ನಗರದಲ್ಲಿ ಶ್ರೀ ಬಾದಾಮಿ ಬನಶಂಕರಿ ದೇವಿಯ ಪಂಚಲೋಹದ ನೂತನ ಉತ್ಸವ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಇದೇ ಜನವರಿ 1 ರಿಂದ 3 ನೇ ದಿನಾಂಕದಂದು ವಿವರ್ಸ್ ಕಾಲೋನಿ, ಪೈಪ್‌ಲೈನ್, ಶ್ರೀನಗರದಲ್ಲಿ ಮೂರು ದಿನಗಳ ʻಬನದ ಹುಣ್ಣಿಮೆʼ ಜಾತ್ರಾ ಮಹೋತ್ಸವವನ್ನು ನಡೆಸಲಾಗುತ್ತಿದೆ ಎಂದು ತಿಳಿಸಲಾಗಿದೆ.
ಇದೇ ಸಂದರ್ಭದಲ್ಲಿ ಭಕ್ತರ ಕುರಿತಾಗಿ “ನಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತನು-ಮನ-ಧನ-ರಾಜ್ಯ ಕೊಟ್ಟು ಅಮ್ಮನವರ ಕೃಪೆಗೆ ಪಾತ್ರರಾಗೋಣ" ಎಂದು ಶ್ರೀ ಬನಶಂಕರಿದೇವಿ ದೇವಾಲಯ, ಶ್ರೀನಗರದ ವೇ. ಬ್ರಂ, ಶ್ರೀ ಕೃಷ್ಣಮೂರ್ತಿಸ್ವಾಮಿಗಳು ಅವರಿಂದ ಕರೆ ನೀಡಲಾಗಿದೆ.
ಪ್ರತಿ ಶುಕ್ರವಾರ, ಹುಣ್ಣಿಮೆ, ಮತ್ತು ಅಮಾವಾಸ್ಯೆಗೆ ವಿಶೇಷ ಪೂಜೆ ಇರುತ್ತದೆ. ಪ್ರತಿ ಭಾನುವಾರ, ಮಂಗಳವಾರ, ಮತ್ತು ಶುಕ್ರವಾರ, ರಾಹು ಕಾಲದ ಪೂಜೆ ಇರುತ್ತದೆ ಎಂದು ತಿಳಿಸಲಾಗಿದೆ. ಹುಣ್ಣಿಮೆ ದಿನ ಗಣಪತಿ ಪೂಜೆ, ನವಗ್ರಹ ಪೂಜೆ, ಕಳಸ ಪೂಜೆ, ದುರ್ಗಾಹೋಮ, ದೇವಿಗೆ ಪಂಚಾಮೃತಾಭಿಷೇಕ, ಕುಂಕುಮಾರ್ಚನೆ, ಪುಷ್ಪಾರ್ಚನೆ ಮಂಗಳಾರತಿ ಸೇರಿದಂತೆ ವಿವಿಧ ಕೈಂಕರ್ಯಗಳು ಜರುಗಲಿವೆ ಎಂದು ತಿಳಿಸಲಾಗಿದೆ. ಶ್ರೀ ಬನಶಂಕರಿದೇವಿಗೆ ಪ್ರತಿ ಪುಷ್ಯ ಮಾಸ ಶುಕ್ಲ ಪಕ್ಷ ಹುಣ್ಣಿಮೆಯಂದು ಮಹಾ ಪೂಜೆ ರಥೋತ್ಸವ, ಉತ್ಸವ, ಅನ್ನಸಂತರ್ಪಣೆ ನಡೆಯುತ್ತದೆ. Awareness: The Key to Living in Balance (Osho Insights for a New Way of Living) Paperback – 10 December 2001
ಜಗತ್ತನ್ನು ಕಲ್ಯಾಣ ಮಾಡಲು ಭೂಮಿಗೆ ಬಂದ ದಿನವೇ ಬಂದ ಹುಣ್ಣಿಮೆ ಅಥವಾ ಬನದ ಹುಣ್ಣಿಮೆ ನಭೋ ಮಂಡಲದಿಂದ ಭೂಮಂಡಲದಲ್ಲಿರುವ ಸುಕ್ಷೇತ್ರವಾದ ಬಾದಾಮಿ ಪುರದ ತೆಂಗು ಕಂಗು ಕದಳಿ ವನಗಳ ಮಧ್ಯ ಹರಿಯುವ ಸರಸ್ವತಿ ತೀರ್ಥದ ಸನಿಹದಲ್ಲಿ ಇಂದು ಇಂದು ಬೆಳದಿಂಗಳಲ್ಲಿ ನಾಟ್ಯವನ್ನಾಡುವಾಗ 333 ಕೋಟ ದೇವತೆಗಳಾದಿಯಾಗಿ ತ್ರಿಮೂರ್ತಿಗಳು ಅಷ್ಟದಿಕ್ಷಾಲಕರು, ನವಗ್ರಹಗಳು, ಪಂಚಭೂತಗಳು, ಬ್ರಷ್ಕರ್ಷಿಗಳು ಋಷಿಮುನಿಗಳು ತಪಸ್ವಿಗಳು ಗಂಧರ್ವರು, ಕಿನ್ನರರು, ಹಿಂಪುರುಷರು. ಸಿದ್ದರು. ಸಾದ್ಯರು ಮೊದಲಾದವರು ಭಕ್ತಿಯಿಂದ ಕೈ ಮುಗಿದುಕೊಂಡು ನಾಟ್ಯವನ್ನು ವೀಕ್ಷಿಸಿ ವಿಸ್ಮಿತರಾಗಿ ಪುಷ್ಪವೃಷ್ಟಿಗೈದು ಮಾತೆಯ ಕೃಪೆಗೆ ಪಾತ್ರರಾದರು.
