Skip to main content
ವಿಡಿಯೋ
1/2
cinema

ಗ್ಲಾಮರ್ ಮತ್ತು ಗಂಭೀರತೆ ಸಂಯೋಜನೆ – ‘ಟಾಕ್ಸಿಕ್’ನಲ್ಲಿ ರುಕ್ಮಿಣಿ ವಸಂತ್ ಪಾತ್ರದ ಫಸ್ಟ್ ಲುಕ್ ಔಟ್

By Ram Chethan
ಗ್ಲಾಮರ್ ಮತ್ತು ಗಂಭೀರತೆ ಸಂಯೋಜನೆ – ‘ಟಾಕ್ಸಿಕ್’ನಲ್ಲಿ ರುಕ್ಮಿಣಿ ವಸಂತ್ ಪಾತ್ರದ ಫಸ್ಟ್ ಲುಕ್ ಔಟ್

ಯಶ್ ನಟಿಸಿ ಸಹ ನಿರ್ಮಾಣ ಮಾಡುತ್ತಿರುವ ಬಹು ನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದಲ್ಲಿ ರುಕ್ಮಿಣಿ ವಸಂತ್ ಅವರ ಕ್ಯಾರೆಕ್ಟರ್ ಪೋಸ್ಟರ್ ಬಿಡುಗಡೆಯಾಗಿದೆ. ಗಂಭೀರ ಲುಕ್‌ನೊಂದಿಗೆ ಮೆಲಿಸಾ ಪಾತ್ರದಲ್ಲಿ ಕಾಣಿಸಿಕೊಂಡಿರುವ ರುಕ್ಮಿಣಿ, ತಮ್ಮ ವಿಭಿನ್ನ ಪಾತ್ರದಿಂದ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದ್ದಾರೆ.

ಯಶ್ ನಟಿಸಿ ಹಾಗೂ ಸಹ ನಿರ್ಮಾಣ ಮಾಡುತ್ತಿರುವ ‘ಟಾಕ್ಸಿಕ್’ ಸಿನಿಮಾ ಈಗಾಗಲೇ ಭಾರತೀಯ ಚಿತ್ರರಂಗದಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದೆ. ಮಾರ್ಚ್ 19ರಂದು ಸಿನಿಮಾ ಬಿಡುಗಡೆಯಾಗಲಿದ್ದು, ಪ್ರಚಾರ ಕಾರ್ಯಗಳು ಹಂತ ಹಂತವಾಗಿ ಆರಂಭವಾಗಿವೆ. ಅದರ ಭಾಗವಾಗಿ ಸಿನಿಮಾದಲ್ಲಿನ ಪ್ರಮುಖ ನಟಿಯರ ಕ್ಯಾರೆಕ್ಟರ್ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಾಗುತ್ತಿದೆ.

ಇದುವರೆಗೆ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ ಮತ್ತು ತಾರಾ ಸುತಾರಿಯಾ ಅವರ ಪೋಸ್ಟರ್‌ಗಳು ಬಿಡುಗಡೆಯಾಗಿವೆ. ಇದೀಗ ನಟಿ ರುಕ್ಮಿಣಿ ವಸಂತ್ ಅವರ ಕ್ಯಾರೆಕ್ಟರ್ ಪೋಸ್ಟರ್ ಕೂಡ ಬಿಡುಗಡೆಯಾಗಿದೆ. ಈ ಪೋಸ್ಟರ್ ಅನ್ನು ನಟ ಯಶ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.Arayna Women's Cotton Printed Floral Straight Kurta with Palazzo Pants and Dupatta

ಪೋಸ್ಟರ್‌ನಲ್ಲಿ ರುಕ್ಮಿಣಿ ವಸಂತ್ ತುಸು ಗ್ಲಾಮರಸ್ ವೇಷದಲ್ಲಿ ಗಂಭೀರವಾಗಿ ಕಾಣಿಸಿಕೊಂಡಿದ್ದಾರೆ. ಅವರ ಮುಖಭಾವ ಮತ್ತು ನಡವಳಿಕೆ ನೋಡಿದರೆ ಪಾತ್ರಕ್ಕೆ ಒಂದು ಡೀಪ್ ಮತ್ತು ಸೀರಿಯಸ್ ಶೇಡ್ ಇರುವಂತೆ ಅನಿಸುತ್ತದೆ. ರುಕ್ಮಿಣಿ ವಸಂತ್ ‘ಟಾಕ್ಸಿಕ್’ ಸಿನಿಮಾದಲ್ಲಿ ಮೆಲಿಸಾ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಪೋಸ್ಟರ್‌ನಲ್ಲಿ ಅವರು ಯಾವುದೋ ಪಾರ್ಟಿ ವಾತಾವರಣದ ನಡುವೆ ಶಾಂತ ಆದರೆ ಗಂಭೀರವಾಗಿ ನಡೆದು ಬರುತ್ತಿರುವುದು ಗಮನ ಸೆಳೆಯುತ್ತದೆ. ತಾರಾ ಸುತಾರಿಯಾ ಪಾತ್ರ ಕೈಯಲ್ಲಿ ಬಂದೂಕು ಹಿಡಿದಿರುವುದಕ್ಕೆ ಭಿನ್ನವಾಗಿ, ರುಕ್ಮಿಣಿ ಕೈಯಲ್ಲಿ ಪರ್ಸ್ ಹಿಡಿದಿದ್ದಾರೆ. ಇದರಿಂದ ಅವರ ಪಾತ್ರ ರಫ್ ಆಗಿಲ್ಲದಿದ್ದರೂ, ಬಹಳ ಪ್ರಾಮುಖ್ಯತೆ ಇರುವ ಪಾತ್ರ ಎಂದು ಊಹಿಸಬಹುದು.ಇದನ್ನು ಓದಿ:ಬಿಗ್ ಬಾಸ್ ಕನ್ನಡ 12: ಧ್ರುವಂತ್–ಗಿಲ್ಲಿ ಮುಖಾಮುಖಿ ಟಾಸ್ಕ್… ಟಾಪ್ 6 ಕನಸಿನ ಓಟದಲ್ಲಿ ಗೆದ್ದವರು ಯಾರು?

‘ಟಾಕ್ಸಿಕ್’ ಸಿನಿಮಾವನ್ನು ಗೀತು ಮೋಹನ್‌ದಾಸ್ ನಿರ್ದೇಶನ ಮಾಡಿದ್ದು, ಕೆವಿಎನ್ ಪ್ರೊಡಕ್ಷನ್ಸ್ ಬಂಡವಾಳ ಹೂಡಿದೆ. ಯಶ್ ಅವರು ತಮ್ಮ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಮೂಲಕ ಸಹ ನಿರ್ಮಾಣ ಮಾಡಿದ್ದಾರೆ. ಸಿನಿಮಾಗೆ ರವಿ ಬಸ್ರೂರು ಸಂಗೀತ ನೀಡಿದ್ದಾರೆ. ಕೆಲವು ವಿದೇಶಿ ತಂತ್ರಜ್ಞರು ಸಹ ಈ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ.

ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ಟಾಕ್ಸಿಕ್’ ಸಿನಿಮಾ ಮಾರ್ಚ್ 19ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.