Skip to main content
ವಿಡಿಯೋ
entertainment

‘ಬಿಗ್ ಬಾಸ್’ ನಂತರ ವೀಕೆಂಡ್ ಫನ್...ಸಾಧು ಕೋಕಿಲ–ಶ್ರುತಿ ಜೊತೆಗೆ ಸೃಜನ್ ಲೋಕೇಶ್ ಹೊಸ ಶೋ..!

By Ram Chethan
‘ಬಿಗ್ ಬಾಸ್’ ನಂತರ ವೀಕೆಂಡ್ ಫನ್...ಸಾಧು ಕೋಕಿಲ–ಶ್ರುತಿ ಜೊತೆಗೆ ಸೃಜನ್ ಲೋಕೇಶ್ ಹೊಸ ಶೋ..!

‘ಬಿಗ್ ಬಾಸ್ ಕನ್ನಡ ಸೀಸನ್ 12’ ಜನವರಿ 17 ಮತ್ತು 18ರಂದು ಪ್ರಸಾರವಾದ ಬಳಿಕ ವೀಕೆಂಡ್ ಮನರಂಜನೆಗಾಗಿ ಹೊಸ ರಿಯಾಲಿಟಿ ಶೋ ಆರಂಭವಾಗಲಿದೆ. ಸೃಜನ್ ಲೋಕೇಶ್ ನೇತೃತ್ವದಲ್ಲಿ, ಸಾಧು ಕೋಕಿಲ ಹಾಗೂ ಶ್ರುತಿ ಜೊತೆಗೂಡಿ ‘ಗಿಚ್ಚಿ ಗಿಲಿಗಿಲಿ ಜೂನಿಯರ್ಸ್’ ಪುಟ್ಟ ಪ್ರತಿಭೆಗಳಿಗೆ ವೇದಿಕೆ ಒದಗಿಸಲಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ ಜನವರಿ 17 ಮತ್ತು 18ರಂದು ಪ್ರಸಾರವಾಗಲಿದೆ. ಈ ಶೋ ಮುಗಿದ ನಂತರ ವೀಕೆಂಡ್ ದಿನಗಳಲ್ಲಿ ಪ್ರೇಕ್ಷಕರಿಗೆ ಮನರಂಜನೆ ನೀಡಲು ಹೊಸ ರಿಯಾಲಿಟಿ ಶೋ ಒಂದನ್ನು ವಾಹಿನಿ ಸಿದ್ಧಪಡಿಸಿದೆ. ಆ ಶೋವೇ ‘ಗಿಚ್ಚಿ ಗಿಲಿಗಿಲಿ ಜೂನಿಯರ್ಸ್’. ಮಕ್ಕಳ ಪ್ರತಿಭೆಗೆ ವೇದಿಕೆ ನೀಡುವ ಈ ಶೋ ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿದೆ.Arayna Women's Cotton Printed Floral Straight Kurta with Palazzo Pants and Dupatta

ಈ ರಿಯಾಲಿಟಿ ಶೋಗೆ ಜನಪ್ರಿಯ ನಿರೂಪಕ ಸೃಜನ್ ಲೋಕೇಶ್ ನೇತೃತ್ವ ವಹಿಸಿಕೊಂಡಿದ್ದಾರೆ. ಅವರೊಂದಿಗೆ ಹಿರಿಯ ನಟ ಸಾಧು ಕೋಕಿಲ ಮತ್ತು ನಟಿ ಶ್ರುತಿ ಕೂಡ ಶೋನ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಕ್ಕಳ ನಟನೆ, ಹಾಸ್ಯ ಹಾಗೂ ಸೃಜನಶೀಲತೆಯನ್ನು ಆಧಾರವಾಗಿ ಇಟ್ಟುಕೊಂಡು ಈ ಶೋ ರೂಪುಗೊಂಡಿದ್ದು, ವೀಕೆಂಡ್‌ಗಳಲ್ಲಿ ಕುಟುಂಬ ಸಮೇತ ಕುಳಿತು ನೋಡುವಂತ ಕಾರ್ಯಕ್ರಮವಾಗಲಿದೆ. ‘ಗಿಚ್ಚಿ ಗಿಲಿಗಿಲಿ ಜೂನಿಯರ್ಸ್’ ಮೂಲಕ ಪುಟ್ಟ ಪ್ರತಿಭೆಗಳು ಮತ್ತೆ ಪ್ರೇಕ್ಷಕರ ಮನ ಗೆಲ್ಲುವ ನಿರೀಕ್ಷೆ ಇದೆ.