ಹೊಸ ವರ್ಷದ ಸಂಭ್ರಮದ ನಡುವಲ್ಲಿ ಕೇಂದ್ರ ಸರ್ಕಾರ ಹಾಗೂ ವಿವಿಧ ಹಣಕಾಸು ಸಂಸ್ಥೆಗಳು ಹೊಸ ಮಾರ್ಗಸೂಚಿಗಳನ್ನು ತಿಳಿಯಪಡಿಸಿದೆ. ಹಣಕಾಸು ಜಗತ್ತಿನಲ್ಲಿ ಮಹತ್ತರ ಬದಲಾವಣೆಯನ್ನು ಪಡೆದುಕೊಳ್ಳುತ್ತಿದ್ದು, ಉಳಿತಾಯ, 8 ನೇ ವೇತನ ಆಯೋಗದಿಂದ ಹಿಡಿದು, ಹೂಡಿಕೆಯವರೆಗೆ, ಜನರ ಮೇಲೆ ಯಾವೆಲ್ಲಾ ಅಂಶಗಳು ಪರಿಣಾಮ ಬೀರಲಿವೆ ಎಂಬ ಬಗ್ಗೆ ಸಮಗ್ರ ವರದಿ ಇದಾಗಿದೆ.
8 ನೇ ವೇತನ ಆಯೋಗದ ಸುಧಾರಣೆ
ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ, 8 ನೇ ವೇತನ ಆಯೋಗದ ಶಿಫಾರಸು ಸಿಹಿ ಸುದ್ದಿ ನೀಡಿರುವ ಬಗ್ಗೆ ಚರ್ಚೆಗಳಾಗುತ್ತಿದೆ. ಕನಿಷ್ಠ ವೇತನ ಹಾಗೂ ಭತ್ಯೆಗಳಲ್ಲಿ ಗಣನೀಯ ಏರಿಕೆಯಾಗುವ ನಿರೀಕ್ಷೆಯಿದೆ ಎನ್ನಲಾಗಿದೆ.
ತೆರಿಗೆ ರಿಯಾಯಿತಿ ಮತ್ತು ಸುಧಾರಣೆಗಳು
ತೆರಿಗೆ ಪಾವತಿಗೆ ಸಂಬಂಧಪಟ್ಟಂತೆ, ಸರ್ಕಾರವು ಇನ್ನಷ್ಟು ಸುಧಾರಣೆ ಮತ್ತು ಆಕರ್ಷಕ ರಿಯಾಯಿತಿಗಳನ್ನು ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಪ್ರಮಾಣಿತ ವಿನಾಯಿತಿ (Standard Deduction) ಮಿತಿಯನ್ನು ಹೆಚ್ಚಿಸುವ ಮೂಲಕ ಹೆಚ್ಚಿನ ಉಳಿತಾಯಕ್ಕೆ ಅನುವು ಮಾಡಿಕೊಡುವ ನಿರೀಕ್ಷೆಯಿದೆ ಎನ್ನಲಾಗಿದೆ.
ಬೆಳ್ಳಿ ಮೇಲೆ ಸಾಲ (Loan against Silver)
ಈವರೆಗೆ ಬಂಗಾರದ ಮೇಲೆ ಸುಲಭವಾಗಿ ಸಾಲಸೌಲಭ್ಯ ದೊರಕುತ್ತಿತ್ತು. ಇದೀಗ ಆರ್‌ಬಿಐ ಹೊಸ ನಿಯಮಗಳ ಬದಲಾವಣೆ ಪ್ರಕಾರವಾಗಿ, ಬ್ಯಾಂಕ್‌ಗಳು ಹಾಗೂ ಹಣಕಾಸು ಸಂಸ್ಥೆಗಳು ಬೆಳ್ಳಿ ಆಭರಣ ಅಥವಾ ಲಗತ್ತುಗಳ ಮೇಲೆ ಹಣಕಾಸು ಸಾಲ ನೀಡಲು ಮುಂದಾಗಿದೆ ಇದರಿಂದ ತುರ್ತು ಹಣದ ಅವಶ್ಯಕತೆಗೆ ಮಾರ್ಗೋಪಾಯವಾಗಲಿದೆ ಎಂದು ತಿಳಿಸಲಾಗಿದೆ.
