ತಂತ್ರಜ್ಞಾನದ ವಿಸ್ತಾರವು ದಿನದಿಂದ ದಿನಕ್ಕೆ ಹೊಸ ಮೈಲಿಗಲ್ಲು ಸಾಧಿಸುತ್ತಿದೆ. ಇದೀಗ ʻಫಿಸಿಕಲ್ ಎಐʼ ಸರದಿ ಬಂದಿದೆ. ವಿಶ್ವದ ಪ್ರಮುಖ ಸ್ಮಾರ್ಟ್‌ಫೋನ್ ಚಿಪ್ ವಿನ್ಯಾಸಗೊಳಿಸುವ ಕಂಪನಿಯಾಗಿರುವ ʻಆರ್ಮ್ʼ ಉತ್ಪಾದನಾ ಹಾಗೂ ಸ್ವಯಂಚಾಲಿತ ತಂತ್ರಜ್ಞಾನ ಕ್ಷೇತ್ರದಲ್ಲಿ ಬಹುನಿರೀಕ್ಷಿಯನ್ನಿರಿಸಿದೆ. ಇದು ಪರಿಚಯಿಸುತ್ತಲಿರುವ ʻಫಿಸಿಕಲ್ ಎಐʼ ಎನ್ನುವ ತಂತ್ರಜ್ಞಾನ, ಹೊಸ ಸಂಚಲನ ಮೂಡಿಸಿದೆ.
ಫಿಸಿಕಲ್ ಎಐ ಎಂದರೇನು?
ಇದೊಂದು ಹೊಸ ನಮೂನೆಯ ತಂತ್ರಜ್ಞಾನ ಪರಿಕರವಾಗಿದ್ದು, ಕೇವಲ ಚಾಟ್‌ಬಾಟ್‌ಗಳು ಹಾಗೂ ಸಾಫ್ಟ್‌ವೇರ್‌ಗಳಿಗೆ ಸೀಮಿತವಾಗಿದ್ದ ಕೃತಕಬುದ್ದಿಮತ್ತೆಯನ್ನು (AI) ಇದೀಗ, ಭೌತಿಕ ಲೋಕಕ್ಕೆ ತರುವ ಉದ್ದೇಶದಿಂದ ಕೂಡಿದೆ. ರೋಬೋಟ್‌ಗಳು, ಸ್ವಯಂ-ಚಾಲಿತ ವಾಹನಗಳು ಹಾಗೂ ಕೈಗಾರಿಕಾ ಯಂತ್ರಗಳು ಮನುಷ್ಯನು ಪರಿಸರವನ್ನು ಗ್ರಹಿಸುವಂತೆ, ಕೆಲಸ ಮಾಡುವಂತ ತಂತ್ರಜ್ಞಾನವಿದಾಗಿದೆ. Lenovo IdeaPad Slim 5 Intel Core Ultra 7 155H (16GB RAM/1TB SSD/16 (40.6cm)/WUXGA IPS/Windows 11/Office Home 2024/Backlit Keyboard/1Yr ADP Free/Grey/1.82Kg), 83DC0094IN
ಈಗಾಗಲೇ, ಜಾಗತಿಕವಾಗಿ ಚಿಪ್ ತಯಾರಕ ಹಾಗೂ ವಿನ್ಯಾಸದಲ್ಲಿ ಮುಂಚೂಣಿಯಲ್ಲಿರುವ ಆರ್ಮ್ ಕಂಪನಿಯು, ತನ್ನ ಮಾರುಕಟ್ಟೆ ವಿಸ್ತರಣೆಗಾಗಿ, ರೋಬೋಟಿಕ್ಸ್, ವಾಹನ ಉದ್ದಿಮೆ ಹಾಗೂ ಕೈಗಾರಿಕಾ ಕ್ಷೇತ್ರಗಳಲ್ಲಿ ಲಗ್ಗೆಯಿಡುವ ಯೋಜನೆಯನ್ನು ಹಾಕಿಕೊಂಡಿದೆ. ಇದರ ಭಾಗವಾಗಿ, ಸಂಶೋಧನೆ ಮತ್ತು ಅಭಿವೃದ್ದಿ ವಿಭಾಗದಲ್ಲಿ ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡುತ್ತಿದೆ ಎನ್ನಲಾಗಿದೆ.
ಭವಿಷ್ಯದಲ್ಲಿ ರೋಬೋ-ಟೆಕ್ ಹಾಗೂ ಆಟೋಮೇಕರ್ಸ್‌ಗಳ ಗಮನ ಸೆಳೆಯುವಲ್ಲಿ ʻಫಿಸಿಕಲ್ ಎಐʼ ಪಾತ್ರವಿದೆ ಎನ್ನಲಾಗುತ್ತಿದ್ದು, ಈ ಬಗ್ಗೆ ಷೇರು ಮಾರುಕಟ್ಟೆಯಲ್ಲಿಯೂ ಇದರ ಪ್ರಭಾವ ಬೀರಿರುವ ಸುದ್ದಿಗಳು ಹರಿದಾಡಿದೆ. ಇದನ್ನೂ ಓದಿ: ಇವಿಎಂ ಬಳಕೆ ಕುರಿತ ಸಮೀಕ್ಷೆ - ಚುನಾವಣಾ ಆಯೋಗದ ಸ್ಪಷ್ಟನೆ ಏನು!?