Skip to main content
ವಿಡಿಯೋ
webstory

ʻಕ್ಲೀನ್‌ಟೆಕ್‌ʼ - ಸುಸ್ಥಿರತೆಗೆ ಸರ್ಕಾರದ ಕೊಡುಗೆಯೇನು!?

By Shravanthi R
ʻಕ್ಲೀನ್‌ಟೆಕ್‌ʼ - ಸುಸ್ಥಿರತೆಗೆ ಸರ್ಕಾರದ ಕೊಡುಗೆಯೇನು!?

ಭಾರತವು ಮಾಲಿನ್ಯ ಮುಕ್ತ ದೇಶವಾಗಿ ಹೊರಹೊಮ್ಮುವಲ್ಲಿ ʻಹಸಿರು ತಂತ್ರಜ್ಞಾನʼದ ಕಾಳಜಿ ಪ್ರಮುಖವಾಗುತ್ತದೆ. ಇದಕ್ಕಾಗಿ, ವಿಜ್ಞಾನ ಹಾಗೂ ತಂತ್ರಜ್ಞಾನಗಳು ಸರಿಸಮವಾಗಿ ಪರಿಸರ ಕಾಳಜಿಯನ್ನು ಪಾಲಿಸಬೇಕಿದೆ.

ಭಾರತವು ಮಾಲಿನ್ಯ ಮುಕ್ತ ದೇಶವಾಗಿ ಹೊರಹೊಮ್ಮುವಲ್ಲಿ ʻಹಸಿರು ತಂತ್ರಜ್ಞಾನʼದ ಕಾಳಜಿ ಪ್ರಮುಖವಾಗುತ್ತದೆ. ಇದಕ್ಕಾಗಿ, ವಿಜ್ಞಾನ ಹಾಗೂ ತಂತ್ರಜ್ಞಾನಗಳು ಸರಿಸಮವಾಗಿ ಪರಿಸರ ಕಾಳಜಿಯನ್ನು ಪಾಲಿಸಬೇಕಿದೆ. 


ಜಗತ್ತು ನಾಳಿನ ಶಾಂತಿ ಹಾಗೂ ಸಮಾನತೆಗಾಗಿ ಹಂಬಲಿಸುತ್ತಿದೆ. ಈ ನಿಟ್ಟಿನಲ್ಲಿ ಪರಿಸರದ ಕಾಳಜಿ ಮತ್ತು ಜಾಗೃತಿ ಒಡಮೂಡಬೇಕಿದೆ. ವಿಜ್ಞಾನ ಹಾಗೂ ತಂತ್ರಜ್ಞಾನಗಳು ಜ್ಞಾನಾಕ್ಷಿಯಾಗಿಯಲ್ಲದೇ ಪರಿಸರ ಸಮೃದ್ದಿಯ ವಿವೇಕವನ್ನು ತಿಳಿಸಬೇಕಿದೆ. ಇದಕ್ಕಾಗಿ, ಇಂದಿನ ನಾವಿನ್ಯತೆ ಹಾಗೂ ಪ್ರಗತಿ ಸಾಲಿನಲ್ಲಿ ಹಸಿರು ಹಾಗೂ ತಾಂತ್ರಿಕತೆ ಎರಡರ ಒಗ್ಗೂಡುವಿಕೆ ಸುಸ್ಥಿರತೆಯನ್ನು ಕಾಪಾಡಬೇಕಿದೆ. 

