ಆಂಧ್ರಪ್ರದೇಶ ಮತ್ತು ಕರ್ನಾಟಕದ ಗಡಿಭಾಗದಲ್ಲಿರುವ ಪ್ರಸಿದ್ಧ ಯಾತ್ರಾಸ್ಥಳ ಮಂತ್ರಾಲಯದಲ್ಲಿ ಈಗ ಭಾಷಾ ವಿವಾದವೊಂದು ಭುಗಿಲೆದ್ದಿದೆ. ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಮುಖ್ಯ ದ್ವಾರದಲ್ಲಿರುವ ಕನ್ನಡ ನಾಮಫಲಕದ ಕುರಿತು ತೆಲುಗು ಭಾಷಿಕರು ಆಕ್ಷೇಪ ವ್ಯಕ್ತಪಡಿಸುತ್ತಿರುವುದು ಸಂಘರ್ಷಕ್ಕೆ ಕಾರಣವಾಗಿದೆ.
ಮಂತ್ರಾಲಯದ ಮಠದ ಮುಂಭಾಗದಲ್ಲಿ "ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯಚ..." ಎಂಬ ಗುರು ರಾಘವೇಂದ್ರರ ಪವಿತ್ರ ಶ್ಲೋಕವನ್ನು ಕನ್ನಡ ಲಿಪಿಯಲ್ಲಿ ಬರೆಯಲಾಗಿದೆ. ಈ ಫಲಕವು ಇಂದು ನಿನ್ನೆಯದಲ್ಲ, ದಶಕಗಳಿಂದಲೂ ಅಲ್ಲಿದೆ.Naixa Women's Viscose Embroidered Straight Kurta with Viscose Pant and Silk Blend Printed Dupatta Sets (NK-430)
ಆದರೆ, ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಆಕ್ಷೇಪ ಎತ್ತಿರುವ ಕೆಲವು ತೆಲುಗು ಭಾಷಿಕರು, "ಮಂತ್ರಾಲಯವು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಗೆ ಸೇರಿದೆ. ಹೀಗಿರುವಾಗ ಇಲ್ಲಿ ತೆಲುಗು ಭಾಷೆಯ ಫಲಕಕ್ಕೆ ಪ್ರಾಶಸ್ತ್ಯ ನೀಡಬೇಕು" ಎಂದು ವಾದಿಸುತ್ತಿದ್ದಾರೆ.
ಈ ವಿವಾದವು ಕೇವಲ ಸ್ಥಳೀಯ ಮಟ್ಟಕ್ಕೆ ಸೀಮಿತವಾಗದೆ ಡಿಜಿಟಲ್ ಲೋಕದಲ್ಲೂ ಸದ್ದು ಮಾಡುತ್ತಿದೆ. ಅನೇಕರು ಆಂಧ್ರಪ್ರದೇಶದ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳಿಗೆ ಈ ವಿಷಯವನ್ನು ಟ್ಯಾಗ್ ಮಾಡಿ, ಕನ್ನಡದ ಫಲಕವನ್ನು ತೆರವುಗೊಳಿಸಿ ಅಥವಾ ತೆಲುಗು ಫಲಕವನ್ನು ಅಳವಡಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ. ಇದು ಎರಡು ರಾಜ್ಯಗಳ ಭಾಷಾ ಅಭಿಮಾನಿಗಳ ನಡುವೆ ವಾಕ್ಸಮರಕ್ಕೂ ದಾರಿ ಮಾಡಿಕೊಟ್ಟಿದೆ.ಇದನ್ನು ಓದಿ: ಬೆಳಗಾವಿಯಲ್ಲಿ ಬೀದಿ ನಾಯಿಗಳ ಅಟ್ಟಹಾಸ: ಕೂದಲೆಳೆ ಅಂತರದಲ್ಲಿ ಪಾರಾದ ದಂಪತಿ-ಮಕ್ಕಳು..
ಶ್ರೀ ರಾಘವೇಂದ್ರ ಸ್ವಾಮಿಗಳು ಮೂಲತಃ ಕನ್ನಡ ನಾಡಿನವರು ಮತ್ತು ಮಾಧ್ವ ಪರಂಪರೆಯ ಮಠಗಳು ಕನ್ನಡದೊಂದಿಗೆ ಅವಿನಾಭಾವ ಸಂಬಂಧ ಹೊಂದಿವೆ ಎಂಬುದು ಕನ್ನಡಿಗರ ವಾದ. ಮಂತ್ರಾಲಯಕ್ಕೆ ಬರುವ ಭಕ್ತರಲ್ಲಿ ಬಹುಪಾಲು ಜನರು ಕರ್ನಾಟಕದವರಾಗಿದ್ದಾರೆ. ಭಕ್ತಿಯ ಕ್ಷೇತ್ರದಲ್ಲಿ ಭಾಷೆಯ ಹಸ್ತಕ್ಷೇಪ ಅನಗತ್ಯ ಎಂಬ ಅಭಿಪ್ರಾಯವೂ ಕೇಳಿಬರುತ್ತಿದೆ.ಇದನ್ನು ಓದಿ: ಕೋಗಿಲು ಲೇಔಟ್ ತೆರವು ಕಾರ್ಯಾಚರಣೆ: 'ಬುಲ್ಡೋಜರ್ ರಾಜ್' ಆರೋಪ ತಳ್ಳಿಹಾಕಿದ ಡಿಕೆ ಶಿವಕುಮಾರ್..!