ಕೇರಳ ವಿಧಾನಸಭಾ ಚುನಾವಣೆಯ ಕಣ ರಂಗೇರುತ್ತಿದೆ , ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕ್ರಿಶ್ಚಿಯನ್ ಮತದಾರರನ್ನು ಸೆಳೆಯಲು ಒಂದು ಪ್ರಮುಖ ರಾಜಕೀಯ ದಾಳವನ್ನು ಉರುಳಿಸಿದ್ದಾರೆ.
ನ್ಯಾಯಮೂರ್ತಿ ಜೆ.ಬಿ. ಕೋಶಿ ಆಯೋಗದ ಜಾರಿಗೆ ತರುವ ನಿಟ್ಟಿನಲ್ಲಿ ತಮ್ಮ ಸರ್ಕಾರ ಕೈಗೊಂಡಿದ್ದಾರೆ. ಕೇರಳದಲ್ಲಿ ಕ್ರಿಶ್ಚಿಯನ್ ಸಮುದಾಯವು ಪ್ರಭಾವಶಾಲಿ ಅಲ್ಪಸಂಖ್ಯಾತ ಗುಂಪಾಗಿದೆ.kreyam's Earrings for women Chandbali Pearl Jhumka Traditional Combo Set of 12 Pack Fancy Jhumki fashion imitation jewellery
ಆದರೆ, ಈ ಸಮುದಾಯದ ಒಳಗಿರುವ ಶೈಕ್ಷಣಿಕ ಮತ್ತು ಆರ್ಥಿಕ ಹಿಂದುಳಿದಿರುವಿಕೆಯನ್ನು ಪತ್ತೆಹಚ್ಚಲು ಮತ್ತು ಅವರ ಕಲ್ಯಾಣಕ್ಕಾಗಿ ಕೈಗೊಳ್ಳಬೇಕಾದ ಕ್ರಮಗಳನ್ನು ಶಿಫಾರಸು ಮಾಡಲು ಎಲ್‌ಡಿಎಫ್ (LDF) ಸರ್ಕಾರವು ನಿವೃತ್ತ ನ್ಯಾಯಮೂರ್ತಿ ಜೆ.ಬಿ. ಕೋಶಿ ಅವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತ್ತು.
ಕೇರಳದ ರಾಜಕೀಯದಲ್ಲಿ ಕ್ರಿಶ್ಚಿಯನ್ ಮತಗಳು ಅತ್ಯಂತ ನಿರ್ಣಾಯಕ. ಸಾಂಪ್ರದಾಯಿಕವಾಗಿ ಈ ಮತಗಳು ಕಾಂಗ್ರೆಸ್ ನೇತೃತ್ವದ ಯುಡಿಎಫ್ (UDF) ಪಾಲಾಗುತ್ತಿದ್ದವು. ಇತ್ತೀಚೆಗೆ ಬಿಜೆಪಿ ಕೂಡ ಕೇರಳದ ಕ್ರಿಶ್ಚಿಯನ್ ಸಮುದಾಯದೊಂದಿಗೆ ನಿಕಟ ಸಂಪರ್ಕ ಬೆಳೆಸಲು ಪ್ರಯತ್ನಿಸುತ್ತಿದೆ. ಇದನ್ನು ಓದಿ: ರಾಜ್ಯ ನಾಯಕತ್ವದಿಂದ ರಾಷ್ಟ್ರ ರಾಜಕಾರಣದವರೆಗೆ - ಪ್ರಹ್ಲಾದ್ ಜೋಶಿ
ಇದನ್ನು ತಡೆಯಲು ಕೋಶಿ ಆಯೋಗದ ಪಿಣರಾಯಿ ವಿಜಯನ್ ಅವರಿಗೆ ದೊಡ್ಡ ಅಸ್ತ್ರವಾಗಿದೆ. ಪಿಣರಾಯಿ ವಿಜಯನ್ ಅವರ ಈ ಘೋಷಣೆಯು ಕೇವಲ ಅಭಿವೃದ್ಧಿಯ ವಿಷಯವಲ್ಲದೆ, ಮುಂಬರುವ ಚುನಾವಣೆಯ ದೃಷ್ಟಿಯಿಂದ ಅತ್ಯಂತ ಕಾರ್ಯತಂತ್ರದ ನಡೆಯಾಗಿದೆ.
ಕೋಶಿ ಆಯೋಗದ ವರದಿಯ ಅನುಷ್ಠಾನವು ಕೇರಳದ ಕ್ರಿಶ್ಚಿಯನ್ ಸಮುದಾಯದ ಸಾಮಾಜಿಕ ಮತ್ತು ಆರ್ಥಿಕ ಚಿತ್ರಣವನ್ನು ಹೇಗೆ ಬದಲಿಸಲಿದೆ ಎಂಬುದು ಮುಂದಿನ ದಿನಗಳಲ್ಲಿ ನಿರ್ಧಾರವಾಗಲಿದೆ.ಇದನ್ನು ಓದಿ: ಪಶ್ಚಿಮ ಬಂಗಾಳದಲ್ಲಿ ಹೈಡ್ರಾಮಾ: ಇಡಿ ವಿರುದ್ಧ ವೈಯಕ್ತಿಕ ದೂರು ದಾಖಲಿಸಿದ ಮಮತಾ ಬ್ಯಾನರ್ಜಿ..!