ಕೋಗಿಲು ಲೇಔಟ್ ನಿವಾಸಿಗಳು ದೀರ್ಘಕಾಲದಿಂದ ಮೂಲಭೂತ ಸೌಕರ್ಯ ಮತ್ತು ಜಾಗದ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಅಧಿಕಾರಿಗಳ ತಂಡವು ಸ್ಥಳಕ್ಕೆ ಭೇಟಿ ನೀಡಿದ ವೇಳೆ, ಲೇಔಟ್‌ನಲ್ಲಿರುವ ಮನೆಗಳ ಸ್ಥಿತಿ, ಲಭ್ಯವಿರುವ ಭೂಮಿ ಮತ್ತು ಈ ಹಿಂದೆ ಸರ್ಕಾರ ನೀಡಿದ್ದ ಭರವಸೆಗಳ ಅನುಷ್ಠಾನದ ಬಗ್ಗೆ ಮಾಹಿತಿ ಸಂಗ್ರಹಿಸಿದೆ.
ಮುಖ್ಯವಾಗಿ, ಈ ಜಾಗವು ತಾಂತ್ರಿಕ ಕಾರಣಗಳಿಂದ ವಸತಿಗೆ ಯೋಗ್ಯವಾಗಿದೆಯೇ ಅಥವಾ ಇಲ್ಲಿರುವವರನ್ನು ಬೇರೆಡೆಗೆ ಸ್ಥಳಾಂತರಿಸಬೇಕೇ ಎಂಬ ಬಗ್ಗೆಯೂ ಪ್ರಾಥಮಿಕ ಚರ್ಚೆಗಳು ನಡೆದಿವೆ.Women’s Winter Woolen Anarkali Kurta with Palazzo & Stole | Stylish Warm Ethnic Wear Set for Women
ಅಧಿಕಾರಿಗಳು ಸಲ್ಲಿಸುವ ವರದಿಯ ಆಧಾರದ ಮೇಲೆ ಡಿ.ಸಿ.ಎಂ ಅವರು ಸಂತ್ರಸ್ತರಿಗೆ ಸುಸಜ್ಜಿತ ಪುನರ್ ವಸತಿ ಕಲ್ಪಿಸುವ ಘೋಷಣೆ ಮಾಡಬಹುದು ಎನ್ನಲಾಗುತ್ತಿದೆ. ಒಂದು ವೇಳೆ ಅದೇ ಸ್ಥಳದಲ್ಲಿ ವಾಸಕ್ಕೆ ಅವಕಾಶವಿದ್ದರೆ, ಅಕ್ರಮ-ಸಕ್ರಮದ ಅಡಿಯಲ್ಲಿ ಹಕ್ಕುಪತ್ರ ನೀಡುವ ಸಾಧ್ಯತೆಯೂ ಇದೆ.
ನಾವು ಹಲವು ವರ್ಷಗಳಿಂದ ಅತಂತ್ರ ಸ್ಥಿತಿಯಲ್ಲಿದ್ದೇವೆ. ಪ್ರತಿಬಾರಿ ಚುನಾವಣೆ ಬಂದಾಗ ಭರವಸೆಗಳು ಸಿಗುತ್ತವೆ, ಆದರೆ ಈ ಬಾರಿ ಅಧಿಕಾರಿಗಳ ಭೇಟಿಯಿಂದ ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ, ಎಂದು ಸ್ಥಳೀಯರು ಹೇಳಿದ್ದಾರೆ. ಇದನ್ನು ಓದಿ: ಅರಾವಳಿ ಪರ್ವತಶ್ರೇಣಿ ಸಂರಕ್ಷಣೆ: ಇಂದು ಸುಪ್ರೀಂ ಕೋರ್ಟ್‌ನಲ್ಲಿ ಮಹತ್ವದ ವಿಚಾರಣೆ!
ಮಳೆಗಾಲದಲ್ಲಿ ಎದುರಾಗುವ ಸಮಸ್ಯೆಗಳು ಮತ್ತು ಕನಿಷ್ಠ ಸೌಲಭ್ಯಗಳ ಕೊರತೆಯಿಂದ ಬೇಸತ್ತಿರುವ ನಿವಾಸಿಗಳು, ಶಾಶ್ವತ ಪರಿಹಾರಕ್ಕಾಗಿ ಆಗ್ರಹಿಸುತ್ತಿದ್ದಾರೆ. ರಾಜೀವ್ ಗಾಂಧಿ ವಸತಿ ನಿಗಮದ ಅಧಿಕಾರಿಗಳು ತಮ್ಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ ತಕ್ಷಣ, ನಗರಾಭಿವೃದ್ಧಿ ಇಲಾಖೆಯು ಅಂತಿಮ ತೀರ್ಮಾನ ಕೈಗೊಳ್ಳಲಿದೆ. ಡಿಸಿಎಂ ಅವರು ಕೋಗಿಲು ಲೇಔಟ್ ನಿವಾಸಿಗಳಿಗೆ ಹೊಸ ಬದುಕು ಕಟ್ಟಿಕೊಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.ಇದನ್ನು ಓದಿ: ಗೃಹಲಕ್ಷ್ಮಿ ಹಣ ಬಿಡುಗಡೆಗೆ ವಿಳಂಬ: ಸರ್ಕಾರದ ವಿರುದ್ಧ ಶಾಸಕ ಮಹೇಶ್ ಟೆಂಗಿನಕಾಯಿ ಆಕ್ರೋಶ..!