ಕೇಂದ್ರ ಸರ್ಕಾರಿ ನೌಕರರಿಗೆ ಹೊಸ ವರ್ಷದ ಆರಂಭದಲ್ಲಿ ಭರ್ಜರಿ ಕೊಡುಗೆ ಸಿಗಲಿದೆ, ದಶಕಕ್ಕೊಮ್ಮೆ ರಚನೆಯಾಗುವ ವೇತನ ಆಯೋಗದ ಸಂಪ್ರದಾಯದಂತೆ, 8ನೇ ವೇತನ ಆಯೋಗದ ಜಾರಿಗೆ ನೌಕರರು ಕಾತರದಿಂದ ಕಾಯುತ್ತಿದ್ದಾರೆ. ಸದ್ಯ ಲಭ್ಯವಿರುವ ಮಾಹಿತಿಯಂತೆ, 2026ರ ಜನವರಿಯಿಂದ ಹೊಸ ವೇತನ ಶ್ರೇಣಿ ಜಾರಿಗೆ ಬರುವ ಸಾಧ್ಯತೆಯಿದೆ.
ವೇತನ ಹೆಚ್ಚಳದ ಅಂದಾಜು ಪಟ್ಟಿ:
ಪಿಯೋನ್ ಮತ್ತು ಗ್ರೂಪ್ ಡಿ ನೌಕರರು: ಪ್ರಸ್ತುತ ಕನಿಷ್ಠ ವೇತನ 18,000 ರೂ. ಇದ್ದು, ಇದು 45,000 ರೂ. ಗೆ ಏರಿಕೆಯಾಗುವ ಅಂದಾಜಿದೆ.
ಮಧ್ಯಮ ಹಂತದ ಅಧಿಕಾರಿಗಳು (ಲೆವೆಲ್ 10): ಇವರ ವೇತನ 56,100 ರೂ. ನಿಂದ ಸುಮಾರು 1,20,000 ರೂ. ವರೆಗೆ ಏರಬಹುದು.
ಉನ್ನತ ಮಟ್ಟದ ಅಧಿಕಾರಿಗಳು (ಸೆಕ್ರೆಟರಿ ಮಟ್ಟ): ಲೆವೆಲ್ 18ರ ನೌಕರರ ವೇತನವು 2.5 ಲಕ್ಷದಿಂದ ಬರೋಬ್ಬರಿ 5 ಲಕ್ಷ ರೂಪಾಯಿ ದಾಟುವ ನಿರೀಕ್ಷೆಯಿದೆ. Yashika Women Cotton Blend Floral Printed Kurta Plazzo Set with Dupatta Suitable For Every Indian Occasion
7ನೇ ವೇತನ ಆಯೋಗದಲ್ಲಿ ಫಿಟ್‌ಮೆಂಟ್ ಫ್ಯಾಕ್ಟರ್ 2.57 ಪಟ್ಟು ಇತ್ತು. ನೌಕರರ ಸಂಘಟನೆಗಳು ಈ ಬಾರಿ ಇದನ್ನು 3.68 ಪಟ್ಟು ಹೆಚ್ಚಿಸುವಂತೆ ಬೇಡಿಕೆ ಇಟ್ಟಿವೆ. ಒಂದು ವೇಳೆ ಸರ್ಕಾರ ಈ ಬೇಡಿಕೆಗೆ ಒಪ್ಪಿಗೆ ನೀಡಿದರೆ, ನೌಕರರ ಮೂಲ ವೇತನದಲ್ಲಿ ಭಾರಿ ಜಿಗಿತ ಕಂಡುಬರಲಿದೆ. ಇದು ಕೇವಲ ಸಂಬಳ ಮಾತ್ರವಲ್ಲದೆ, ಭತ್ಯೆಗಳು (DA, HRA) ಮತ್ತು ಪಿಂಚಣಿದಾರರ ಮೇಲೂ ಧನಾತ್ಮಕ ಪರಿಣಾಮ ಬೀರಲಿದೆ.
ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಜನವರಿ 1 ರಿಂದಲೇ ವೇತನ ಹೆಚ್ಚಳವಾಗಲಿದೆ ಎಂಬ ಸುದ್ದಿಗಳು ಹರಿದಾಡುತ್ತಿದ್ದರೂ, ಕೇಂದ್ರ ಸರ್ಕಾರದಿಂದ ಈ ಬಗ್ಗೆ ಅಧಿಕೃತ ಘೋಷಣೆ ಇನ್ನೂ ಬಾಕಿ ಇದೆ. ಸಾಮಾನ್ಯವಾಗಿ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಲು ಸರ್ಕಾರ ಸಮಿತಿಯನ್ನು ರಚಿಸಬೇಕಾಗುತ್ತದೆ. ಇದನ್ನು ಓದಿ: ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಆರೋಪ: ಪಿಎಸ್‌ಐ ಹಗರಣದ ರೂವಾರಿ ಆರ್ ಡಿ ಪಾಟೀಲ್ ಮತ್ತೆ ನ್ಯಾಯಾಂಗ ಬಂಧನಕ್ಕೆ