Skip to main content
ವಿಡಿಯೋ
entertainment

ʻBandar Apna Dostʼ - ಅತಿಹೆಚ್ಚು ವೀಕ್ಷಣೆ ಪಡೆಯುತ್ತಿರುವ ಎಐ ಬಳಸಿದ ಯೂಟ್ಯೂಬ್‌ ಚಾನೆಲ್‌ - ವರ್ಷಕ್ಕೆ ₹35 ಕೋಟಿ ಗಳಿಕೆ!

By Shravanthi R
ʻBandar Apna Dostʼ - ಅತಿಹೆಚ್ಚು ವೀಕ್ಷಣೆ ಪಡೆಯುತ್ತಿರುವ ಎಐ ಬಳಸಿದ ಯೂಟ್ಯೂಬ್‌ ಚಾನೆಲ್‌ - ವರ್ಷಕ್ಕೆ ₹35 ಕೋಟಿ ಗಳಿಕೆ!

ಎಐ ಟ್ರೆಂಡ್‌ ಯೂಟ್ಯೂಬ್‌ನಲ್ಲೂ ಸದ್ದು ಮಾಡುತ್ತಿದೆ. ಕಲಾವಂತಿಕೆಯ ಸೃಜನಶೀಲತೆಗೆ ಸವಾಲಾಗಿ ಮತ್ತೊಂದೆಡೆ, ತಾಂತ್ರಿಕ ಯಶಸ್ಸಿನಂತೆ, ಈ ಎಐ ಆಧಾರಿತ ಯೂಟ್ಯೂಬ್‌ ಚಾನೆಲ್‌ ಚರ್ಚೆಗೆ ಗ್ರಾಸವಾಗಿದೆ.

ಭಾರತೀಯ ಮೂಲದ ಯೂಟ್ಯೂಬ್‌ ಚಾನೆಲ್‌ ಒಂದು ಎಐ ಬಳಕೆ ಮಾಡಿ ವಿಡಿಯೋ ಸಂಚಲನ ಸೃಷ್ಟಿಸಿದೆ. ಈ ಮೂಲಕ ಅತಿ ಹೆಚ್ಚು ವೀಕ್ಷಣೆ ಪಡೆದಿದ್ದು, `AI Slop’ ಚಾನೆಲ್‌ ಎಂದು ಗುರುತಿಸಿಕೊಂಡಿದೆ ಎನ್ನಲಾಗಿದೆ. ಹಾಗೆಂದರೆ, ಎಐ ಬಳಸಿ ತಯಾರಿಸಿದ ಡಿಜಿಟಲ್‌ ಉತ್ಪನ್ನ(ಪಠ್ಯ, ಚಿತ್ರಗಳು, ವಿಡಿಯೋಗಳು) ಜಾಹೀರಾತು, ಆನ್‌ಲೈನ್‌ ಗಮನವನ್ನು, ಹೆಚ್ಚು ವೀಕ್ಷಣೆ ಪಡೆಯುವುದಾಗಿರುತ್ತದೆ.  

ಇದು ವಿಡಿಯೋ ಎಡಿಟಿಂಗ್‌ ಫ್ಲಾಟ್‌ಫಾರ್ಮ್‌ ಕಾಪ್ವಿಂಗ್‌ ನೀಡಿರುವ ವರದಿ ಪ್ರಕಾರ, ʻBandar Apna Dostʼ ಚಾನೆಲ್‌ ವಾರ್ಷಿಕವಾಗಿ 4.25 ಮಿಲಿಯನ್‌ ಡಾಲರ್‌ನಷ್ಟು (ಅಂದಾಜು 35 -38 ಕೋಟಿ) ಆದಾಯ ಗಳಿಸುತ್ತಿದೆ ಎನ್ನಲಾಗಿದೆ. ಇದು ಮನುಷ್ಯನಂತೆ ಕಾಣುವ ಕೋತಿಯ ಮತ್ತು `ಹಲ್ಕ್‌’ ರೀತಿಯ ಪಾತ್ರವನ್ನು ಸೃಷ್ಟಿಸಿ ವಿಡಿಯೋಗಳನ್ನು ಹಂಚಿಕೊಳ್ಳಲಾಗಿದೆ. Sheetal Associates Women's Floral Puff Sleeve High Waist A Line Flowy Long Dress

ಈ ಬಗ್ಗೆ ನೆಟ್ಟಿಗರ ನಡುವೆ ಚರ್ಚೆ ಹುಟ್ಟಿಕೊಂಡಿದ್ದು, ತಂತ್ರಜ್ಞಾನ ವಲಯದಲ್ಲಿ, ಯೂಟ್ಯೂಬ್‌ ಅಲ್ಗಾರಿದಂಗಳ ಸುತ್ತ ವಿಡಿಯೋ ಫೀಡ್‌ ಗ್ರಾಸವಾಗಿದೆ. ಇದು ಮುಂದಿನ ಡಿಜಿಟಲ್‌ ಮೀಡಿಯಾ ಹಾಗೂ ಎಐ ನಿಯಂತ್ರಣ ನೀತಿಗಳ ಬಗ್ಗೆ ಚರ್ಚೆಗೆ ಕಾರಣವಾಗಿದೆ. ಇದನ್ನೂ ಓದಿ: ಗೂಗಲ್ ಡೂಡಲ್: 2025ಕ್ಕೆ ಗುಡ್‌ಬೈ ಹೇಳಿ 2026ಕ್ಕೆ ವೆಲ್‌ಕಮ್ ..!