ಪಶ್ಚಿಮ ಬಂಗಾಳದಲ್ಲಿ ಮುಂಬರಲಿರುವ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ, ಇತ್ತೀಚೆಗೆ ನಡೆಸಲಾದ ಸಮೀಕ್ಷೆಯೊಂದರ ವರದಿಯ ಪ್ರಕಾರ, ಮಮತಾ ಬ್ಯಾನರ್ಜಿ ಅವರ ಆಡಳಿತಾರೂಢ ಪಕ್ಷವಾದ ತೃಣಮೂಲ ಕಾಂಗ್ರೆಸ್ (TMC) ಮತದಾರರ ಒಲವಿಲ್ಲದಿದ್ದರೂ ( ಮತದಾರರ ದಣಿವು - Voter’s Fatigue) ಇತರ ಪಕ್ಷಗಳಿಗಿಂತಲೂ ಮುಂದಿದೆ ಎನ್ನಲಾಗಿದೆ.
ರಾಜಕೀಯ ವಿಶ್ಲೇಷಕರ ಪ್ರಕಾರ, ಸುದೀರ್ಘ ಕಾಲದ ಅಧಿಕಾರದಲ್ಲಿರುವ ಮಮತಾ ಅವರ, ಜನಪ್ರಿಯತೆ ಹಾಗೂ ವೈಯಕ್ತಿಕ ವರ್ಚಸ್ಸು ಕುಂದಿಲ್ಲ. ಬಂಗಾಳದ ಮಹಿಳಾ ಮತದಾರರು ಹಾಗೂ ಗ್ರಾಮೀಣ ಭಾಗದ ಜನರು ಅವರಲ್ಲಿ ಗಟ್ಟಿಯಾದ ನಂಬಿಕೆಯಿರಿಸಿದ್ದಾರೆ ಎಂದು ಸಮೀಕ್ಷೆಯು ಸೂಚಿಸಿದೆ.
ವೈಲ್ಡ್ ಕಾರ್ಡ್ ಆಗಿ ಹುಮಾಯೂನ್ ಕಬೀರ್ -
ಟಿಎಂಸಿ ಪಕ್ಷದಿಂದ ಅಮಾನತುಗೊಂಡಿರುವ ಶಾಸಕ ಹುಮಾಯೂನ್ ಕಬೀರ್ ಇತ್ತೀಚೆಗೆ, ʻಜನತಾ ಉನ್ನಯನ ಪಾರ್ಟಿ - JUPʼ ಎಂಬ ಹೆಸರಿನ ಪಕ್ಷವನ್ನು ಸ್ಥಾಪಿಸಿದ್ದಾರೆ. ಇದು ಚುನಾವಣೆಯಲ್ಲಿ ಅವರ ವೈಲ್ಡ್‌ಕಾರ್ಡ್ ಎಂಟ್ರಿಯಾಗಲಿದ್ದು, ಟಿಎಂಸಿಯ ಮತಬ್ಯಾಂಕ್ ವಿಭಜಿಸುವ ಸಾಧ್ಯತೆಯಿದೆ ಎನ್ನಲಾಗಿದೆ. Van Heusen Women's Polyester Regular Fit Proactive Anti Bacterial T-Shirt - Round Neck, Moisture Wicking, Short Sleeve
ಚುನಾವಣಾ ಆಯೋಗದ ಸಂದೇಹಾಸ್ಪದ ಸಾಫ್ಟ್‌ವೇರ್ -
ಚುನಾವಣಾ ಆಯೋಗದ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಪರೀಕ್ಷಿಸಲ್ಪಡದ ಸಾಫ್ಟ್‌ವೇರ್‌ನಿಂದಾಗಿ ಅಲ್ಲಿನ 1.31 ಕೋಟಿ ಹಾಗೂ ಮಧ್ಯ ಪ್ರದೇಶದ 2.35 ಕೋಟಿ ಮತದಾರರನ್ನು ಅನುಮಾನಾಸ್ಪದರು ಎಂದು ಗುರುತಿಸುವ ಮೂಲಕ ಮತದಾನದ ಹಕ್ಕನ್ನು ಅಪಾಯದಲ್ಲಿರಿಸಿದೆ ಎಂದು ವರದಿಯೊಂದು ವಿಶ್ಲೇಷಿಸಿದೆ. ಇದನ್ನೂ ಓದಿ: ಮಹಾರಾಷ್ಟ್ರ ಚುನಾವಣೆ: ಪುಣೆಯಲ್ಲಿ ಜನಬೆಂಬಲ ಕೋರಿದ ಅಜಿತ್ ಪವಾರ್..!