ಹಿರಿಯ ನಾಗರೀಕರ ಉಳಿತಾಯ ಯೋಜನೆ
ಹಿರಿಯ ನಾಗರೀಕರ ಸುರಕ್ಷಿತ ಹಾಗೂ ಅತ್ಯುತ್ತಮ ಹೂಡಿಕೆ ಯೋಜನೆಯಾದ Senior Citizen saving Scheme - (SCSS) ಪ್ರಸ್ತುತ 8.2 ರಷ್ಟು ಬಡ್ಡಿದರವನ್ನು ಹೊಂದಿದೆ. ಈ ದರವು ಸ್ಥಿರ ಠೇವಣಿ (ಎಫ್‌ಡಿ) ಹೂಡಿಕೆಗೆ ಅನುವು ಮಾಡಿಕೊಡುತ್ತದೆಯಾದರಿಂದ, ಹೂಡಿಕೆ ಮತ್ತು ನಿವೃತ್ತಿ ಜೀವನ ಸಂದರ್ಭದಲ್ಲಿ ಆಸರೆಯಾಗಲಿದೆ ಎನ್ನಲಾಗಿದೆ.
ಇತರೆ ಹೂಡಿಕೆ ಮತ್ತು ಉಳಿತಾಯ ಯೋಜನೆಗಳು
ಆರ್ಥಿಕ ಸಬಲತೆಗಿರುವ ಪಿಪಿಎಫ್ - ಸಾರ್ವಜನಿಕ ಭವಿಷ್ಯ ನಿಧಿ ಹಾಗೂ ಸುಕನ್ಯಾ ಸಮೃದ್ದಿ ಯೋಜನೆಗಳ ಬಡ್ಡಿದರವನ್ನು ಮರುಪರಿಶೀಲಿಸುವ ಸಾಧ್ಯತೆಯಿದೆ. ಇನ್ನುಳಿದಂತೆ, ಉಳಿತಾಯ ಯೋಜನೆಗಳು, ತೆರಿಗೆ ರಿಯಾಯಿತಿ ಮತ್ತು ವಿಮಾ ರಕ್ಷಣಾ ಯೋಜನೆಗಳು ಸೌಲಭ್ಯಗಳನ್ನು ಒದಗಿಸಲಿದೆ ಎನ್ನಲಾಗಿದೆ. Sirona Portable Menstrual Cup Sterilizer - Pack of 1 | Microwave-Safe | Quick & Safe Cup Sterilization | Reusable, BPA-Free & Travel-Friendly | Compact Hygienic Solution for Women
ಈ ಮೂಲಕ 2026 ರಲ್ಲಿ ಆರ್ಥಿಕ ಸ್ಥಿರತೆ ಮತ್ತು ಮುಂದಿನ ಭವಿಷ್ಯತ್ತಿಗಾಗಿ ಹೊಸ ಬದಲಾವಣೆಗಳು, ಸುಧಾರಣಾ ಅವಕಾಶಗಳನ್ನು ಯೋಜನಾಬದ್ದವಾಗಿ ಸ್ವಾಗತಿಸುವುದು ಹಣಕಾಸು ನೀತಿಗಳಿಗೆ ಸಂಬಂಧಿಸಿದಂತೆ ಅಪ್‌ಡೇಟ್ಸ್ ಹೊಂದಿರುವುದು ಒಳಿತೆನ್ನಲಾಗಿದೆ. ಇದನ್ನೂ ಓದಿ: ಷೇರು ಮಾರುಕಟ್ಟೆ ಅಪ್‌ಡೇಟ್: ಹೊಸ ವರ್ಷದ ಹಿನ್ನಲೆ - ವಹಿವಾಟು ನಡೆಯಲಿವೆಯೇ ಇಲ್ಲವೇ!?
ವಿಷೇಶ ಸೂಚನೆ: ಈ ಲೇಖನವು ಮಾಹಿತಿಯ ಅನುಸಾರ ಹಂಚಿಕೊಳ್ಳಲಾಗಿದ್ದು, ಇದನ್ನು ಅನುಸರಿಸುವ ಮುನ್ನ ಸೂಕ್ತ ತಜ್ಞರನ್ನು ಸಂಪರ್ಕಿಸಿ ಸಲಹೆ ಪಡೆಯುವುದು ಉತ್ತಮ. ಯಾವುದೇ ನಷ್ಟವಾದ ಸಂದರ್ಭದಲ್ಲಿ ಇದಕ್ಕೆ InsightRush ಜವಾಬ್ದಾರನಾಗಿರುವುದಿಲ್ಲ.