ಹಸಿರು ತಂತ್ರಜ್ಞಾನವೆಂದರೆ - 

ಹಸಿರು ತಂತ್ರಜ್ಞಾನವನ್ನು ʻಕ್ಲೀನ್‌ಟೆಕ್‌ʼ ಎಂದು ಕರೆಯಲಾಗುತ್ತದೆ. ಪರಿಸರದ ಮೇಲೆ ಮಾನವ ಹಿಡಿತ ಕಡಿಮೆ ಮಾಡಿ ಮತ್ತು ಮಾಲಿನ್ಯ ಕಡಿತಗೊಳಿಸುವಿಕೆಗೆ ಸಹಕರಿಸುವ, ಪರಿಸರ ಸಂರಕ್ಷಿಸುವ ಸಂಪನ್ಮೂಲಗಳನ್ನು ಹಾಗೂ ಅದಕ್ಕೆ ಪೂರಕವಾಗುವ ವಿಜ್ಞಾನ ಹಾಗೂ ತಂತ್ರಜ್ಞಾನ ಪರಿಕರಗಳು, ಉತ್ಪನ್ನಗಳು, ಸೇವೆಗಳು ಹಾಗೂ ವ್ಯವಸ್ಥೆಗಳಿಗೆ ಹಸಿರು ತಂತ್ರಜ್ಞಾನವು ಪ್ರಮುಖವಾಗಿದೆ.

ಮುಂದಿನ ಕಾಲಮಾನಕ್ಕೆ ʻನೆಟ್‌ ಝೀರೋʼ -

ನೆಟ್‌ ಝೀರೋ ಎನ್ನುವ ಕಾನ್ಸೆಪ್ಟ್‌ - ಶೂನ್ಯ ಇಂಗಾಲದ ಹೊರಸೂಸುವಿಕೆಯನ್ನು (ಕಾರ್ಬನ್‌ ಡೈ ಆಕ್ಸೈಡ್‌) ಗುರಿಯನ್ನು ಪ್ರತಿಪಾದಿಸಿದೆ. ನೈಸರ್ಗಿಕ ಹಾಗೂ ತಂತ್ರಜ್ಞಾನದ ಮೂಲಕ ಪರಿಸರದಲ್ಲಿ ಸಮತೋಲನವನ್ನು ಕಂಡುಕೊಳ್ಳುವ ಹಾಗೂ ಹವಾಮಾನ ಬದಲಾವಣೆಯಂತಹ ದುಷ್ಪರಿಣಾಮಗಳನ್ನು ತಡೆಯುವ ಆಶಯ ಹೊಂದಿದೆ. 2070 ರ ಹೊತ್ತಿಗೆ ಈ ಗುರಿ ತಲುಪುವ ಮಹದುದ್ದೇಶವನ್ನು ಸರ್ಕಾರವು ಹೊಂದಿದೆ.

ಹಸಿರು ಹೈಡ್ರೋಜನ್‌ ಪ್ರಾಮುಖ್ಯತೆ -

ನವೀಕರಿಸಬಹುದಾದ ಇಂಧನ ಮೂಲಗಳ ಬಳಸಿ, ಎಲೆಕ್ಟ್ರೋಲಿಸಿಸ್‌ - ವಿದ್ಯುದ್ವಿಭಜನೆ ಪ್ರಕ್ರಿಯೆ ಮುಖಾಂತರ ಉತ್ಪಾದಿಸಲ್ಪಡುವ ಶುಧ್ದ ಹೈಡ್ರೋಜನ್‌ ಅನ್ನು ʻಹಸಿರು ಹೈಡ್ರೋಜನ್‌ʼ ಎನ್ನುತ್ತೇವೆ. ಇದು ಸಹ ಇಂಗಾಲದ ಹೊರಸೂಸುವಿಕೆಯನ್ನು ತಡೆಗಟ್ಟುವಲ್ಲಿ ಮಹತ್ವದ ಪಾತ್ರವಹಿಸಲಿದೆ. 

ಇತ್ತೀಚೆಗೆ, ಈ ಬಗ್ಗೆ ವಿಧ ವಿಧವಾದ ಆವಿಷ್ಕಾರಗಳು ಬೆಳಕಿಗೆ ಬಂದಿದೆ. ಉದಾಹರಣೆಗೆ, ದೇಶದ ಮೊದಲ ಹೈಡ್ರೋಜನ್‌ ಟ್ರೈನ್‌ ಓಡಾಟಕ್ಕೆ ಸಜ್ಜಾಗಿದೆ. ʻಟೊಯೊಟಾ ಮಿರೈʼ ಎಂಬ ಹಸಿರು ಹೈಡ್ರೊಜನ್‌ ಹಾಗೂ ಶುಧ್ದ ಇಂಧನ ಪರಿಕಲ್ಪನೆಯ ಕಾರು ಪ್ರಚಲಿತದಲ್ಲಿದೆ. 

