Skip to main content
ವಿಡಿಯೋ
general

ದೇಶದ ಆರ್ಥಿಕ ಬೆಳವಣಿಗೆ - ಶೇ.7.4 ಜಿಡಿಪಿ - ಕೇಂದ್ರ ಸರ್ಕಾರದ ಅಂದಾಜು

By Shravanthi R
ದೇಶದ ಆರ್ಥಿಕ ಬೆಳವಣಿಗೆ - ಶೇ.7.4 ಜಿಡಿಪಿ - ಕೇಂದ್ರ ಸರ್ಕಾರದ ಅಂದಾಜು

ಪ್ರಸಕ್ತ ಹಣಕಾಸು ವರ್ಷವಾದ 2025-26 ರಲ್ಲಿ ಜಿಡಿಪಿ - ಒಟ್ಟು ದೇಶಿಯ ಉತ್ಪನ್ನವು ಶೇ.7.4ರಷ್ಟಿರಲಿದೆ ಎಂದು ಕೇಂದ್ರ ಸರ್ಕಾರವು ಅಂದಾಜು ಮುಂಗಡವನ್ನು ಬಿಡುಗಡೆ ಮಾಡಿದೆ.

ಪ್ರಸಕ್ತ ಹಣಕಾಸು ವರ್ಷವಾದ 2025-26 ರಲ್ಲಿ ಜಿಡಿಪಿ - ಒಟ್ಟು ದೇಶಿಯ ಉತ್ಪನ್ನವು ಶೇ.7.4ರಷ್ಟಿರಲಿದೆ ಎಂದು ಕೇಂದ್ರ ಸರ್ಕಾರವು ಅಂದಾಜು ಮುಂಗಡವನ್ನು ಬಿಡುಗಡೆ ಮಾಡಿದೆ. ಈ ಮೂಲಕ ಇತರೆ ದೇಶಗಳ ಅರ್ಥವ್ಯವಸ್ಥೆಗಳಿಗೆ ಪೈಪೋಟಿ ನೀಡಲಿದೆ ಎನ್ನಲಾಗಿದೆ. 

ಈ ಹಿಂದಿನ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆಯು 6.5% ರಷ್ಟಿದೆ ಎನ್ನಲಾಗಿತ್ತು. ಸೇವಾ ವಲಯ ಹಾಗೂ ತಯಾರಕ ವಲಯಗಳಲ್ಲಿನ ಬೆಳವಣಿಗೆಯಿಂದಾಗಿ ಕಳೆದ ವರ್ಷಕ್ಕಿಂತ ಈ ಬಾರಿ ಬೆಳವಣಿಗೆ ಮುಂದುವರೆಯಲಿದೆ ಎಂದು ತಿಳಿಸಲಾಗಿದೆ. 

ಕೇಂದ್ರ ಸರ್ಕಾರವು ಮುಂದಿನ ಹಣಕಾಸು ವರ್ಷದ ಬಜೆಟ್‌ನ್ನು ಫೆಬ್ರವರಿ 1ರಂದು ಮಂಡಿಸುವ ನಿರೀಕ್ಷೆಯಿದ್ದು, ಈ ನಿಟ್ಟಿನಲ್ಲಿ ಮುಂಗಡ ಅಂದಾಜನ್ನು ಬುಧವಾರ(ಜ.07)ರಂದು ಪ್ರಕಟಿಸಿದೆ. ಈ ಬೆಳವಣಿಗೆಯೂ ಮುಂದಿನ ದಿನಮಾನದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಹೂಡಿಕೆ ಮತ್ತು ಅಭಿವೃದ್ದಿಯ ನಿರೀಕ್ಷೆಯನ್ನು ಹೆಚ್ಚಿಸಲಿದೆ ಎನ್ನಲಾಗಿದೆ. OnePlus 15 | 16GB+512GB | Infinite Black | India's First Snapdragon® 8 Elite Gen 5 | 7300mAh Battery | Personalised AI | Game-Changing 165Hz Display | Triple 50MP Camera with 4K 120fps Dolby Vision

ರಾಷ್ಟ್ರೀಯ ಅಂಕಿ-ಅಂಶ ಕಾರ್ಯಾಲಯದ (NSO) ಪ್ರಕಾರ, ಜಾಗತಿಕ ಆರ್ಥಿಕ ಅಸ್ಥಿರತೆಯ ನಡುವಲ್ಲಿಯೂ ಭಾರತದ ಆರ್ಥಿಕ ಪ್ರಗತಿ ಮುಟ್ಟುತಲಿದೆ ಎನ್ನಲಾಗಿದೆ. ಆರ್‌ಬಿಐನ ಇತ್ತೀಚೆಗಿನ ಪರಾಮರ್ಶೆಯ ಪ್ರಕಾರ, ಆರ್ಥಿಕತೆಯು ಸ್ಥಿರತೆಯನ್ನು ಕಂಡುಕೊಳ್ಳುವ ಹಾದಿಯಲ್ಲಿ ಸಾಗುತ್ತಿದ್ದು, ಹಣದುಬ್ಬರ ನಿಯಂತ್ರಣದಿಂದ ಗ್ರಾಹಕ ವೆಚ್ಚ ಸಾಮರ್ಥ್ಯವನ್ನು ಹೆಚ್ಚಿಸಿದೆ ಎನ್ನಲಾಗಿದೆ. ಇದನ್ನೂ ಓದಿ: ಡಿಜಿಟಲ್ ಸಾಲದ ಆ್ಯಪ್‌ಗಳಿಂದ ದತ್ತಾಂಶ ಸೋರಿಕೆ ಆರೋಪ: ಆರ್‌ಬಿಐಗೆ ದೆಹಲಿ ಹೈಕೋರ್ಟ್ ನೋಟಿಸ್!