮ್ಮೆ ಬಳಕೆದಾರ ಹೆಸರನ್ನು ಬದಲು ಮಾಡಿದ ನಂತರ, ಹಳೆಯ ವಿಳಾಸವು ಮೂಲ ಬಳಕೆದಾರರೊಂದಿಗೆ ಶಾಶ್ವತವಾಗಿ ಸಂಪರ್ಕ ಹೊಂದಿರುತ್ತದೆ ಹಾಗೂ ಇತರರು ಅದನ್ನು ಕ್ಲೈಮ್ ಮಾಡುವುದನ್ನು ತಡೆಯುತ್ತದೆ. ವರದಿಗಳ ಪ್ರಕಾರ, ಈ ನವೀಕರಣಗಳು ಮತ್ತಷ್ಟು ಖಾತರಿ ಮಾಹಿತಿಯನ್ನು ತಿಳಿಸಲಾಗಿ, ಜಾಗತಿಕವಾಗಿ ಅದರ ಪೂರ್ಣ ಲಭ್ಯತೆ ಕ್ರಮೇಣ ಜಾರಿಯಾಗುವುದಾಗಿ ತಿಳಿಸಿದೆ. ಇದನ್ನೂ ಓದಿ: ನಿಮ್ಮ ವ್ಯಕ್ತಿತ್ವಕ್ಕೆ ಒಪ್ಪುವ ದೇವಾಲಯ ಯಾವುದು? ಆತ್ಮ ಮತ್ತು ದೈವಿಕ ಶಕ್ತಿಯ ನಡುವಿನ ನಂಟು ಇಲ್ಲಿದೆ..!