ಸಂಶೋಧನಾ ವಿನ್ಯಾಸಗಳು ಹಾಗೂ ಸರ್ಕಾರದ ಒತ್ತಾಸೆ -

ಎಲ್ಲಾ ವಿಧದಲ್ಲೂ ಹೊಸ ತಂತ್ರಜ್ಞಾನ ಹಾಗೂ ಸಂಶೋಧನೆಗಳ ಮೂಲಕ ಇಂಗಾಲದ ಹೊರಸೂಸುವಿಕೆಯನ್ನು ತಗ್ಗಿಸಲು ಹಾಗೂ ನವೀಕರಿಸಬಹುದಾದ ಇಂಧನಶಕ್ತಿಗಳ ಬಳಕೆ ಹೆಚ್ಚಿಸಲು ಅನೇಕ ಬೆಳವಣಿಗೆಗಳು ಕಂಡುಬರುತ್ತಲಿದೆ. ಈ ಮೂಲಕ ಪರಿಸರ ಸಂರಕ್ಷಣೆಗೆ ತಂತ್ರಜ್ಞಾನದ ಬಳಕೆ ಉತ್ತೇಜನ ಗಮನಾರ್ಹವಾಗಿದೆ. Boat Nirvana Space, 360º Spatial Audio, Active Noise Cancellation (~32dB), 100Hrs Battery,4Mics ENx, Fast Charge, v5.3 Bluetooth Earbuds, TWS Ear Buds Wireless Earphones with mic (Cosmic Black)

ಇದಕ್ಕಾಗಿ, ಕೃತಕಬುದ್ದಿಮತ್ತೆ ಸೇರಿದಂತೆ, ಹಸಿರು ಮತ್ತು ಸುರಕ್ಷಿತ ಪ್ರಪಂಚಕ್ಕಾಗಿ ಸರ್ಕಾರದ ತಾಲೀಮು ಮುಂದುವರೆದಿದೆ. ಅದರಲ್ಲಿ ಬಹುಮುಖ್ಯವಾಗಿ ರಾಷ್ಟ್ರೀಯ ಹಸಿರು ಹೈಡ್ರೋಜನ್‌ ಮಿಷನ್‌ ( National Green Hydrogen Mission) ಹಾಗೂ SIGHT (Strategic Interventions for Green Hydrogen Transition) ಕಾರ್ಯಕ್ರಮಗಳಡಿ ಉತ್ಪಾದಕತೆ ಹಾಗೂ ಆರ್ಥಿಕ ಪ್ರೋತ್ಸಾಹವನ್ನು ಬೆಂಬಲಿಸಿದೆ. ಇದನ್ನೂ ಓದಿ: ಇರಾನ್‌ನಲ್ಲಿ ಭುಗಿಲೆದ್ದ ಆಕ್ರೋಶ: 45 ಬಲಿ, ಟ್ರಂಪ್‌ರನ್ನು ಭೇಟಿಯಾಗಲಿದ್ದಾರೆಯೇ ಪ್ರಿನ್ಸ್?‌

ವಿಷೇಶ ಸೂಚನೆ: ಈ ಲೇಖನವು ಮಾಹಿತಿಯ ಅನುಸಾರ ಹಂಚಿಕೊಳ್ಳಲಾಗಿದ್ದು, ಇದನ್ನು ಅನುಸರಿಸುವ ಮುನ್ನ ಸೂಕ್ತ ತಜ್ಞರನ್ನು ಸಂಪರ್ಕಿಸಿ ಸಲಹೆ ಪಡೆಯುವುದು ಉತ್ತಮ. ಯಾವುದೇ ನಷ್ಟವಾದ ಸಂದರ್ಭದಲ್ಲಿ ಇದಕ್ಕೆ InsightRush ಜವಾಬ್ದಾರನಾಗಿರುವುದಿಲ್ಲ.