ನಂತರ ಅಲ್ಲಿಯೆ ನೆಲೆಗೊಂಡ ತಾಯಿಗೆ ಅಂದಿನಿಂದ ಇಂದಿನವರೆಗೂ ಪೂಜಾ ಕೈಂಕರ್ಯಗಳಲ್ಲಿ ಭಕ್ತರು ಭಕ್ತಿಯಿಂದ ಪೂಜಿಸುತ್ತಾ ಬಂದಿದ್ದಾರೆ ಇಂತಹ ಶಕ್ತಿ ದೇವತೆಯನ್ನು ನಾವೆಲ್ಲರೂ ಭಕ್ತಿ ಪೂರ್ವಕವಾಗಿ ದರ್ಶನ-ಧ್ಯಾನ ಪ್ರಾರ್ಥನೆ. ಸ್ತುತಿ ಮಾಡುವುದರ ಮೂಲಕ ಇಷ್ಟಾರ್ಥ ಸಿದ್ಧಿಸಿ ಮನಶಾಂತಿವುಂಟಾಗುವುದು. ಭಕ್ತರ ಇಚ್ಛೆಯನ್ನು ನೆರೆವೇರಿಸಿ ಅಭಯ ಹಸ್ತ ನೀಡುವಂತ ಭಗವತಿ ಮಹಾಮಾತೆಯಾದ ಶ್ರೀ ಬನಶಂಕರಿ ದೇವಿಯನ್ನು ಪೂಜಿಸಿ ಧನ್ಯರಾಗೋಣ ಬನ್ನಿರಿ ಎಂದು ಆಮಂತ್ರಿಸಲಾಗಿದೆ.
ಕಾರ್ಯಕ್ರಮಗಳ ವಿವರ -
ದಿನಾಂಕ 01-01-2026ನೇ ಗುರುವಾರ
ಬೆಳಗ್ಗೆ: 7-30 ರಿಂದ 9-30 ರವರಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ನೂತನ ಉತ್ಸವ ಮೂರ್ತಿಗೆ ಕುಂಕುಮಾರ್ಚನೆ ಮಹಾಮಂಗಳರುತಿ ಪ್ರಸಾದ ವಿನಿಯೋಗ.
ದಿನಾಂಕ 02-01-2026ನೇ ಶುಕ್ರವಾರ
ಮಧ್ಯಾಹ್ನ: 12-00 ರಿಂದ 12-30 ರವರೆಗೆ ಸಲ್ಲುವ ಶುಭ ಅಭಿಜಿತ್ ಲಗ್ನದಲ್ಲಿ ನೂತನ ಉತ್ಸವ ಮೂರ್ತಿಗೆ ಪಂಚಾಮೃತಾಭಿಷೇಶ, ಪಂಚಕಳಸಾಭಿಷೇಕ, ದುರ್ಗಾಹೋಮ, ಪೂರ್ಣಾಹುತಿ ಪ್ರಾಣ ಪ್ರತಿಷ್ಠಾಪನೆ, ನೇತ್ರೋನ್ನಿಲನ ನಂತರ ಮಹಾಮಂಗಳಾರತಿ ಪ್ರಸಾದ ವಿನಿಯೋಗ.
ದಿನಾಂಕ 03-01-2026ನೇ ಶನಿವಾರ
ಬೆಳಗ್ಗೆ 6-15 ರಿಂದ 7-15 ರವರೆಗೆ ಸಲ್ಲುವ ಶುಭ ಉದಯ ಲಗ್ನದಲ್ಲಿ ಬನದ ಹುಣ್ಣೆಮೆಯಂದು ಗಣಪತಿ ಪೂಜೆಯೊಂದಿಗೆ ಅಮ್ಮನವರಿಗೆ ಪಂಚಾಮೃತ ಅಭಿಷೇಕ-ಕುಂಕುಮಾರ್ಚನೆ ವಿಶೇಷ ಪೂಜೆ ವಜ್ರಾಂಗಿ ಅಲಂಕಾರ ಏರ್ಪಡಿಸಲಾಗಿದೆ. 11-30ಕ್ಕೆ ಮಹಾಮಂಗಳಾರತಿ ಮತ್ತು 1-00 ಘಂಟೆಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.
ಸಂಜೆ 5-30 ರಿಂದ 6-00 ಘಂಟೆಗೆ ಸಲ್ಲುವ ಶುಭ ಗೋಧೂಳಿ ಲಗ್ನದಲ್ಲಿ ಶ್ರೀ ಬಾದಾಮಿ ಬನಶಂಕರಿ ದೇವಿಯ ನೂತನ ಉತ್ಸವ ಮೂರ್ತಿಯನ್ನು - ವಿದ್ಯುತ್ ದೀಪಾಲಂಕಾರದ ರಥದಲ್ಲಿ ಮಂಗಳ ವಾದ್ಯದೊಡನೆ, ತಮಟೆ, ಡೋಲು ಮತ್ತು ಕಲಾ ತಂಡಗಳೊಂದಿಗೆ ಮುಖ್ಯಬೀದಿಗಳಲ್ಲಿ ತಾಯಿಯ ಉತ್ಸವ ಏರ್ಪಡಿಸಲಾಗಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಾಯಿಯ ಕೃಪೆಗೆ ಪಾತ್ರರಾಗಬೇಕೆಂದು ಕೋರಲಾಗಿದೆ. ಇದನ್ನೂ ಓದಿ: ಕುವೆಂಪು ಜನ್ಮ ದಿನ - ವಿಶ್ವ ಮಾನವ ದಿನ - ಚೇತನದಿಂದ ಅನಿಕೇತನದವರೆಗಿನ ದರ್ಶನ