Skip to main content
ವಿಡಿಯೋ
politics

2026 ಕರ್ನಾಟಕದಲ್ಲಿ ನಡೆಯಲಿರುವ ಚುನಾವಣೆಗಳ ಕುರಿತ ಸಮಗ್ರ ಮಾಹಿತಿ

By Shravanthi R
2026 ಕರ್ನಾಟಕದಲ್ಲಿ ನಡೆಯಲಿರುವ ಚುನಾವಣೆಗಳ ಕುರಿತ ಸಮಗ್ರ ಮಾಹಿತಿ

ರಾಜ್ಯಕ್ಕೆ ಚುನಾವಣಾ ಹಿನ್ನಲೆಯಲ್ಲಿ, ಮಹತ್ವದ ವರ್ಷವಾಗಲಿದೆ. ರಾಜ್ಯದಲ್ಲಿ 7 ವಿವಿಧ ಚುನಾವಣೆಗಳು ನಡೆಯಲಿದ್ದು, ರಾಜಕೀಯ ಘಟ್ಟದಲ್ಲಿ ಚುನಾವಣಾ ಹಬ್ಬ ಜರುಗಲಿದೆ ಎಂದು ತಿಳಿಸಲಾಗಿದೆ.

ಕರ್ನಾಟಕದಲ್ಲಿ 2023 ರಲ್ಲಿ ವಿಧಾನಸಭಾ ಚುನಾವಣೆ, 2024ರಲ್ಲಿ ಲೋಕಸಭಾ ಚುನಾವಣೆ ಹಾಗೂ 2025ರಲ್ಲಿ ಯಾವುದೇ ದೊಡ್ಡ ಮಟ್ಟದ ಚುನಾವಣೆ ನಡೆಯಲಿಲ್ಲ. ಆದರೆ, ಈ ವರ್ಷ 2026ರಲ್ಲಿ ಬರೋಬ್ಬರಿ 7 ವಿವಿಧ ಚುನಾವಣೆಗಳು ನಡೆಯಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. 

ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿಗಳಿಗೆ ಚುನಾವಣೆ ನಡೆಸಲು ಅಗತ್ಯ ಸಿದ್ದತೆಗಳನ್ನು ನಡೆಸಲು ಪ್ರಸ್ತಾಪಿಸಲಾಗಿತ್ತು. ಈ ಹಿಂದೆ 2016 ಏಪ್ರಿಲ್‌ನಲ್ಲಿ ಚುನಾವಣೆ ನಡೆದಿತ್ತು. ಆಯ್ಕೆಯಾಗಿದ್ದ ಸದಸ್ಯರ ಅವಧಿ 2021 ಕ್ಕೆ ಮುಕ್ತಾಯಗೊಂಡಿತ್ತಾದರೂ, ಸುಮಾರು ಐದು ವರ್ಷ, ಚುನಾವಣೆ ನಡೆಸಲು ವಿಳಂಬವಾಗಿತ್ತು. ಇದೀಗ 2026ರ ಏಪ್ರಿಲ್‌ ಅವಧಿಗೂ ಮುನ್ನವೇ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗಕ್ಕೆ ಸಹಕರಿಸುವಂತೆ ಸೂಚಿಸಲಾಗಿದೆ. 

ಅದರಂತೆ, ರಾಜಧಾನಿ ಬೆಂಗಳೂರಿನಿಂದ ಹಿಡಿದು ಗ್ರಾಮಗಳವರೆಗೂ ಎಲ್ಲಾ ಸ್ಥಳೀಯ ಸಂಸ್ಥೆಗಳ ಆಡಳಿತದಲ್ಲಿ ಬದಲಾವಣೆಯಾಗಲಿದೆ ಎನ್ನಲಾಗಿದೆ. ಕೊನೆಯದಾಗಿ, ಡಿಸೆಂಬರ್‌ 2020 ರಲ್ಲಿ ನಡೆದಿತ್ತು. ಇದೀಗ 2026ರ ಬೇಸಿಗೆ ಮುಗಿಯುವುದರೊಳಗೆ ಚುನಾವಣೆ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. Amazon Brand - INKAST Women's Cropped T-Shirt for Casual wear, Gym & Everyday Wear | Comfortable & Stylish Fit Crop Top| Activewear Crop Tops for Women & Girls for Workout.

ಈ ಕುರಿತಾಗಿ ತಯಾರಿ ನಡೆಸಿದ್ದರೂ ಕ್ಷೇತ್ರ ಮರುವಿಗಂಡಣೆ, ತಾಂತ್ರಿಕ ಕಾರಣಗಳು ಹಾಗೂ ಮೀಸಲಾತಿ ಹಂಚಿಕೆ ಪರಿಣಾಮ ಚುನಾವಣೆಗಳನ್ನು ನಡೆಸಲು ವ್ಯತ್ಯಾಸ ಉಂಟಾಗಿತ್ತು. ಇದೀಗ, ಜನಪ್ರತಿನಿಧಿಗಳಿಲ್ಲದೇ ನಡೆಯುತ್ತಿದ್ದ ವ್ಯವಸ್ಥೆಗೆ ಬ್ರೇಕ್‌ ಹಾಕಲು ಸುಸಂದರ್ಭ ಬರುತ್ತಲಿದೆ. ಈ ಬಗ್ಗೆ ಸಂಭಾವ್ಯ ಚುನಾವಣೆಗಳ ಮಾಹಿತಿ ಈ ಕೆಳಗಿನಂತಿವೆ:

  1. ತಾಲ್ಲೂಕು ಪಂಚಾಯತಿ ಚುನಾವಣೆ - 239 ತಾಲೂಕು - 3,671 ಕ್ಷೇತ್ರಗಳು - ಏಪ್ರಿಲ್‌ಗೆ ಚುನಾವಣಾ ದಿನಾಂಕ ನಿಗದಿಯಾಗಲಿದೆ ಎನ್ನಲಾಗಿದೆ. 

  2. ಜಿಲ್ಲಾ ಪಂಚಾಯತಿ ಚುನಾವಣೆ - 31 ಜಿಲ್ಲೆ - 1,130 ಕ್ಷೇತ್ರಗಳು

  3. ಗ್ರಾಮ ಪಂಚಾಯತಿ ಚುನಾವಣೆ - 6000+ ವಾರ್ಡ್‌ಗಳು

  4. ಪಟ್ಟಣ ಪಂಚಾಯತಿ, ಪುರಸಭೆ, ನಗರ ಸಭೆ ಚುನಾವಣೆ (ನಗರ ಸ್ಥಳೀಯ ಸಂಸ್ಥೆ) - 185 ಕ್ಷೇತ್ರಗಳು

  5. ಜಿಬಿಎ ಪಾಲಿಕೆ ಚುನಾವಣೆ (ಗ್ರೇಟರ್ ಬೆಂಗಳೂರು ಪ್ರಾಧಿಕಾರ) - 5 ಪಾಲಿಕೆ - 369 ವಾರ್ಡ್‌ಗಳು

  6. ಮಹಾ ನಗರ ಪಾಲಿಕೆ ಚುನಾವಣೆ - 5 ಪಾಲಿಕೆ

  7. ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ - 2 ಕ್ಷೇತ್ರಗಳು

ಬ್ಯಾಲೆಟ್‌ ಪೇಪರ್‌ ಬಳಕೆ

ರಾಜ್ಯ ಚುನಾವಣಾ ಆಯೋಗವು ನಡೆಸಲಿರುವ ಈ ಎಲ್ಲಾ ಚುನಾವಣೆಗಳಿಗೂ ಇವಿಎಂ ಬದಲಾಗಿ, ಮತಪತ್ರ (ಬ್ಯಾಲೆಟ್‌ ಪೇಪರ್‌) ಬಳಸಲು ನಿರ್ಧರಿಸಿದ್ದು, ಮುಂಬರುವ ಚುನಾವಣೆಗಳಲ್ಲಿ ಸಾಂಪ್ರಾದಾಯಿಕ ಬ್ಯಾಲೆಟ್‌ ಪೇಪರ್‌ ಬಳಕೆಯಾಗಲಿದೆ ಎಂದು ತಿಳಿಸಲಾಗಿದೆ. 

ಗ್ರಾಮ ಮಟ್ಟದಲ್ಲಿ ಚುನಾವಣೆಗಳನ್ನು ನಡೆಸುವ ಸರ್ಕಾರದ ಚಿಂತನೆ ಕುರಿತ ಮಹತ್ವದ ನಿರೀಕ್ಷೆಗಳು ರಾಜಕೀಯ ಪಲ್ಲಟಗಳಿಗೆ ಕಾರಣವಾಗಿ ಸವಾಲೆಸಗಲಿದೆ ಎನ್ನಲಾಗಿದೆ. ಇದನ್ನೂ ಓದಿ: ಸುಂಕದ ಸಮರ: "ನನ್ನ ಮೇಲೆ ಪ್ರಧಾನಿ ಮೋದಿ ಅಸಮಾಧಾನಗೊಂಡಿದ್ದಾರೆ" - ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಫೋಟಕ ಹೇಳಿಕೆ